ಹಾನಗಲ್ ಪ್ರಚಾರ ಅಖಾಡದಲ್ಲಿ ಸಿಎಂ ಬೊಮ್ಮಾಯಿ, ಸುಖಕರ ಪ್ರಯಾಣಕ್ಕೆ ಸ್ಪೀಡ್ ಬ್ರೇಕರ್ ತೆರವು

| Updated By: ಆಯೇಷಾ ಬಾನು

Updated on: Oct 21, 2021 | 12:40 PM

ಹಾನಗಲ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆಂದು ಇಂದು ಆಲದಕಟ್ಟಿ ಗ್ರಾಮಕ್ಕೆ ಸಿಎಂ ಬೊಮ್ಮಾಯಿ ಆಗಮಿಸಿದ್ದಾರೆ. ಹೀಗಾಗಿ PWD ಅಧಿಕಾರಿಗಳಿಂದ ಹಂಪ್ಸ್ ತೆರವು ಮಾಡಲಾಗಿದೆ. ಹಾವೇರಿ-ಹಾನಗಲ್ ರಸ್ತೆಯಲ್ಲಿರುವ 8-10 ಹಂಪ್ಸ್ ತೆರವು ಮಾಡಲಾಗಿದೆ.

ಹಾನಗಲ್ ಪ್ರಚಾರ ಅಖಾಡದಲ್ಲಿ ಸಿಎಂ ಬೊಮ್ಮಾಯಿ, ಸುಖಕರ ಪ್ರಯಾಣಕ್ಕೆ ಸ್ಪೀಡ್ ಬ್ರೇಕರ್ ತೆರವು
ಸ್ಪೀಡ್ ಬ್ರೇಕರ್ ತೆರವು
Follow us on

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನ ಹಿನ್ನೆಲೆಯಲ್ಲಿ ಸಿಎಂ ಪ್ರಯಾಣಿಸುವ ರಸ್ತೆಯಲ್ಲಿನ ಸ್ಪೀಡ್ ಬ್ರೇಕರ್ ತೆರವು ಮಾಡಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆಂದು ಇಂದು ಆಲದಕಟ್ಟಿ ಗ್ರಾಮಕ್ಕೆ ಸಿಎಂ ಬೊಮ್ಮಾಯಿ ಆಗಮಿಸಿದ್ದಾರೆ. ಹೀಗಾಗಿ PWD ಅಧಿಕಾರಿಗಳಿಂದ ಹಂಪ್ಸ್ ತೆರವು ಮಾಡಲಾಗಿದೆ. ಹಾವೇರಿ-ಹಾನಗಲ್ ರಸ್ತೆಯಲ್ಲಿರುವ 8-10 ಹಂಪ್ಸ್ ತೆರವು ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ಇರೋ ರೋಡ್ ಹಂಪ್ಸ್ ತೆರವು ಮಾಡಲಾಗುತ್ತಿದೆ. ಶಾಲೆ ಇರೋ‌ ಕಾರಣಕ್ಕಾಗಿ ಹಂಪ್ಸ್ ಹಾಕಲಾಗಿತ್ತು.

ಸದ್ಯ ಸಿಎಂ ಬೊಮ್ಮಾಯಿ ಕ್ಷೇತ್ರ ವ್ಯಾಪ್ತಿಯ ಗಡಿಯಂಕನಹಳ್ಳಿ ಗ್ರಾಮದ ಬಳಿ ಇರೋ ವಂಶಿ ಫಾರ್ಮ್ ನಲ್ಲಿ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. ಮಧ್ಯಾಹ್ನ 3.30 ರಿಂದ ರಾತ್ರಿ 7 ಗಂಟೆಯವರೆಗೆ ಪ್ರಚಾರ ಮಾಡಲಿದ್ದಾರೆ. ಮಕರವಳ್ಳಿ, ಹೊಂಕಣ, ತಿಳುವಳ್ಳಿ, ಬ್ಯಾತನಾಳ, ಕೂಸನೂರ, ಬ್ಯಾಗಬಾದಿ ಮತ್ತು ಉಪ್ಪುಣಸಿ ಗ್ರಾಮಗಳಲ್ಲಿ ಸಿಎಂ ಮತಬೇಟೆ ನಡೆಸಲಿದ್ದಾರೆ‌.) ಇನ್ನು, ಸಚಿವರಾದ ಡಾ.ಸುಧಾಕರ್, ಮುನಿರತ್ನ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್ ಸೇರಿ ಘಟಾನುಘಟಿಗಳ ದಂಡೇ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಕಮಲ ಅರಳಿಸಲು ಶ್ರಮಿಸುತ್ತಿದ್ದಾರೆ.

ಹಾನಗಲ್ ಅಖಾಡದಲ್ಲಿ ಸಿಎಂ ಬೊಮ್ಮಾಯಿ
ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ಉಪಚುನಾವಣೆ ಅಖಾಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಇಳಿದಿದ್ದು ನಿನ್ನೆಯಿಂದ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದಾರೆ. ಗೆಲುವಿಗಾಗಿ ಇನ್ನಿಲ್ಲದಂತೆ ಹೋರಾಡ್ತಿದ್ದಾರೆ. ನಿನ್ನೆ ರಾತ್ರಿ 7.30ರ ಸುಮಾರಿಗೆ ನರೇಗಲ್‌ನ ವಿರಕ್ತಮಠ ಮತ್ತು ಮಾರನಬೀಡದ ಚನ್ನಬಸವೇಶ್ವರ ಮಠಕ್ಕೆ ಭೇಟಿ ನೀಡಿದ್ರು. ನರೇಗಲ್‌ನಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಗದ್ದುಗೆ ದರ್ಶನ ಪಡೆದುಕೊಂಡ್ರೆ, ಮಾರನಬೀಡ ಗ್ರಾಮದಲ್ಲಿ ಚನ್ನಬಸವೇಶ್ವರ ಗದ್ದುಗೆ ದರ್ಶನ ಪಡೆದುಕೊಂಡ್ರು.. ಇದೇ ವೇಳೆ ಮಾತಾಡಿರುವ ಸಿಎಂ, ಕಾಂಗ್ರೆಸ್, ಜೆಡಿಎಸ್ನವರು ಅಲ್ಪಸಂಖ್ಯಾತರ ಮತಗಳಿಗಾಗಿ ಆರ್ಎಸ್ಎಸ್ ವಿರುದ್ಧ ಮಾತಾಡ್ತಿದ್ದಾರೆ ಅಂತಾ ಟಾಂಗ್ ಕೊಟ್ರು.

ಇದನ್ನೂ ಓದಿ: ದೇಶ ಅಭಿವೃದ್ಧಿಯಾಗಬೇಕಾದರೆ ಶಾಂತಿ ಮುಖ್ಯ: ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು