ಹಾಸನ: ಕುರಾನ್​ ಪಠಣವಿಲ್ಲದೆ ನೆರವೇರಿದ ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವ:

ಹಾಸನ ಜಿಲ್ಲೆಯ ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವ ನಡೆದಿದ್ದು, ಬಿಗಿ ಪೊಲೀಸ್​ ಭದ್ರತೆ ನಡುವೆ ಸಂಪ್ರದಾಯದಂತೆ ದೇವಸ್ಥಾನದ ಮೆಟ್ಟಿಲಿನ ಸಮೀಪ, ದೊಡ್ಡಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಅವರು ಕುರಾನ್ ಪಠಣ ಮಾಡಿದ್ದಾರೆ.

Follow us
ವಿವೇಕ ಬಿರಾದಾರ
|

Updated on:Apr 04, 2023 | 1:22 PM

ಹಾಸನ: ಜಿಲ್ಲೆಯ ಬೇಲೂರಿನ ಚನ್ನಕೇಶವಸ್ವಾಮಿ (Belur Chennakeshava Swamy) ರಥೋತ್ಸವದ ಸಂದರ್ಭದಲ್ಲಿ, ರಥದ ಎದುರು ಖುರಾನ್​ ಪಠಣ ಮಾಡುವ ವಿಚಾರವಾಗಿ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈಗ ಚನ್ನಕೇಶವಸ್ವಾಮಿ ರಥೋತ್ಸವ (Chariot Festival) ನಡೆದಿದ್ದು, ಬಿಗಿ ಪೊಲೀಸ್​ ಭದ್ರತೆ ನಡುವೆ ಸಂಪ್ರದಾಯದಂತೆ ದೇವಸ್ಥಾನದ ಮೆಟ್ಟಿಲಿನ ಸಮೀಪ, ದೊಡ್ಡಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಅವರು ಕುರಾನ್ (Quran) ಪಠಣ ಮಾಡಿದ್ದಾರೆ. ಬಳಿಕ ಭಕ್ತರು ಚನ್ನಕೇಶವಸ್ವಾಮಿ ರಥವನ್ನು ಎಳೆದರು. ಆದರೆ ಈ ಬಗ್ಗೆ ಗೊಂದಲ ವ್ಯಕ್ತವಾಗಿದ್ದು, ಕುರಾನ್​ ಪಠಣ ಮಾಡಿದ್ದಾರೋ ಅಥವಾ ಇಲ್ಲವೋ ಎಂಬುವುದು ಸ್ಪಷ್ಟವಾಗಿಲ್ಲ. ಈ ಬಾರಿ ರಥದ ಬದಲಿಗೆ ದೇಗುಲದ ಮೆಟ್ಟಿಲು ಮೇಲೆ ನಿಂತು ಖುರಾನ್ ಓದಲು ಅವಕಾಶ ಮಾಡಿಕೊಡಲಾಗಿತ್ತು. ಇನ್ನು ಕುರಾನ್​​ ಪಠಣವನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ರಥದ ಬಳಿ ಜೈಶ್ರೀರಾಮ್​, ಗೋವಿಂದ, ಗೋವಿಂದ ಎಂದು ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು.

ಖಾದ್ರಿಯವರು ಖುರಾನ್ ಪಠಣ ಮಾಡಿಲ್ಲ: ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಡಾ.ನಾರಾಯಣ ಸ್ವಾಮಿ

ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವಾಲಯದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಡಾ.ನಾರಾಯಣ ಸ್ವಾಮಿ, ಖಾದ್ರಿಯವರು ಖುರಾನ್ ಪಠಣ ಮಾಡಿಲ್ಲ ಕೇವಲ ಪ್ರಾರ್ಥನೆ ಮಾಡಿದ್ದಾರೆ. ಈ ಮೂಲಕ ಯಾವುದೇ ಗೊಂದಲ ಆಗಿಲ್ಲ. ತಾನು ಖುರಾನ್ ಪಠಣ ಮಾಡಿಲ್ಲ ಪ್ರಾರ್ಥನೆ ಮಾಡಿ ಗೌರವ ಸ್ವೀಕಾರ ಮಾಡಿದ್ದೇನೆ ಎಂದು ಖಾಜಿಯವರು ಬರೆದು ಸಹಿಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಕುರಾನ್ ಪಠಣ ಮಾಡಿಲ್ಲ ಎಂದು ಪತ್ರ ಬರೆದ ಸೈಯದ್​ ಬಾಷಾ ಖಾದ್ರಿ

ಧಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ದೇವರಿಗೆ ಶ್ಲೋಕ ಹೇಳಿದ್ದೇನೆ. ನಮ್ಮ ರೀತಿಯಲ್ಲಿ ದೇವರಿಗೆ ಶ್ಲೋಕ ಹೇಳಿ ವಂದನೆ ಸಮರ್ಪಿಸಿದ್ದೇನೆ. ಈ ದಿನ ಕುರಾನ್ ಪಠಣ ಮಾಡಿಲ್ಲ ಎಂದು ತಿಳಿಯಬಯಸುತ್ತೇನೆ. ದೇವಾಲಯದ ವತಿಯಿಂದ ನೀಡಿದ ಮರ್ಯಾದೆಯನ್ನು ಸ್ವೀಕರಿಸುತ್ತೇನೆ. ರಥದ ಎದುರು ಮುಸ್ಲಿಂ ಧಾರ್ಮಿಕ ವಿದಿಯಂತೆ ನಮಿಸಿದ್ದೇನೆ ಎಂದು ಸೈಯದ್​ ಬಾಷಾ ಖಾದ್ರಿ ದೇವಾಲಯದ ಲೆಟರ್ ಹೆಡ್​ನಲ್ಲಿ ಬರೆದು ಸಹಿ ಮಾಡಿಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Tue, 4 April 23

ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ
ಅಯ್ಯಪ್ಪಸ್ವಾಮಿ ದೇವಾಲಯದ 18 ಮೆಟ್ಟಿಲುಗಳ ಮಹತ್ವ ತಿಳಿಯಿರಿ
ಅಯ್ಯಪ್ಪಸ್ವಾಮಿ ದೇವಾಲಯದ 18 ಮೆಟ್ಟಿಲುಗಳ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯ ಮಹಿಳೆಯರಿಗೆ ವಿದೇಶ ಪ್ರವಾಸದ ಯೋಗವಿದೆ
Daily Horoscope: ಈ ರಾಶಿಯ ಮಹಿಳೆಯರಿಗೆ ವಿದೇಶ ಪ್ರವಾಸದ ಯೋಗವಿದೆ
ಒಂದೇ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಯುವ ಸ್ಪಿನ್ನರ್
ಒಂದೇ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಯುವ ಸ್ಪಿನ್ನರ್