ಕಿಡಿಗೇಡಿಗಳ ಕೃತ್ಯ: ಅನ್ಯಧರ್ಮೀಯ ಯುವತಿ ಜೊತೆ ಇದ್ದವನಿಗೆ ಬಿತ್ತು ಗೂಸ

ಹಾಸನ: ಅನ್ಯಧರ್ಮೀಯ ಯುವಕ ಯುವತಿ ಜೊತೆಗಿದ್ದ ಕಾರಣಕ್ಕೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಹೊಸ‌ ಬಸ್‌ ನಿಲ್ದಾಣದ ಬಳಿ ನಡೆದಿದೆ. ಯುವಕ ಮತ್ತು ಯುವತಿ ಕೆಎ 13 ಸಿ 3030 ನಂಬರ್ ಆಟೋದಲ್ಲಿ ತೆರಳುವಾಗ ಯುವಕರ ಗುಂಪೊಂದು ಆಟೋವನ್ನ ಅಡ್ಡಗಟ್ಟಿ ಯುವಕನ ಮೇಲೆ ಹಲ್ಲೆ ನಡೆಸಿದೆ. ಅಲ್ಲದೆ ಯುವತಿಯನ್ನು ಪರ ಧರ್ಮದ ಯುವಕನ‌ ಜೊತೆ ಓಡಾಡ್ತೀಯಾ ಎಂದು ನಿಂದಿಸಿದ್ದಾರೆ. ಯುವಕರ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ಮಾಡಿರೊ ಯುವಕರ ವಿರುದ್ದ ತೀವ್ರ […]

ಕಿಡಿಗೇಡಿಗಳ ಕೃತ್ಯ: ಅನ್ಯಧರ್ಮೀಯ ಯುವತಿ ಜೊತೆ ಇದ್ದವನಿಗೆ ಬಿತ್ತು ಗೂಸ
ಸಾಧು ಶ್ರೀನಾಥ್​

Updated on: Dec 24, 2019 | 11:36 AM

ಹಾಸನ: ಅನ್ಯಧರ್ಮೀಯ ಯುವಕ ಯುವತಿ ಜೊತೆಗಿದ್ದ ಕಾರಣಕ್ಕೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಹೊಸ‌ ಬಸ್‌ ನಿಲ್ದಾಣದ ಬಳಿ ನಡೆದಿದೆ. ಯುವಕ ಮತ್ತು ಯುವತಿ ಕೆಎ 13 ಸಿ 3030 ನಂಬರ್ ಆಟೋದಲ್ಲಿ ತೆರಳುವಾಗ ಯುವಕರ ಗುಂಪೊಂದು ಆಟೋವನ್ನ ಅಡ್ಡಗಟ್ಟಿ ಯುವಕನ ಮೇಲೆ ಹಲ್ಲೆ ನಡೆಸಿದೆ.

ಅಲ್ಲದೆ ಯುವತಿಯನ್ನು ಪರ ಧರ್ಮದ ಯುವಕನ‌ ಜೊತೆ ಓಡಾಡ್ತೀಯಾ ಎಂದು ನಿಂದಿಸಿದ್ದಾರೆ. ಯುವಕರ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ಮಾಡಿರೊ ಯುವಕರ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us