ಹಾಸನ: 2023ರ ಚುನಾವಣೆಯಲ್ಲಿ 130-140 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಹಾಸನದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು. 2006ರಲ್ಲಿ ನನ್ನ ತಂದೆಯವರ ಇಚ್ಛೆಗೆ ವಿರುದ್ಧವಾಗಿ ಹೋದೆ. ಅದರ ಪರಿಣಾಮವಾಗಿ ಅವರ ಆರೋಗ್ಯಕ್ಕೆ ತೊಂದರೆ ಆಯ್ತು. ಮುಂದಿನ ಚುನಾವಣೆಯಲ್ಲಿ 130ರಿಂದ 140 ಸ್ಥಾನ ಗೆಲ್ಲುತ್ತೇವೆ. ನನ್ನ ಜನ್ಮ ಭೂಮಿಯಿಂದ ಸವಾಲು ಸ್ವೀಕರಿಸಿ ಹೊರಟಿದ್ದೇನೆ. ಪ್ರಜ್ವಲ್ ರೇವಣ್ಣ, ಸೂರಜ್ ಎಲ್ಲರ ಭವಿಷ್ಯ ನನಗೆ ಮುಖ್ಯ. ಜನಪರ ಸರ್ಕಾರ ರಚನೆ ಆಗಲು ನನಗೆ ಸಹಾಯ ಮಾಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು.
ಅಧಿಕಾರ ಇರಲಿ ಇಲ್ಲದಿರಲಿ, ನಾವು ಬಡ ರೈತನ ಮಕ್ಕಳು. ಹಾಸನ ರಾಜಕಾರಣದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ನಿಮ್ಮ ಮನೆ ಮಕ್ಕಳು ತಪ್ಪುಮಾಡಿದ್ರೆ ನೀವು ಕ್ಷಮಿಸಲ್ಲವೇ? ನಾನು ಈ ಜಿಲ್ಲೆಯ ಮಣ್ಣಿನಲ್ಲಿ ಜನ್ಮ ಪಡೆದವನು. ರಾಮನಗರ ಜಿಲ್ಲೆ ಜನ ನನಗೆ ರಾಜಕೀಯ ಜನ್ಮ ಕೊಟ್ಟಿದ್ದಾರೆ. ನನ್ನ ದುಡಿಮೆ ಈ ಜಿಲ್ಲೆಯ ಜನರಿಗೆ ಸಲ್ಲಿಸುವ ಗೌರವ. ನಮ್ಮಿಂದ ತಪ್ಪಾಗಿದ್ರೆ ಕ್ಷಮಿಸಿ, ಕ್ಷಮಿಸುವ ಅಧಿಕಾರ ನಿಮಗಿದೆ. ಹೆಚ್.ಡಿ.ರೇವಣ್ಣ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ತಾರೆ. ಹೆಚ್.ಡಿ.ರೇವಣ್ಣ ಸಿಡುಕಿನಿಂದ ಮಾತನಾಡುವ ವ್ಯಕ್ತಿ ಅಷ್ಟೇ. ಆದರೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸದಾ ಆಲೋಚಿಸುವ ವ್ಯಕ್ತಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ನೆಲಮಂಗಲದಿಂದ ಹಾಸನಕ್ಕೆ 4 ಪಥದ ರಸ್ತೆ ನಿರ್ಮಾಣ. ಬೆಂಗಳೂರು-ಅರಸೀಕೆರೆ ರೈಲ್ವೆ ಯೋಜನೆ ಮಾಡಿದ್ಯಾರು? ಈಗ ಯಾವುದೋ ಏರ್ಪೋರ್ಟ್ ಯೋಜನೆ ಬಗ್ಗೆ ಹೇಳ್ತಾರೆ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು. ನಾನು ಸಿಎಂ ಆಗಿದ್ದಾಗ ಹಾಸನ ಜಿಲ್ಲೆಗೆ ಅನುದಾನ ಕೊಟ್ಟಿದ್ದೆ. ಅನುದಾನವನ್ನು ಬೇರೆ ಕಾಲೇಜಿಗೆ ವರ್ಗಾವಣೆ ಮಾಡಿದ್ದರು. ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತ ಆಗಲು ಬಿಜೆಪಿ ಕಾರಣ. ನಾನು ಸಿಎಂ ಆದಾಗ 189 ಪದವಿ ಕಾಲೇಜು ಸ್ಥಾಪನೆ ಮಾಡಿದ್ದು, ಈ ಕಾಲೇಜುಗಳ ಸ್ಥಾಪನೆ ಆಗಲು ಹೆಚ್.ಡಿ.ರೇವಣ್ಣ ಕಾರಣ.
ನಾನು ನಿಮ್ಮ ಹತ್ತಿರ ಇಲ್ಲ, ಆದ್ರೆ ಸಮಸ್ಯೆಗೆ ಸ್ಪಂದಿಸಿದ್ದೇನೆ. ಹಣ ಮಾಡೋದಾಗಿದ್ರೆ ಬೇಕಾದಷ್ಟು ಮಾಡಬಹುದಿತ್ತು. ಆದರೆ ನಾವು ಯಾವುದೇ ಹಣ ಸಂಪಾದನೆ ಮಾಡಿಲ್ಲ. ನಾವು ಕೋಟ್ಯಂತರ ಜನರ ಹೃದಯದಲ್ಲಿ ನೆಲೆಸಿಲ್ಲವೇ ಇದೇ ನಮ್ಮ ಸಂಪಾದನೆ. ಪ್ರಧಾನಿ ಮೋದಿ ಐಟಿ, ಇಡಿ ಮೂಲಕ ಹೆದರಿಸುತ್ತಿದ್ದಾರೆ. ಆದರೆ ನಮ್ಮನ್ನು ಹೆದರಿಸಲು ಆಗಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:48 pm, Tue, 13 September 22