ಕೊರೊನಾ ಸೋಂಕಿತೆಗೆ ಸಹಜ ಹೆರಿಗೆ ಮಾಡಿಸಿದ ಹಾವೇರಿ ಆಸ್ಪತ್ರೆ ವೈದ್ಯರು; ಕೊವಿಡ್ ವಾರಿಯರ್ಸ್​ಗೆ ಸಾರ್ವಜನಿಕರಿಂದ ಮೆಚ್ಚುಗೆ

|

Updated on: May 07, 2021 | 10:33 AM

ಕೊರೊನಾ ಸೋಂಕಿತೆ ಗರ್ಭಿಣಿ ಮಹಿಳೆಗೆ ಡಾ.ನಾಗರಾಜ ನೇತೃತ್ವದ ತಂಡ ಸಹಜ ಹೆರಿಗೆ ಮಾಡಿಸಿದ್ದಾರೆ. ಸೋಂಕಿತೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು‌, ಕೊವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ಸೋಂಕಿತೆಗೆ ಸಹಜ ಹೆರಿಗೆ ಮಾಡಿಸಿದ ಹಾವೇರಿ ಆಸ್ಪತ್ರೆ ವೈದ್ಯರು; ಕೊವಿಡ್ ವಾರಿಯರ್ಸ್​ಗೆ ಸಾರ್ವಜನಿಕರಿಂದ ಮೆಚ್ಚುಗೆ
ಕೊರೊನಾ ಸೋಂಕಿತೆಗೆ ಸಹಜ ಹೆರಿಗೆ ಮಾಡಿಸಿದ ಹಾವೇರಿ ಆಸ್ಪತ್ರೆ ವೈದ್ಯರು
Follow us on

ಹಾವೇರಿ : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿವೆ. ಬ್ಯಾಡಗಿ ತಾಲೂಕಿನಲ್ಲಿ ಈವರೆಗೆ 1354 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ತಾಲೂಕಿನಲ್ಲಿ 21 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ ತಾಲೂಕಿನ ಜನರಲ್ಲಿ ಭಯದ ವಾತಾವರಣವಿದೆ. ಆದರೆ ವೈದ್ಯರು ಮಾತ್ರ ಕೊರೊನಾ ವಾರಿಯರ್ ಆಗಿ ಶ್ರಮಿಸುತ್ತಿದ್ದು, ಜನರನ್ನ ಆರೋಗ್ಯವಂತರನ್ನಾಗಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಬ್ಯಾಡಗಿ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಕೊರೊನಾ‌ ಸೋಂಕಿತ ಗರ್ಭೀಣಿ ಮಹಿಳೆಗೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.

ಬ್ಯಾಡಗಿ ತಾಲೂಕಿನ 26 ವರ್ಷದ ಗರ್ಭಿಣಿಯಲ್ಲಿ ಕಳೆದ ಐದು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮೂರು ದಿನಗಳಿಂದ ಸರಕಾರಿ ಆಸ್ಪತ್ರೆಯಲ್ಲೇ ಇದ್ದ ಗರ್ಭಿಣಿಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯ ವೈದ್ಯ ಡಾ.ನಾಗರಾಜ ನೇತೃತ್ವದಲ್ಲಿ ಸುಶ್ರೂಷಕಿಯರಾದ ಮಾಲಾ, ವಾಣಿ ಮತ್ತು ಉಮಾ ಸೇರಿಕೊಂಡು ಅವರಿಗೆ ಸಹಜ ಹೆರಿಗೆ ಮಾಡಿಸಿದ್ದಾರೆ.

ಕೊರೊನಾ ಸೋಂಕಿತೆ ಗರ್ಭಿಣಿ ಮಹಿಳೆಗೆ ಡಾ.ನಾಗರಾಜ ನೇತೃತ್ವದ ತಂಡ ಸಹಜ ಹೆರಿಗೆ ಮಾಡಿಸಿದ್ದಾರೆ. ಸೋಂಕಿತೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು‌, ಕೊವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲೆಡೆ ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿ ಇರುವ ಈ ಸಮಯದಲ್ಲಿ ಆಸ್ಪತ್ರೆಯ ವೈದ್ಯರು ನಾರ್ಮಲ್ ಡೆಲಿವರಿ ಮಾಡಿಸಿದ್ದು, ಸೋಂಕಿತೆ ಹಾಗೂ ಅವರ ಕುಟುಂಬದವರಲ್ಲಿ ಸಂತಸ ಮೂಡಿಸಿತ್ತು. ಕೊರೊನಾ ಸೋಂಕಿತೆಗೆ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮಾಡಿಸಿದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಂಕಿತೆ ಮೂರು ದಿನಗಳಿಂದ ನಮ್ಮ ಆಸ್ಪತ್ರೆಯಲ್ಲೇ ಇದ್ದರು. ಇವತ್ತು ಐದನೇ ದಿನ. ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸುರಕ್ಷಿತವಾಗಿ ನಾರ್ಮಲ್‌ ಹೆರಿಗೆ ಮಾಡಿಸಿದ್ದೇವೆ. ನಮ್ಮ ಬ್ಯಾಡಗಿ ಆಸ್ಪತ್ರೆಯಲ್ಲಿ ಸೋಂಕಿತೆಗೆ ಹೆರಿಗೆ ಮಾಡಿಸಿದ್ದು ಮೊದಲ ಕೇಸ್. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಸೋಂಕಿತೆಗೆ ಸಹಜ ಹೆರಿಗೆ ಮಾಡಿಸಿದ ವೈದ್ಯ ಡಾ.ನಾಗರಾಜ ಹೇಳಿದ್ದಾರೆ.

ಇದನ್ನೂ ಓದಿ:

ಕೊರೊನಾದಿಂದಾಗಿ ಎಲ್ಲಿ ನೋಡಿದ್ರೂ ಡೆಡ್​ ಬಾಡಿ ಕಾಣ್ತಿವೆ, ಇದೇನಾ ಅಚ್ಛೆ ದಿನ್‌ ಮೋದಿಜಿ..? ಶಾಸಕ ಜಮೀರ್‌ ಅಹ್ಮದ್‌ ಖಾನ್‌

ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ; ಬೆಂಗಳೂರಿನೊಂದಿಗಿನ ಸಂಪರ್ಕವೇ ಕೊವಿಡ್ ತೀವ್ರತೆಗೆ ಕಾರಣ