ಹಾವೇರಿ: ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಸಿಬ್ಬಂದಿಗೆ ಆತ ದೊಡ್ಡ ತಲೆನೋವಾಗಿದ್ದ. ರಾತ್ರೋ ರಾತ್ರಿ ಮಾಡುತ್ತಿದ್ದ ಅತನ ಕೆಲಸದಿಂದ ಅವರ ನೆಮ್ಮದಿಯೇ ಹಾಳಾಗಿತ್ತು. ಪೊಲೀಸರ್ ಕೈಯಲ್ಲಿ ಲಾಕ್ ಆಗಿರುವ ಈ ಮಿಕದ ಹೆಸರು ಮಂಜುನಾಥ್ ಕೊರವರ.
ಹಿರೇಕೆರೂರು ತಾಲೂಕಿನ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳ ಸಿಬ್ಬಂದಿಗೆ ನೆಮ್ಮದಿಯನ್ನೇ ಕಿತ್ತೊಂಡಿದ್ದ ಕಿಲಾಡಿ. ಅಂದಹಾದೇ ಹಿರೇಕೆರೂರು ತಾಲೂಕಿನ ಶಾಲೆಗಳು ಮತ್ತು ಅಂಗನವಾಡಿಗಳ ಅಡುಗೆ ಕೋಣೆಯಲ್ಲಿದ್ದ ಖಾಲಿ ಸಿಲಿಂಡರ್‌ಗಳು ಮಂಗಮಾಯವಾಗುತ್ತಿದ್ದವು. ರಾತ್ರೋರಾತ್ರಿ ಶಾಲೆಯ ಅಡುಗೆ ಕೋಣೆ ಬೀಗ ಒಡೆದು ಸಿಲಿಂಡರ್‌ಗಳನ್ನ ಕದ್ದು ಎಸ್ಕೇಪ್ ಆಗ್ತಿದ್ರು.
ಸಿಲಿಂಡರ್ ಕದಿಯುತ್ತಿದ್ದ ಕಿಲಾಡಿ ಕಳ್ಳ ಅಂದರ್!
ಖಾಲಿ ಸಿಲಿಂಡರ್ ಅಲ್ವಾ ಹೋದ್ರೆ ಹೋಗ್ಲಿ ಅಂತ ಕೆಲವರು ಪೊಲೀಸರಿಗೆ ದೂರು ಕೊಡದೆ ಸುಮ್ಮನಿದ್ರೆ, ಕೆಲವರ ಕೇಸ್ ದಾಖಲಿಸಿದ್ರು. ಹೀಗೆ ಸಿಲಿಂಡರ್ ಕಳ್ಳತನದ ಬಗ್ಗೆ ಹಂಸಭಾವಿ ಮತ್ತು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಒಂದಿಷ್ಟು ಕೇಸ್ ದಾಖಲಾಗಿದ್ದವು. ಈ ಬಗ್ಗೆ ತನಿಖೆ ಮಾಡುತ್ತಿದ್ದ ಹಂಸಭಾವಿ ಪೊಲೀಸರಿಗೆ ಓರ್ವ ಅನುಮಾನಾಸ್ಪದ ರೀತಿಯಲ್ಲಿ ಓಡಾಡ್ತಿದ್ದಾನೆ ಅನ್ನೋ ಮಾಹಿತಿ ಸಿಕ್ಕಿತ್ತು.
ತಕ್ಷಣ ಅಲ್ಲಿಗೆ ಹೋದ ಪೊಲೀಸರು 35 ವರ್ಷದ ಈ ಸಿಲಿಂಡರ್ ಮಂಜುನಾಥ್‌ನನ್ನ ಲಾಕ್ ಮಾಡಿದ್ರು. ನಂತ್ರ ಪೊಲೀಸರು ತಮ್ಮದೇಯಾದ ಭಾಷೆಯಲ್ಲಿ ಈತನನ್ನ ವಿಚಾರಿಸಿದಾಗ ಸಿಲಿಂಡರ್ ಕಳ್ಳತನ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ. ಈತನಿಂದ ಒಟ್ಟು 14 ಖಾಲಿ ಸಿಲಿಂಡರ್‌ಗಳನ್ನ ವಶಕ್ಕೆ ಪಡೆಯಲಾಗಿದೆ.
ಸಿಗರೇಟ್, ಕೂಲ್ ಡ್ರಿಂಕ್ಸ್ ಕದಿಯುತ್ತಿದ್ದ ಆರೋಪಿ:
ಇನ್ನು ಈ ಸಿಲಿಂಡರ್ ಮಂಜ ಮೊದಮೊದಲು ಚಿಕ್ಕಚಿಕ್ಕ ಅಂಗಡಿಗಳನ್ನ ಟಾರ್ಗೆಟ್ ಮಾಡಿ ಅಲ್ಲಿದ್ದ ಸಿಗರೇಟು, ಪಾನ್ ಮಸಾಲ, ಕೂಲ್ ಡ್ರಿಂಕ್ಸ್ಗಳನ್ನ ಕದಿಯುತ್ತಿದ್ದನಂತೆ. ನಂತರದಲ್ಲಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳನ್ನ ಟಾರ್ಗೆಟ್ ಮಾಡಿ ಸಿಲಿಂಡರ್‌ಗಳನ್ನ ಕದಿಯೋಕೆ ಶುರು ಮಾಡಿದ್ನಂತೆ. ನಂತ್ರ ಬಂದಷ್ಟು ಹಣಕ್ಕೆ ಸಿಲಿಂಡರ್ ಮಾರಾಟ ಮಾಡಿ ಮಜಾ ಮಾಡೋದು ಮಂಜುನಾಥನ ಹವ್ಯಾಸ ಆಗಿತ್ತಂತೆ.
ಆದ್ರೆ ಈತನ ಗ್ರಹಚಾರ ಕೆಟ್ಟು ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದು, ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ಸಿಬ್ಬಂದಿ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ನಲ್ಲಿ ಟಾರ್ಗೆಟ್ ಮಾಡಿ ಅಲ್ಲಿನ ಖಾಲಿ ಸಿಲಿಂಡರ್ ಎಗರಿಸ್ತಿದ್ದ ಸಿಲಿಂಡರ್ ಮಂಜ ಖಾಕಿ ಕೈಯಲ್ಲಿ ಲಾಕ್ ಆಗಿದ್ದಾನೆ. ಈತನ ಖತರ್ನಾಕ್ ಕೆಲಸಕ್ಕೆ ಬೆಚ್ಚಿ ಬಿದ್ದ ಸಿಬ್ಬಂದಿ ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published On - 1:47 pm, Tue, 3 March 20