ಹಾಸನ: ಕಾಲೇಜು ವಿದ್ಯಾರ್ಥಿನಿಗೆ ಚುಡಾಯಿಸಿದ ಆರೋಪ, ಯುವಕನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೊಪ್ಪಿಸಿದ ಜನ

ಯುವಕ ಯುವತಿಯನ್ನು ಚುಡಾಯಿಸಿದ್ದಾನೆ. ಕೈ ಹಿಡಿದು ಎಳೆದಿದ್ದಾನೆ. ಪ್ರತಿದಿನ ಹೀಗೆ ಮಾಡ್ತಿಯಾ ಎಂದು ಸಿಟ್ಟಿಗೆದ್ದ ಯುವತಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾಳೆ.

ಹಾಸನ: ಕಾಲೇಜು ವಿದ್ಯಾರ್ಥಿನಿಗೆ ಚುಡಾಯಿಸಿದ ಆರೋಪ, ಯುವಕನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೊಪ್ಪಿಸಿದ ಜನ
ಸಾರ್ವಜನಿಕರಿಂದ ಯುವಕನಿಗೆ ಥಳಿತ

Updated on: Apr 05, 2023 | 10:49 AM

ಹಾಸನ: ಕಾಲೇಜು ವಿದ್ಯಾರ್ಥಿನಿ ಚುಡಾಯಿಸಿದ ಆರೋಪ ಹಿನ್ನೆಲೆ ಬೀದಿ ಕಾಮಣ್ಣನಿಗೆ ಧರ್ಮದೇಟು ಕೊಟ್ಟು ಜನ ಪೊಲೀಸರಿಗೊಪ್ಪಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಕಾಲೇಜು ಮುಗಿಸಿ ಮನೆಗೆ ಹೋಗುವಾಗ ಯುವತಿಯನ್ನ ಚುಡಾಯಿಸಿ ಕೈ ಹಿಡಿದು ಎಳೆದಿದ್ದಾನೆ. ಆಗ ರೊಚ್ಚಿಗೆದ್ದ ಯುವತಿ, ಯುವಕನಿಗೆ ನಡು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾಳೆ. ವಿಚಾರ ತಿಳಿದು ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಬೀದಿ ಕಾಮಣ್ಣನಿಗೆ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಾಸನ ನಗರದ ಜಿಲ್ಲಾಸ್ಪತ್ರೆ ಸಮೀಪದ ಬಿಎಸ್​ಎನ್​ಎನ್​ಎಲ್ ಭವನದ ಬಳಿ ಘಟನೆ ನಡೆದಿದೆ. ಪದವಿ ಕಾಲೇಜು ವಿದ್ಯಾರ್ಥಿನಿ ನಿನ್ನೆ(ಏಪ್ರಿಲ್ 04) ಮಧ್ಯಾಹ್ನ ಕಾಲೇಜು ಮುಗಿಸಿ ತೆರಳುತ್ತಿದ್ದ ವೇಳೆ ತನ್ನ ಗೆಳತಿಯರ ಜೊತೆ ಹೋಗುತ್ತಿದ್ದ ಯುವಕ ಚುಡಾಯಿಸಿದ್ದಾನೆ. ಕೈ ಹಿಡಿದು ಎಳೆದಿದ್ದಾನೆ. ಪ್ರತಿದಿನ ಹೀಗೆ ಮಾಡ್ತಿಯಾ ಎಂದು ಸಿಟ್ಟಿಗೆದ್ದ ಯುವತಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಆಗ ರಸ್ತೆಯಲ್ಲಿ, ಅಕ್ಕಪಕ್ಕದಲ್ಲಿದ್ದ ಮಂದಿ ಯುವತಿಯ ಸಹಾಯಕ್ಕೆ ಬಂದಿದ್ದು ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Video: ಸ್ಕೂಟಿಯನ್ನು ಅಟ್ಟಿಸಿಕೊಂಡು ಬಂದ ನಾಯಿಗಳು, ಭಯದಲ್ಲಿ ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದ ಮಹಿಳೆಯರು

ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ, ನಾಲ್ವರ ವಿರುದ್ಧ ದೂರು ದಾಖಲು

ಮಂಗಳೂರು: ಯುವತಿಯೊಂದಿಗೆ ಮಾತನಾಡಿದಕ್ಕೆ ಮುಸ್ಲಿಂ ಯುವಕನ್ನು ಬಸ್​ನಿಂದ ಎಳೆದು ತಂದು ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದಿದೆ. ಏಪ್ರಿಲ್ 04ರಂದು ಮೊಹಮ್ಮದ್ ಜಹೀರ್(22) ಎಂಬ ಯುವಕ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ ತನಗೆ ಪರಿಚಯವಿದ್ದ ಯುವತಿ ಕೂಡ ಅದೇ ಬಸ್​ನಲ್ಲಿರುವುದನ್ನು ಕಂಡು ಮಾತನಾಡಿಸಿದ್ದ. ಇದನ್ನು ಕಂಡ ಗುಂಪೊಂದು ಯುವಕನನ್ನು ಬಸ್‌ನಿಂದ ಹೊರಗೆಳೆದು ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. “ಕ್ಷುಲ್ಲಕ ವಿಚಾರಕ್ಕೆ ಯುವಕ ಮತ್ತು ಕೆಲವರ ನಡುವೆ ಮಾರಾಮಾರಿ ನಡೆದಿದೆ” ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಮೊಹಮ್ಮದ್ ಜಹೀರ್ (22) ಎಂದು ಗುರುತಿಸಲಾಗಿದೆ. ಜಹೀರ್ ನೀಡಿದ ದೂರಿನ ಆಧಾರದ ಮೇಲೆ ನಿತೇಶ್, ಸಚಿನ್, ದಿನೇಶ್ ಮತ್ತು ಅವಿನಾಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Published On - 10:14 am, Wed, 5 April 23