ಈಶ್ವರಪ್ಪರ ಮಕ್ಕಳಾಟವೇ ಬಿಜೆಪಿಯಲ್ಲಿ ಅಶಿಸ್ತಿಗೆ ಕಾರಣವಾಗಿದೆ, ವಲಸಿಗರಿಂದಲ್ಲ: ಬಿಸಿ ಪಾಟೀಲ್, ಮಾಜಿ ಶಾಸಕ

Updated on: Aug 22, 2023 | 2:58 PM

ವಲಸೆ ಬಂದ ಕಾಂಗ್ರೆಸ್ ಶಾಸಕರಿಂದಲೇ ಬಿಜೆಪಿಯಲ್ಲಿ ಅಶಿಸ್ತು ಉಂಟಾಗಿದೆ ಎಂದು ಎರಡೆರಡು ಬಾರಿ ಹೇಳಿರುವ ಈಶ್ವರಪ್ಪ ನಂತರ ತನಗೆ ಫೋನ್ ಮಾಡಿ, ಇಲ್ಲ ನಾನು ಹಾಗೆ ಹೇಳಿಲ್ಲ ಅನ್ನುತ್ತಾರೆ ಎಂದು ಪಾಟೀಲ್ ಹೇಳಿದರು.

ಹಾವೇರಿ: ಬಿಜೆಪಿಗೆ ವಲಸೆ ಹೋದ ಕಾಂಗ್ರೆಸ್ ನಾಯಕರು ಪಕ್ಷದ ವರಿಷ್ಠ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ನಾವು ಈಗಾಗಲೇ ವರದಿ ಮಾಡಿರುವಂತೆ ಎಸ್ ಟಿ ಸೋಮಶೇಖರ್ (ST Somashekhar), ಶಿವರಾಂ ಹೆಬ್ಬಾರ್ (Shivaram Hebbar) ತಮ್ಮ ಕೋಪವನ್ನು ಬಹಿರಂಗಗೊಳಿಸಿದ್ದಾರೆ. ಅವರಿಬ್ಬರು ಇಷ್ಟರಲ್ಲೇ ವಾಪಸ್ಸು ಕಾಂಗ್ರೆಸ್ ಗೆ ಹೋದರೆ ಆಶ್ವರ್ಯವಿಲ್ಲ. ಇಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಶಾಸಕ ಬಿಸಿ ಪಾಟೀಲ್ (BC Patil) ಸಹ ಈಶ್ವರಪ್ಪ ವಿರುದ್ಧ ಕಿಡಿಕಾರಿದರು. ವಲಸೆ ಬಂದ ಕಾಂಗ್ರೆಸ್ ಶಾಸಕರಿಂದಲೇ ಬಿಜೆಪಿಯಲ್ಲಿ ಅಶಿಸ್ತು ಉಂಟಾಗಿದೆ ಎಂದು ಎರಡೆರಡು ಬಾರಿ ಹೇಳಿರುವ ಈಶ್ವರಪ್ಪ ನಂತರ ತನಗೆ ಫೋನ್ ಮಾಡಿ, ಇಲ್ಲ ನಾನು ಹಾಗೆ ಹೇಳಿಲ್ಲ ಅನ್ನುತ್ತಾರೆ ಎಂದು ಪಾಟೀಲ್ ಹೇಳಿದರು. ಹೇಳೋದನ್ನು ಹೇಳಿದ ನಂತರ, ತನ್ನಿಂದ ತಪ್ಪಾಯಿತು ಅನ್ನುವ ಈಶ್ವರಪ್ಪನವರ ಹುಡುಗಾಟವೇ ಬಿಜೆಪಿಯಲ್ಲಿ ಅಶಿಸ್ತಿಗೆ ಕಾರಣವಾಗಿದೆ, ಅವರು ತಮ್ಮ ಹಿರಿತನಕ್ಕೆ ತಕ್ಕ ಮತಾಡಬೇಕು ಎಂದು ಪಾಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More