ಕೋಟಿ ಕೋಟಿ ಜನರಿಗೆ ಮೋದಿ ವಿಕಸಿತ ಗ್ಯಾರಂಟಿ ಯೋಜನೆಗಳು, ಅಧಿಕಾರಿಗಳೆ ಜನರ ಬಳಿಗೆ ಹೋಗುತ್ತಿದ್ದಾರೆ – ಸಾತೇನಹಳ್ಳಿಯಲ್ಲಿ ಕೇಂದ್ರ ಸಚಿವ

ಹತ್ತಾರು ಯೋಜನೆಗಳ ಮೂಲಕ ಹಳ್ಳಿ ಹಳ್ಳಿಯ ಜನರಿಗೆ ಸವಲತ್ತು ನೀಡ್ತಿರೊ ಕೇಂದ್ರ ಸರ್ಕಾರ ಇದೀಗ ಯೋಜನೆಯ ಫಲ ಸಕಲರಿಗೂ ಸಿಗಲಿ ಅನ್ನೋ ಮಹತ್ವಾಕಾಂಕ್ಷೆಯೊಂದಿಗೆ ವಿಕಸಿತ ಭಾರತ ಯಾತ್ರೆ ಹಮ್ಮಿಕೊಂಡಿದೆ. ಅಧಿಕಾರಿಗಳೆ ಜನರ ಮುಂದೆ ಹೋಗುತ್ತಿರೊದು ಸರ್ಕಾರದ ಯೋಜನೆ ಪಡೆಯಲು ಅಲೆದಾಡುತ್ತಿದ್ದ ಜನರಿಗೆ ನೆಮ್ಮದಿ ತರಿಸಿದೆ.

ಕೋಟಿ ಕೋಟಿ ಜನರಿಗೆ ಮೋದಿ ವಿಕಸಿತ ಗ್ಯಾರಂಟಿ ಯೋಜನೆಗಳು, ಅಧಿಕಾರಿಗಳೆ ಜನರ ಬಳಿಗೆ ಹೋಗುತ್ತಿದ್ದಾರೆ - ಸಾತೇನಹಳ್ಳಿಯಲ್ಲಿ ಕೇಂದ್ರ ಸಚಿವ
ಮೋದಿ ಗ್ಯಾರಂಟಿ ಯೋಜನೆಗಳು, ಅಧಿಕಾರಿಗಳೆ ಜನರ ಬಳಿಗೆ ಹೋಗುತ್ತಿದ್ದಾರೆ - ಸಾತೇನಹಳ್ಳಿಯಲ್ಲಿ ಕೇಂದ್ರ ಸಚಿವ
Updated By: ಸಾಧು ಶ್ರೀನಾಥ್​

Updated on: Dec 18, 2023 | 4:19 PM

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಿಕಸಿತ ಭಾರತ ಯೋಜನೆಯ (Viksit Bharat Yatra) ಮೋದಿ ಗ್ಯಾರಂಟಿ ರಥವು ಹಳ್ಳಿ ಹಳ್ಳಿಯಲ್ಲಿ ಸಂಚಲನ ಮೂಡಿಸಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನ ಜನರಿಗೆ ತಿಳಿಸಿ ತಲುಪಿಸೋ ಜೊತೆಗೆ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುತ್ತಾ ಹಳ್ಳಿಯಿಂದ ದಿಲ್ಲಿವರೆಗೆ ಅರ್ಹ ಜನರಿಗೆ ಸವಲತ್ತು ವಿತರಣೆ ಆಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕನಸು ಸಾಕಾರಗೊಳಿಸಲು ನಡೆಯುತ್ತಿರೊ ಈ ಯಾತ್ರೆ ಹಾಸನ ಜಿಲ್ಲೆಯಲ್ಲಿಯೂ (Sathenahalli, Hassan) ಸಂಚಾರ ಮಾಡುತ್ತಿದ್ದು ನಿನ್ನೆ ಭಾನುವಾರ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್ (Union Minister Krishan Pal Gurjar) ಚಾಲನೆ ನೀಡಿದ್ದು ಎಲ್ಲೆಡೆ ಸಂಚಲನ ಮೂಡಿಸಿದೆ.

ಹಳ್ಳಿ ಹಳ್ಳಿಯಲ್ಲಿ ಮೋದಿ ಗ್ಯಾರಂಟಿ ಯಾತ್ರೆ ಹವಾ.. ಕೇಂದ್ರ ಸರ್ಕಾರದ ಯೋಜನೆಗಳನ್ನ ಮನೆ ಮನೆ ಬಾಗಿಲಿಗೆ ಕೊಂಡೊಯ್ಯಲು ಮುಂದಾದ ಸರ್ಕಾರ.. ಬಡ ಜನರಿಗೆ ನೆರವು ನೀಡಲು ಪ್ರಧಾನಿ ಮೋದಿ ಕರೆ.. ಪಿಎಂ ಕನಸು ನನಸು ಮಾಡಲು ವಿಕಸಿತ ಭಾರತ ಯಾತ್ರೆ.. ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಪ್ರಧಾನಿ ಮೋದಿಯವರ ಕನಸಿನ ಯೋಜನೆ ವಿಕಸಿತ ಭಾರತ ಯಾತ್ರೆ ಹಾಸನದಲ್ಲೂ ಕೂಡ ಹಳ್ಳಿ ಹಳ್ಳಿಯಲ್ಲಿ ಸಂಚರಿಸುತ್ತಾ ಲಕ್ಷ ಲಕ್ಷ ಜನರಿಗೆ ಕೇಂದ್ರದ ಯೋಜನೆಗಳ ಅರಿವು ಮೂಡಿಸೊ ಜೊತೆಗೆ ಯೋಜನೆಯ ಫಲ ಸಿಗುವಂತೆ ಮಾಡುತ್ತಿದ್ದು ಜನರು ಫುಲ್ ಖುಷಿಯಾಗಿದ್ದಾರೆ.

ನಿನ್ನೆ ಭಾನುವಾರ ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವ ಕ್ರಿಶನ್ ಪಾಲ್ ಗುರ್ಜಾರ್ ಅವರು ಚನ್ನರಾಯಪಟ್ಟಣ ತಾಲ್ಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಈ ಯಾತ್ರೆಗೆ ಚಾಲನೆ ನೀಡಿದ್ರು, ನವೆಂಬರ್ 15ರಂದು ಜಾರ್ಖಂಡ್ ನಲ್ಲಿ ಪ್ರಧಾನಿ ಮೋದಿಯವರಿಂದ ಚಾಲನೆಗೊಂಡ ಈ ಯೋಜನೆ ಹಳ್ಳಯಿಂದ ದಿಲ್ಲಿಯವರೆಗೆ ಎಲ್ಲೆಡೆ ಸಂಚಾರ ಮಾಡುತ್ತಿದ್ದು, ಮೋದಿ ಗ್ಯಾರಂಟಿ ಎಂದೇ ಎಲ್ಲೆಡೆ ಜನಮನ್ನಣೆ ಗಳಿಸುತ್ತಿದೆ.

ಕೇಂದ್ರ ಸರ್ಕಾರದ ಮಾತೃವಂದನ, ಕಿಸಾನ್ ಸಮ್ಮಾನ್, ಉಜ್ವಲ ಯೋಜನೆ ಹೀಗೆ ಬಡವರು, ನಿರ್ಗತಿಕರು, ರೈತರು, ಮಹಿಳೆಯರಿಗೆ ಜಾರಿಯಾಗಿರೊ ಯೋಜನೆಗಳ ಬಗ್ಗೆ ಅರಿವು ಮೋಡಿಸಬೇಕು, ಜೊತೆಗೆ ಅರ್ಹರಿಗೆ ಅರ್ಜಿ ಸಲ್ಲಿಸುವಂತೆ ಮಾಡಿ ಅವರಿಗೆ ಯೋಜನೆ ಫಲ ಸಿಗುವಂತೆ ಮಾಡಬೇಕು ಅನ್ನೋ ಮಹತ್ವಾಕಾಂಕ್ಷೆಯೊಂದಿಗೆ ಈ ಯೋಜನೆ ಶುರುವಾಗಿದ್ದು ಇದು ಜನವರಿ 25ವರೆಗೂ ನಡೆಯಲಿದೆ. ಎಲ್ಲರಿಗೂ ಸರ್ಕಾರದ ಯೋಜನೆಯ ಸವಲತ್ತು ತಲುಪಿಸುವುದೇ ನಮ್ಮ ಗುರಿ ಎಂದು ಸಚಿವರು ಹೇಳಿದ್ರು.

ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಕೂಡ ಎರಡು ವಾರಗಳಿಂದ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯೂ ಕೂಡ ಈ ಯಾತ್ರೆ ನಡೆಯುತ್ತಿದೆ. ವಿಕಸಿತ ಭಾರತ ಯಾತ್ರೆಯ ವಾಹನ ಹಳ್ಳಿ ಹಳ್ಳಿಗೆ ಹೋಗುತ್ತಿದ್ದು ಎಲ್ಲೆಡೆ ಬೃಹತ್ ಎಲ್.ಇ.ಡಿ ಪರದೆ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸೋದು, ಈ ಯೋಜನೆಗೆ ಅರ್ಹರಿದ್ದೂ ಅರ್ಜಿ ಸಲ್ಲಿಸದ ಜನರಿಗೆ ಅರ್ಜಿ ಸಲ್ಲಿಸಿ ಯೋಜನೆಯ ಫಲ ಸಿಗುವಂತೆ ಮಾಡೋದು, ಯೋಜನೆಯ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡೋದು ಹಲವು ಜನಪರ ಕಾರ್ಯಗಳ ಜೊತೆಗೆ ಈ ಯೋಜನೆ ಎಲ್ಲೆಡೆ ನಡೆಯುತ್ತಿದ್ದು ಹಳ್ಳಿ ಹಳ್ಳಿಯ ಬಡ ಜನರ ಮನೆಬಾಗಿಲಿಗೆ ಸವಲತ್ತು ತಲುಪಿಸೋ ನಿಟ್ಟಿನಲ್ಲಿ ನಡೆಯುತ್ತಿರೋ ಯೋಜನೆ ಎಲ್ಲರ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ಸಂಸತ್​​ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ -ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್

ನಿನ್ನೆ ಜಿಲ್ಲೆಯಲ್ಲಿ ಅಧಿಕೃತವಾಗಿ ಯೋಜನೆಗೆ ಕೇಂದ್ರ ಸಚಿವರೇ ಚಾಲನೆ ನೀಡಿದ್ರು, ಉಚಿತ ಗ್ಯಾಸ್ ವಿತರಣೆ ಯೋಜನೆ, ಮಾತೃ ವಂದನ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿದ್ರು, ಪ್ರಧಾನಿ ಮೋದಿಯವರ ಕನಸು ಎಲ್ಲರೂ ಅಭಿವೃದ್ದಿಯಾಗಬೇಕು ಎನ್ನೋದು ಹಾಗಾಗಿಯೇ ಎಲ್ಲರ ಶ್ರೇಯೋಭಿವೃದ್ದಿಗೆ ಈ ಯಾತ್ರೆ ನಡೆಯುತ್ತಿದೆ ಎಂದು ಬಣ್ಣಿಸಿದ್ರು, ಯೋಜನೆಯಿಂದ ತಮಗೆ ಅನುಕೂಲವಾಗಿದೆ. ಕೇಂದ್ರದ ಮೋದಿಯವರ ಈ ಕಾರ್ಯಕ್ರಮ ನಮ್ಮ ಕುಟುಂಬಕ್ಕೆ ಆಸರೆಯಾಗಿದೆ ಎಂದು ಜನರು ಖುಷಿ ಹಂಚಿಕೊಂಡ್ರು.

ಒಟ್ನಲ್ಲಿ ಹತ್ತಾರು ಯೋಜನೆಗಳ ಮೂಲಕ ಹಳ್ಳಿ ಹಳ್ಳಿಯ ಜನರಿಗೆ ಸವಲತ್ತು ನೀಡ್ತಿರೊ ಕೇಂದ್ರ ಸರ್ಕಾರ ಇದೀಗ ಯೋಜನೆಯ ಫಲ ಸಕಲರಿಗೂ ಸಿಗಲಿ ಅನ್ನೋ ಮಹತ್ವಾಕಾಂಕ್ಷೆಯೊಂದಿಗೆ ವಿಕಸಿತ ಭಾರತ ಯಾತ್ರೆ ಹಮ್ಮಿಕೊಂಡಿದ್ದು ಸರ್ಕಾರದ ಸವಲತ್ತು ನೀಡಲು ಅಧಿಕಾರಿಗಳೆ ಜನರ ಮುಂದೆ ಹೋಗುತ್ತಿರೊದು ಸರ್ಕಾರದ ಯೋಜನೆ ಪಡೆಯಲು ಅಲೆದಾಡುತ್ತಿದ್ದ ಜನರಿಗೆ ನೆಮ್ಮದಿ ತರಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ