ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಡಲಾಗುವುದು ಎಂದು ಹೇಳಿಕೆ ನೀಡಿದ ಬೆನ್ನಲ್ಲೆ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹಾಸನದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಸಿಎಂ ಬೊಮ್ಮಾಯಿಗೆ ಗೊತ್ತು. ಕೇಂದ್ರ ನಾಯಕರ ಜೊತೆ ಸಿಎಂ ಬೊಮ್ಮಾಯಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಕೇಂದ್ರ ನಾಯಕರು, ಸಿಎಂ ಬೊಮ್ಮಾಯಿ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ ಹೆಸರು ಕೇಳಿಬಂದ ಹಿನ್ನೆಲೆ ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈಶ್ವರಪ್ಪ ಸಚಿವರಾಗಿಯೇ ಚುನಾವಣೆಗೆ ಹೋಗುತ್ತೇನೆಂದು ಪಣತೊಟ್ಟಿರುವ ಹಿನ್ನೆಲೆ ಸಚಿವ ಸ್ಥಾನ ತಮಗೆ ನೀಡಲೇಬೇಕೆಂದು ಹಠ ಹಿಡದಿದ್ದಾರೆ.
ಷಡ್ಯಂತ್ರ ಮಾಡಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ ಅಂತ ಇಡಿ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತು. ಆ ಕೇಸ್‌ನಿಂದ ಮುಕ್ತರಾಗಿ ಬರಲಿ ಎಂದು ಎಲ್ಲರ ಅಪೇಕ್ಷಿಯಿತ್ತು, ಕ್ಲೀನ್ ಚಿಟ್ ಸಿಕ್ತು, ಮುಗಿತು. ಈಗ ತೀರ್ಮಾನ ಕೇಂದ್ರ ನಾಯಕರದ್ದು, ಬಹಳ ಚರ್ಚೆ ಮಾಡುವ ವಿಚಾರ ಏನಲ್ಲ ಎಂದರು.
ಭಾರತ್ ಜೋಡೋ ಯಾತ್ರೆ ಬಗ್ಗೆ ಈಶ್ವರಪ್ಪ ವ್ಯಂಗ್ಯ
ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿ ಅವರೇ ಮೂರು ಜನ ವೆಂಕ, ನಾಣಿ, ಸೀನ ಹೇಳಿದ್ದಾರೆ. ಇಂತಹ ಎಷ್ಟು ಯಾತ್ರೆಯನ್ನು ನಾವು ಮಾಡಿದ್ದೀವಿ. ಲಾಲ್ ಕೃಷ್ಣ ಅಡ್ವಾಣಿಯವರು ಅಯೋಧ್ಯೆ ರಥಯಾತ್ರೆ ಮಾಡಿದರು, ಅದು ಯಶಸ್ವಿಯಾಯಿತು. ಆದಾದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಮುರುಳಿ ಮನೋಹರ್ ಜೋಷಿ ಅವರು ತಿರಂಗ ಯಾತ್ರೆ ಮಾಡಿದರು. ಲಾಲ್ ಚೌಕ್‌ನಲ್ಲಿ ಪಾಕಿಸ್ತಾನ ಧ್ವಜ ಹಾರುತ್ತಿತ್ತು. ಅದನ್ನು ಕಿತ್ತು ಬಿಸಾಕಿ ನಮ್ಮ ತ್ರಿವಣ ಧ್ವಜ ಹಾರಿಸಿದರು ಎಂದು ತಿಳಿಸಿದರು.
ನಿಮ್ಮ ತಾಯಿ ಮೊಲೆ ಹಾಲು ಕುಡಿದ ಗಂಡಸು ಯಾರಾದರು ಇದ್ದರೆ ತ್ರಿವರ್ಣ ಧ್ವಜ ಹಾಕಿದರೆ ಹತ್ತು ಲಕ್ಷ ರೂ ಬಹುಮಾನ ಅಂತ ಅಲ್ಲಿ ಉಗ್ರಗಾಮಿಗಳು ಬೋರ್ಡ್ ಹಾಕಿದ್ದರು. ಕಾಂಗ್ರೆಸ್‌ನವರು ಆ ಸವಾಲು ಸ್ವೀಕರಿಸಲಿಲ್ಲ. ಆದರೆ ಭಾರತಮಾತೆ ಬಂಜೆ ಅಲ್ಲ, ಭಾರತಮಾತೆ ಮಕ್ಕಳು ನಾವ್ಯಾರು ಷಂಡರಲ್ಲ, ಮೋದಿಯವರು, ಮುರುಳಿ ಮನೋಹರ ಜೋಷಿಯವರು ತಿರಂಗ ಯಾತ್ರೆ ಮಾಡಿ ಅಲ್ಲಿದ್ದ ಪಾಕಿಸ್ತಾನ ಧ್ವಜ ಕಿತ್ತುಹಾಕಿ, ತ್ರಿವರ್ಣ ಧ್ವಜ ಹಾರಿಸಿದರು. ನಮ್ಮವರು ಯಾತ್ರೆಗಳನ್ನು ಒಂದು ಗುರಿ ಇಟ್ಕಂಡು ಮಾಡುತ್ತಿದ್ದರು ಎಂದು ನುಡಿದರು .
ಬಡವರಿಗೆ ಸಹಾಯ ಆಗಲಿ ಅಂತ ಯಡಿಯೂರಪ್ಪ ಅವರು ಎಷ್ಟು ಯಾತ್ರೆ ಮಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವುದೇ ಕಾಂಗ್ರೆಸ್ನವರ ಗುರಿ. ತುಂಬಾ ನೊಂದು ಹೇಳುತ್ತೇನೆ ಭಾರತ ತುಂಡು ಮಾಡಿದ್ದು ಯಾರು ? ಹಿಂದೂಸ್ತಾನ, ಪಾಕಿಸ್ತಾನ ಅಂತ ಎರಡು ಭಾಗ ಮಾಡಿದರು. ತುಂಡು ಮಾಡಿ ಅಧಿಕಾರವನ್ನು ನಡೆಸಿದರು. ಇವತ್ತು ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ. ಇಡೀ ದೇಶದಲ್ಲಿ ಬೂದುಗಾಜು ಇಟ್ಕಂಡು ಹುಡುಕಬೇಕು ಕಾಂಗ್ರೆಸ್ ಎಲ್ಲಿದೆ ಅಂತ, ಆ ಸ್ಥಿತಿ ಬಂದಿದೆ. ಅಧಿಕಾರದ ಆಸೆಯಿಂದ ಕಾಂಗ್ರೆಸ್ ಹಾಳು ಮಾಡುತ್ತೀರಿ ವಿಸರ್ಜನೆ ಮಾಡಿ ಅಂತ ಮಹಾತ್ಮ ಗಾಂಧಿಜಿ ಹೇಳಿದ್ದರು. ಈಗ ಇಡೀ ದೇಶದಲ್ಲಿ ಬಿಜೆಪಿ, ರಾಷ್ಟ್ರೀಯ ವಿಚಾರಗಳು, ಧರ್ಮ ರಕ್ಷಣೆ ಮಾಡುವ ವಿಚಾರ ಹೇಳಿ ಕೊಡುತ್ತಿದೆ. ಇದರಿಂದ ಬಿಜೆಪಿ ದೇಶದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತಿದೆ, ಕೇಂದ್ರ, ರಾಜ್ಯ ನಮ್ಮ ಕೈಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಯಡಿಯೂರಪ್ಪ ಹಾಗು ಸಿಎಂ ಬೊಮ್ಮಾಯಿ ಪಾದಾಯತ್ರೆ ಮಾಡಲಿ, ಬಿಜೆಪಿಯ ಜನ ಸ್ಪಂದನ ಯಾತ್ರೆಲ್ಲಿ ನನ್ನ ಹೆಸರು ಹೇಳದೆ ಐದು ನಿಮಿಷ ಮಾತನಾಡಲಿ ಎಂದು ಸಿದ್ದರಾಮಯ್ಯ ಹೇಳಿದ ವಿಚಾರವಾಗಿ ಮಾತನಾಡಿದ ಅವರು ನಾನು ಅವರ ಹೆಸರು ಹೇಳದೆ ಇಷ್ಟೊತ್ತು ಮಾತನಾಡಿಲ್ಲವಾ ? ಅವನು ತಾನು ದೊಡ್ಡ ಮನುಷ್ಯ ಅಂದುಕೊಂಡು ಬಿಟ್ಟಿದಾನೆ. ಅವನು ಯಾವೂರ ದಾಸಾರಿ, ನರೇಂದ್ರ ಮೋದಿಯಂತಾ ವಿಶ್ವ ನಾಯಕನ ಬಗ್ಗೆ ಮಾತಾಡುತ್ತಾರೆ. ಮೋದಿ ಬಗ್ಗೆ ಏಕ ವಚನದಲ್ಲಿ ಮಾತನಾಡಿದರೆ ಬಾಯಿಗೆ ಹುಳ ಬೀಳುತ್ತೆ. ಹಿಂದುಳಿದ ವರ್ಗಕ್ಕೆ ಏನು ಮಾಡಿದಿರಿ ಹೇಳಿ ? ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಏನೋ ಮಾಡಿದೆ ಎಂದು ಹೇಳುತ್ತೀರಲ್ಲ ಏನೆಂದು ಹೇಳಿ ? ಅವರ ಬಗ್ಗೆ ಮಾತನಾಡದೆ ಇದ್ದ ರೆ ಏನು ಪ್ರಳಯ ಆಗುತ್ತಾ ? ಏನು ಕಡಿದಿದ್ದೀರಾ ಅಂತ ಎಂದು ನಿಮ್ಮ ಬಗ್ಗೆ ಮಾತನಾಡಬೇಕು ?ನಿಮ್ಮ ಬಗ್ಗೆ ಮಾತಾಡೋಕೆ ನಮಗೇ ಸಂಕೋಚ ಆಗುತ್ತೆ ಎಂದು ವಾಗ್ದಾಳಿ ಮಾಡಿದರು.
ಯತ್ನಾಳ್ ಮಾತಿಗೆ ಮಹತ್ವ ಕೊಡಬೇಕಿಲ್ಲ: ಈಶ್ವರಪ್ಪ
ಬಿಜೆಪಿ ನಾಯಕರ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪದೇ ಪದೆ ಟೀಕೆ ಮಾಡುವ ವಿಚಾರಕ್ಕೆ ಮಾತನಾಡಿದ ಅವರು ಅವರ ಮಾತಿಗೆ ಮಹತ್ವ ಕೊಡಬೇಕಿಲ್ಲ ಎಂದು ನಾಯಕರು ಹೇಳಿದ್ದಾರೆ. ಅವರ ವಿಚಾರ ವನ್ಮು ಶಿಸ್ತು ಸಮಿತಿಕೆ ಕಳಿಸಲಾಗಿದೆ. ಅವರು ಏನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತಾರೆ. ಅವರು ಎಲ್ಲರ ಬಗ್ಗೆ ಮಾತಾಡ್ತಾರೆ ಎಂದರೆ ಅವರು ಹೇಳಿದ್ದೆಲ್ಲಾ ಸತ್ಯಾ ಅಲ್ಲ. ಯತ್ಬಾಳ್ಗೆ ಎಷ್ಟು ಬುದ್ದಿ ಹೇಳಿದರು ಬುದ್ದಿ ಬಂದಿಲ್ಲ ಮುಂದೆ ಬರಹುದು ಎಂದು ನುಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Mon, 17 October 22