ಶ್ರೀಗಳ ಪುಣ್ಯ ಸ್ಮರಣೋತ್ಸವದಲ್ಲಿ ರಾಶಿ ರಾಶಿ ಖಡಕ್ ಜೋಳದ ರೊಟ್ಟಿ ಊಟ

|

Updated on: Jan 03, 2020 | 1:12 PM

ಹಾವೇರಿ: ನಗರದ ಹುಕ್ಕೇರಿ ಮಠದಲ್ಲಿ ಲಿಂಗೈಕ್ಯ ಶಿವಬಸವ ಮಹಾಶಿವಯೋಗಿಗಳು ಮತ್ತು ಲಿಂಗೈಕ್ಯ ಶಿವಲಿಂಗ ಮಹಾಶಿವಯೋಗಿ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ಯ ಮಠದಲ್ಲಿ ಜಾತ್ರೆ ನಡೆಯುತ್ತದೆ. ಒಂದು ವಾರ ನಡೆಯೋ ಜಾತ್ರೆಯಲ್ಲಿ ರೊಟ್ಟಿಯದ್ದೇ ಹವಾ. ವಿವಿಧ ಪ್ರದೇಶಗಳಲ್ಲಿನ ಮಠದ ಭಕ್ತರು ಜಾತ್ರೆಗೆ ಅಂತಲೇ ವಾರಗಟ್ಟಲೇ ಖಡಕ್ ರೊಟ್ಟಿಗಳನ್ನ ತಯಾರಿಸಿ ಮಠಕ್ಕೆ ತಂದುಕೊಡ್ತಾರೆ. ಕೆಲವರು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ರೊಟ್ಟಿಗಳನ್ನ ತಂದುಕೊಟ್ರೆ, ಮತ್ತೆ ಕೆಲವರು ವಾಹನಗಳಲ್ಲಿ ರೊಟ್ಟಿಗಳನ್ನ ತಂದುಕೊಡ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಖಡಕ್ ರೊಟ್ಟಿಗಳನ್ನ ತಂದು ಕೊಟ್ರೆ, ಮಠದ […]

ಶ್ರೀಗಳ ಪುಣ್ಯ ಸ್ಮರಣೋತ್ಸವದಲ್ಲಿ ರಾಶಿ ರಾಶಿ ಖಡಕ್ ಜೋಳದ ರೊಟ್ಟಿ ಊಟ
Follow us on

ಹಾವೇರಿ: ನಗರದ ಹುಕ್ಕೇರಿ ಮಠದಲ್ಲಿ ಲಿಂಗೈಕ್ಯ ಶಿವಬಸವ ಮಹಾಶಿವಯೋಗಿಗಳು ಮತ್ತು ಲಿಂಗೈಕ್ಯ ಶಿವಲಿಂಗ ಮಹಾಶಿವಯೋಗಿ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ಯ ಮಠದಲ್ಲಿ ಜಾತ್ರೆ ನಡೆಯುತ್ತದೆ. ಒಂದು ವಾರ ನಡೆಯೋ ಜಾತ್ರೆಯಲ್ಲಿ ರೊಟ್ಟಿಯದ್ದೇ ಹವಾ. ವಿವಿಧ ಪ್ರದೇಶಗಳಲ್ಲಿನ ಮಠದ ಭಕ್ತರು ಜಾತ್ರೆಗೆ ಅಂತಲೇ ವಾರಗಟ್ಟಲೇ ಖಡಕ್ ರೊಟ್ಟಿಗಳನ್ನ ತಯಾರಿಸಿ ಮಠಕ್ಕೆ ತಂದುಕೊಡ್ತಾರೆ. ಕೆಲವರು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ರೊಟ್ಟಿಗಳನ್ನ ತಂದುಕೊಟ್ರೆ, ಮತ್ತೆ ಕೆಲವರು ವಾಹನಗಳಲ್ಲಿ ರೊಟ್ಟಿಗಳನ್ನ ತಂದುಕೊಡ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ಜನರು ಖಡಕ್ ರೊಟ್ಟಿಗಳನ್ನ ತಂದು ಕೊಟ್ರೆ, ಮಠದ ಭಕ್ತರು ಮಾದ್ಲಿ, ಬೂಂದಿ, ತರಕಾರಿ ಸೇರಿ ಬಗೆಬಗೆಯ ಪದಾರ್ಥಗಳನ್ನ ಶ್ರೀಮಠಕ್ಕೆ ತಂದು ಕೊಡ್ತಾರೆ. ಹೀಗೆ ಭಕ್ತರು ತಂದು ಕೊಟ್ಟ ಖಡಕ್ ರೊಟ್ಟಿ, ಚಟ್ನಿ, ತರಕಾರಿ, ಸಿಹಿ ಪದಾರ್ಥಗಳಿಂದ ಪ್ರತಿದಿನ ಜಾತ್ರೆಗೆ ಬರೋ ಭಕ್ತರಿಗೆ ಊಟ ನೀಡಲಾಗುತ್ತೆ. ಅದರಲ್ಲೂ ಎಲ್ಲಾ ಜಾತಿ, ಧರ್ಮದವರು ಯಾವುದೇ ಭೇದ ಭಾವವಿಲ್ಲದೆ ಒಂದೆಡೆ ಬೆರೆತು ರೊಟ್ಟಿ ಊಟ ಸವಿದು ಜಾತ್ರೆಯನ್ನು ಸಂಭ್ರಮದಿಂದ ಆಚರಿಸ್ತಾರೆ.

ಒಂದು ವಾರ ಹುಕ್ಕೇರಿ ಮಠದಲ್ಲಿ ಖಡಕ್ ರೊಟ್ಟಿಗಳ ಸದ್ದು ಕೇಳುತ್ತಿರುತ್ತೆ. ಭಕ್ತರು ತಂದುಕೊಟ್ಟ ರೊಟ್ಟಿ ಊಟವನ್ನ ಭಕ್ತರಿಗೆ ಉಣಬಡಿಸಿ ಜಾತ್ರೆಯ ಸಡಗರ ಹೆಚ್ಚಿಲಸಾಗುತ್ತೆ. ಎಲ್ಲಾ ಜಾತಿ ಧರ್ಮದ ಜನರು ಒಂದೆಡೆ ಬೆರೆತು ಜಾತ್ರೆಯನ್ನ ಆಚರಿಸೋದು ಇಲ್ಲಿನ ಮತ್ತೊಂದು ವಿಶೇಷ.

Published On - 1:11 pm, Fri, 3 January 20