AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಮಾತುಕತೆಗೆ ಬಂದವರು ಕೊರೊನಾ ಬಿಟ್ಟೋದ್ರು! 5 ವರ್ಷದ ಮಗುಗೆ ಕೊರೊನಾ

ಹಾಸನ: ಮದುವೆ ಮುಂಜಿ ಅಂದ್ರೆ ಅದರ ಸಂಭ್ರಮವೇ ಬೇರೆ. ಮನೆಯಲ್ಲಿ ಎಲ್ಲಿಲ್ಲದ ಸಡಗರ ಮತ್ತು ಬಂಧುಬಳಗದ ಕಲರವ ಮನೆ ತುಂಬಾ ಹರಡಿರುತ್ತೆ. ಆದ್ರೆ ಇದಕ್ಕೆಲ್ಲಾ ಬ್ರೇಕ್‌ ಹಾಕೋದಕ್ಕೆ ಅಂತಾನೆ ಮಹಾಮಾರಿ ಕೊರೊನಾ ವಕ್ಕರಿಸಿದೆ. ಯಾಕಂದ್ರೆ ಈ ಕೊರೊನಾ ಮಾರಿ ಯಾವಾಗ ಹೇಗೆ ಮತ್ತು ಯಾವ ರೂಪದಲ್ಲಿ ಬರುತ್ತೆ ಅಂತಾ ಹೇಳೋಕೇನೇ ಆಗ್ತಿಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪ ಅಂದ್ರೆ, ಮದುವೆ ಮಾತುಕತೆಗೆ ಅಂತಾ ಮನೆಗೆ ಬಂದವರು ಈಗ ಕೊರೊನಾ ಅನ್ನೋ ಮಾರಿಯನ್ನ ಗಿಫ್ಟ್‌ ಕೊಟ್ಟಿರುವ ಘಟನೆ ಹಾಸನ ಜಿಲ್ಲೆಯಲ್ಲಿ […]

ಮದುವೆ ಮಾತುಕತೆಗೆ ಬಂದವರು ಕೊರೊನಾ ಬಿಟ್ಟೋದ್ರು! 5 ವರ್ಷದ ಮಗುಗೆ ಕೊರೊನಾ
ಸಾಧು ಶ್ರೀನಾಥ್​
|

Updated on:Jun 13, 2020 | 6:29 PM

Share

ಹಾಸನ: ಮದುವೆ ಮುಂಜಿ ಅಂದ್ರೆ ಅದರ ಸಂಭ್ರಮವೇ ಬೇರೆ. ಮನೆಯಲ್ಲಿ ಎಲ್ಲಿಲ್ಲದ ಸಡಗರ ಮತ್ತು ಬಂಧುಬಳಗದ ಕಲರವ ಮನೆ ತುಂಬಾ ಹರಡಿರುತ್ತೆ. ಆದ್ರೆ ಇದಕ್ಕೆಲ್ಲಾ ಬ್ರೇಕ್‌ ಹಾಕೋದಕ್ಕೆ ಅಂತಾನೆ ಮಹಾಮಾರಿ ಕೊರೊನಾ ವಕ್ಕರಿಸಿದೆ.

ಯಾಕಂದ್ರೆ ಈ ಕೊರೊನಾ ಮಾರಿ ಯಾವಾಗ ಹೇಗೆ ಮತ್ತು ಯಾವ ರೂಪದಲ್ಲಿ ಬರುತ್ತೆ ಅಂತಾ ಹೇಳೋಕೇನೇ ಆಗ್ತಿಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪ ಅಂದ್ರೆ, ಮದುವೆ ಮಾತುಕತೆಗೆ ಅಂತಾ ಮನೆಗೆ ಬಂದವರು ಈಗ ಕೊರೊನಾ ಅನ್ನೋ ಮಾರಿಯನ್ನ ಗಿಫ್ಟ್‌ ಕೊಟ್ಟಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆಯಿಂದ ಮದುವೆ ಮಾತುಕತೆಗೆ ಅಂತಾ ಬಂದ ಸಂಬಂಧಿಕರಿಂದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಎಬಿಎಂ ಹಳ್ಳಿಯ ಕುಟುಂಬ ಈಗ ಸಂಕಷ್ಟಕ್ಕೀಡಾಗಿದೆ.

ಮದುವೆ ಮಾತುಕತೆಗೆ ಬಂದವ್ರು ಕೊರೊನಾ ಕೊಟ್ಟೋದ್ರು! ಜೂನ್‌ 7ನೇ ತಾರಿಖಿನಂದು ಸಂಬಂಧಿಕರು ಮದುವೆ ಮಾತುಕತೆಗೆ ಬಂದಿದ್ರು. ಆಗ ಮನೆಯಲ್ಲಿದ್ದ ಐದು ವರ್ಷದ ಮಗುವನ್ನ ಎತ್ತಿ ಮುದ್ದಾಡಿದ್ದಾರೆ. ಇದಾದ ನಂತರ ಮಾತುಕತೆಯಾಯಿತು, ಊಟ ಉಪಚಾರಾನೂ ಆಯಿತು. ನಂತರ ಬೀಗರು ಹಿಂದಿರುಗಿ ಹೋಗಿದ್ದೂ ಆಯಿತು. ಆದ್ರೆ ಅವರೊಂದಿಗೆ ಬಂದಿದ್ದ ಕೊರೊನಾ ಮಾರಿ ಮಾತ್ರ ಹೋಗಲಿಲ್ಲ.

ಆದ್ರೆ ಜೂನ್‌ 11ರಂದು ಮಗುಗೆ ಜ್ವರ ಕಾಣಿಸಿಕೊಂಡಿತು. ಆಗ ಆಸ್ಪತ್ರೆಗೆ ಕರೆದೊಯ್ದಾಗ ಮಗುವನ್ನ ಐಎಲ್‌ಐ ಕೇಸ್‌ ಅಂತಾ ಪರಿಗಣಿಸಿ ಸ್ವಾಬ್‌ ಟೆಸ್ಟ್ ಮಾಡಿದ್ದಾರೆ. ಆಗ ಹೊರಬಿದ್ದಿದೆ ನೋಡಿ ಆಘಾತಕಾರಿ ಕೊರೊನಾ ವಕ್ಕರಿಸಿರುವುದರ ಸುಳಿವು!

ಕಮ್ಯುನಿಟಿ ಟ್ರಾನ್ಸಮಿಶನ್‌ ಆತಂಕ? ಇದಾದ ನಂತರ ಆರೋಗ್ಯಾಧಿಕಾರಿಗಳು ಮಗುವಿನ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದವರನ್ನ ಕ್ವಾರಂಟೈನ್‌ ಮಾಡಿದ್ದಾರೆ. ಅವರ ಗಂಟಲು ದ್ರವವನ್ನ ಲ್ಯಾಬ್‌ ಟೆಸ್ಟ್‌ಗೆ ಕಳಿಸಿದ್ದಾರೆ. ನಂತರ ಅವರ ಗ್ರಾಮವನ್ನ ಸೀಲ್‌ಡೌನ್‌ ಮಾಡಿದ್ದಾರೆ. ಆದ್ರೆ ಕೊರೊನಾ ಈಗ ಒಬ್ಬರಿಂದ ಒಬ್ಬರಿಗೆ ಹಬ್ಬದೇ, ಇಡಿಯಾಗಿ ಕಮ್ಯುನಿಟಿಗೇ ಟ್ರಾನ್ಸ್‌ಮೀಟ್‌ ಆಗ್ತಿರೋದು ವೈದ್ಯರಲ್ಲಿ ಆತಂಕ ಮೂಡಿಸಿದೆ.

Published On - 6:28 pm, Sat, 13 June 20

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು