ಕುಡಿದ ಮತ್ತಿನಲ್ಲಿ ಕರ್ತವ್ಯನಿರತ ಮಹಿಳಾ ಪಿಎಸ್ಐ ಮೇಲೆ ಗ್ರಾ.ಪಂ.‌ ಸದಸ್ಯನಿಂದ ಹಲ್ಲೆ ಆರೋಪ: ಅವಾಚ್ಯವಾಗಿ ನಿಂದನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 30, 2022 | 12:08 PM

ಜಾವಗಲ್ ಠಾಣೆಯ ಮಹಿಳಾ ಪಿಎಸ್‌ಐ ಶೋಭ ಭರಮಕ್ಕನವರ್ ಮೇಲೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್​ರಿಂದ ಹಲ್ಲೆ ಆರೋಪ ಮಾಡಲಾಗಿದೆ.

ಕುಡಿದ ಮತ್ತಿನಲ್ಲಿ ಕರ್ತವ್ಯನಿರತ ಮಹಿಳಾ ಪಿಎಸ್ಐ ಮೇಲೆ ಗ್ರಾ.ಪಂ.‌ ಸದಸ್ಯನಿಂದ ಹಲ್ಲೆ ಆರೋಪ: ಅವಾಚ್ಯವಾಗಿ ನಿಂದನೆ
PSI ಶೋಭಾ ಭರಮಕ್ಕನವರ್, ಗ್ರಾ.ಪಂ. ಸದಸ್ಯ ಶ್ರೀನಿವಾಸ್​​
Follow us on

ಹಾಸನ: ಕುಡಿದು ಕರ್ತವ್ಯನಿರತ ಮಹಿಳಾ ಪಿಎಸ್​ಐ ಮೇಲೆ ಹಲ್ಲೆ ಮಾಡುವುದಲ್ಲದೆ ಪೊಲೀಸ್ ಠಾಣೆಗೆ ಗ್ರಾ.ಪಂ. ಸದಸ್ಯ ನುಗ್ಗಿ ಅವಾಚ್ಯವಾಗಿ ನಿಂದಿಸಿರುವಂತಹ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್​ನಲ್ಲಿ ನಡೆದಿದೆ. ಜಾವಗಲ್ ಠಾಣೆಯ ಮಹಿಳಾ ಪಿಎಸ್‌ಐ ಶೋಭ ಭರಮಕ್ಕನವರ್ ಮೇಲೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್​ರಿಂದ ಹಲ್ಲೆ ಆರೋಪ ಮಾಡಲಾಗಿದೆ. 15 ದಿನಗಳ ಹಿಂದೆ ಇಸ್ಪೀಟ್​ ಅಡ್ಡೆ ಮೇಲೆ ಪೊಲೀಸರಿಂದ ರೇಡ್ ಮಾಡಿದ್ದು, ಈ ವೇಳೆ PSI ಶೋಭಾ ಭರಮಕ್ಕನವರ್ ಕೆಲವರನ್ನು ಬಂಧಿಸಿದ್ದರು. ಬಂಧಿಸುವಾಗ ತಾನು ಹೇಳಿದಂತೆ ಕೇಳಲಿಲ್ಲ ಎಂದು ನಿನ್ನೆ ರಾತ್ರಿ ಜಾವಗಲ್ ಠಾಣೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳಾ ಪಿಎಸ್‌ಐನ್ನು ಹಿಡಿದು ಎಳೆದಾಡಿ ಶ್ರೀನಿವಾಸ್​ ಗಲಾಟೆ ಮಾಡಿದ್ದಾರೆನ್ನಲಾಗುತ್ತಿದೆ. ಆರೋಪಿ ಶ್ರೀನಿವಾಸ್​​​ನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸಾರ್ವಜನಿಕರ ಮೊಬೈಲ್​ಗೆ ಲಿಂಕ್​ಗಳನ್ನು ಕಳಿಸಿ ವಂಚಿಸುತುದ್ದವ ಅರೆಸ್ಟ್

ಬೆಂಗಳೂರು: ಸಾರ್ವಜನಿಕರ ಮೊಬೈಲ್​​ಗೆ ಲಿಂಕ್​ಗಳನ್ನು ಕಳಿಸಿ ವಂಚಿಸುತ್ತಿದ್ದ ಕೇರಳ ಮೂಲದ ಆರೋಪಿ ಶಾನೀದ್ ಅಬ್ದುಲ್ ಬಂಧನ ಮಾಡಲಾಗಿದೆ. ಬಂಧಿತನಿಂದ 222 ಸಿಮ್ ಕಾರ್ಡ್, 10 ಮೊಬೈಲ್, 10 ಡೆಬಿಟ್​ ಕಾರ್ಡ್​​, ಬ್ಯಾಂಕ್​ ಪಾಸ್​​ಬುಕ್​, ಚೆಕ್​ಬುಕ್​​ಗಳು​ ವಶಕ್ಕೆ ಪಡೆಯಲಾಗಿದೆ. ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

60,000 ರೂ ಮೌಲ್ಯದ ಸಾಗವಾನಿ ಕಟ್ಟಿಗೆ ವಶಕ್ಕೆ

ಕಾರವಾರ: ಫರ್ನಿಚರ್ ತಯಾರಿಕಾ ಘಟಕದ ಮೇಲೆ ಅರಣ್ಯ ಸಿಬ್ಬಂದಿಗಳ ದಾಳಿ ಮಾಡಿದ್ದು, ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂದಾಜು 60,000 ರೂ ಮೌಲ್ಯದ ಸಾಗವಾನಿ ಕಟ್ಟಿಗೆ ವಶಕ್ಕೆ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಕೂಕಿನ ಕೊಡಂಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಡಿಎಪ್‌ಓ ಎಸ್.ಜಿ.ಹೆಗಡೆ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿಗಳಿಂದ ದಾಳಿ‌ ಮಾಡಲಾಗಿದೆ. ಮುಂಡಗೋಡ ಅರಣ್ಯ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕ್ತಿದ್ದ ದರೋಡೆಕೋರರ ಬಂಧನ

ನೆಲಮಂಗಲ: ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ದರೋಡೆಕೋರರ ಬಂಧನ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸರಿಂದ ಇಬ್ಬರ ಬಂಧನ ಮಾಡಿದ್ದು, ಮೂವರು ಎಸ್ಕೇಪ್ ಆಗಿದ್ದಾರೆ. ಪ್ರಶಾಂತ (23)ಅರುಣ್ ಕುಮಾರ್ (23) ಬಂಧಿತ ಆರೋಪಿಗಳು. ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡುವ ಜನರನ್ನ ಅಡ್ಡಗಟ್ಟಿ ಆರೋಪಿಗಳು ದರೋಡೆ ಮಾಡಿದ್ದರು. ಕೃತ್ಯಕ್ಕೆ ಬಳಸುತ್ತಿದ್ದ ಎರಡು ಚಾಕು, ಖಾರದ ಪುಡಿ, ಲಾಂಗು, ರಾಡು, ದ್ವಿಚಕ್ರ ವಾಹನ ಸೇರಿದಂತೆ 1 ಟಾಟಾ ಏಸ್ ವಾಹನ ಜಪ್ತಿ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.