ಕಾವೇರಿ ನೀರಿಗಾಗಿ ರಾಷ್ಟ್ರಪತಿಗಳಿಗೆ ರಕ್ತದಲ್ಲಿ ಪತ್ರ ಬರೆದ ಹಾವೇರಿ ಯುವಕ, ರೈತರಿಗೆ ಸ್ಪಂದಿಸುವಂತೆ ಮನವಿ

| Updated By: ಆಯೇಷಾ ಬಾನು

Updated on: Oct 02, 2023 | 5:46 PM

ಕಾವೇರಿ ನದಿ ನೀರಿಗಾಗಿ ದಿನ ನಿತ್ಯ ವಿನೂತನ ಹೋರಾಟದ ಮೂಲಕ, ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಗಮನ ಸೆಳೆಯುವ ಕಾರ್ಯ ನಿರಂತರವಾಗಿ ನಡೆಯುತ್ತಲೆ ಇದೆ. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಯುವಕನೊಬ್ಬ ರಕ್ತದಲ್ಲಿ ಪತ್ರ ಬರೆಯುವುದರ ಮೂಲಕ ಕಾವೇರಿ ಭಾಗದ ರೈತರ ಜೊತೆಗೆ ಕೈ ಜೋಡಿಸಿ ಕಾವೇರಿ ನೀರಿಗಾಗಿ ಹೋರಾಟ ನಡೆಸಿದ್ದಾನೆ.

ಕಾವೇರಿ ನೀರಿಗಾಗಿ ರಾಷ್ಟ್ರಪತಿಗಳಿಗೆ ರಕ್ತದಲ್ಲಿ ಪತ್ರ ಬರೆದ ಹಾವೇರಿ ಯುವಕ, ರೈತರಿಗೆ ಸ್ಪಂದಿಸುವಂತೆ ಮನವಿ
ಪ್ರಕಾಶ್
Follow us on

ಹಾವೇರಿ, ಅ.02: ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ (Cauvery Water Dispute). ಕಾವೇರಿ ನೀರಿಗಾಗಿ ಒಂದೇ ವಾರದಲ್ಲೇ ಎರಡೆರಡು ಬಂದ್​ಗಳು ನಡೆದಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ದ ರೈತರು ವಿನೂತನ ಪ್ರತಿಭಟನೆ (Protest) ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಬಿಡುವುದನ್ನು ನಿಲ್ಲಿಸುವಲ್ಲಿ ಮಾತ್ರ ಯಶಸ್ಸು ಸಿಗಲಿಲ್ಲ. ಇಷ್ಟಾದ್ರೂ ರಾಜ್ಯದಲ್ಲಿ ಮಾತ್ರ ಕಾವೇರಿಯ ಕಾವು ಇನ್ನೂ ತಣ್ಣಗಾಗಿಲ್ಲ. ರಾಜ್ಯದ ರೈತರು ಅನುಭವಿಸುತ್ತಿರುವ ಸಮಸ್ಯೆ ಕುರಿತು ಗಮನಸೆಳೆಯುವ ಕಾರ್ಯ ನಡೆಯುತ್ತಲೆ ಇದೆ. ಈಗಾಗಲೇ ನಟರು, ಕನ್ನಡ ಪರ ಸಂಘಟನೆಗಳು ರಕ್ತದಲ್ಲಿ ಪತ್ರ (Blood Letter) ಬರೆದು ಪ್ರಧಾನಿ ಮೋದಿಯವರಿಗೆ ಕಳಿಸಿದ್ದಾರೆ. ಇದೇ ಮಾರ್ಗದಲ್ಲಿ ಸಾಗಿದ ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದ ಯುವಕನೊಬ್ಬ ತನ್ನ ರಕ್ತದಿಂದ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದರ ಮೂಲಕ ಆದಷ್ಟು ಬೇಗ ನಮ್ಮ ರೈತರ ಮನವಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದ್ಧಾನೆ.

ಇನ್ನೂ ಕಳೆದ ವಾರ ನಡೆದ ಕರ್ನಾಟಕ ಬಂದ್​ಗೆ ಉತ್ತರ ಕರ್ನಾಟಕ ಭಾಗದಲ್ಲಿ ಒಳ್ಳೆ ಸ್ಪಂದನೆ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಆದೆಲ್ಲ ಮಾತುಗಳಿಗೆ ಫುಲ್ ಸ್ಟಾಪ್ ಇಟ್ಟಿರುವ ಪ್ರಕಾಶ್, ಉತ್ತರ ಕರ್ನಾಟಕ ಆಗಲಿ ದಕ್ಷಿಣ ಕರ್ನಾಟಕ ಆಗಲಿ ಎಲ್ಲ ರೈತರು ಒಂದೆ. ಇಂದು ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಅವರ ಕುಟುಂಬದ ಕಷ್ಟ ನಾನು ಕಂಡಿದ್ದೆನೆ. ಈ ಸಮಸ್ಯೆ ರಾಜ್ಯದ ಬೇರೆ ಯಾವ ರೈತ ಕುಟುಂಬಗಳಿಗೆ ಬಾರದಿರಲಿ ಎಂಬುವುದು ನನ್ನ ಕಳಕಳಿ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ: ರಕ್ತದ ಮೂಲಕ ಪ್ರಧಾನಿಗೆ ಪತ್ರ ಬರೆದು ಅಭಿಯಾನ ಆರಂಭಿಸಿದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ

ಒಟ್ಟಾರೆಯಾಗಿ ಕಾವೇರಿ ನದಿ ನೀರು ತಡೆಯಲು ಸರ್ಕಾರ ಮುಂದಾಗುತ್ತಿಲ್ಲ ಆದ್ರೆ, ರಾಜ್ಯದ ಜನರೆಲ್ಲ ಒಂದಾಗಿ ರಾಜ್ಯದ ನೆಲ ಜಲ ಭಾಷೆಯ ಉಳುವಿಗಾಗಿ ನಿರಂತರವಾಗಿ ಮಾಡುತ್ತಿರುವ ಹೋರಾಟಕ್ಕೆ ಯಾವಾಗ ಜಯ ಸಿಗುತ್ತದೆ ಎಂಬುವುದನ್ನ ಕಾದು ನೋಡಬೇಕಿದೆ.

ಹಾವೇರಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:42 pm, Mon, 2 October 23