ಹಾವೇರಿ: ಎತ್ತಿನ ಮೈ ತೊಳೆಯಲು ಹೋಗಿದ್ದ ವೇಳೆ ಯುವಕ ನದಿಯಲ್ಲಿ ಕೊಂಚಿ ಹೋಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ನಡೆದಿದೆ. ಎತ್ತಿಗೆ ಮೈ ತೊಳೆಯಲು ಹೋಗಿ ಯುವಕ ಧರ್ಮಾ ನದಿ ನೀರು ಪಾಲಾಗಿದ್ದಾನೆ. ಬಸವರಾಜ ಜಾಡರ (19) ನೀರು ಪಾಲಾದ ಯುವಕ. ಸದ್ಯ ಸ್ಥಳೀಯರು ನದಿ ನೀರಿನಿಂದ ಯುವಕನ ಮೃತದೇಹ ಹೊರತೆಗೆದಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಮರಾಜನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕೆಎಸ್ಆರ್ಟಿಸಿ ಬಸ್
ಚಾಮರಾಜನಗರ: ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಕೆಳಕ್ಕೆ ಬಿದ್ದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹಾಗೂ ಐದು ಮಂದಿ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕುಡುವಾಳೆ ಬಳಿ ನಡೆದಿದೆ. ಕೊಳ್ಳೇಗಾಲದಿಂದ ಪಿ.ಜಿ.ಪಾಳ್ಯಕ್ಕೆ ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.
ಸೇತುವೆ ಕೆಳಗಿನ ಕಾಲುವೆಗೆ ಬಸ್ ಬಿದ್ದಿದೆ. ಕಾಲುವೆಯಲ್ಲಿನ ನೀರಿಗೆ ಬಸ್ ಬಿದ್ದ ಕಾರಣ ಸದ್ಯ ಸ್ಥಳೀಯರು ಪ್ರಯಾಣಿಕರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಮಾಳಿಗನತ್ತ ಗ್ರಾಮದ ಶಿವಮ್ಮ(70), ಪಿ.ಜಿ.ಪಾಳ್ಯದ ರಮೇಶ್(28) ಮೃತಪಟ್ಟಿದ್ದಾರೆ. ಶಿವಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ರಮೇಶ್ ಕಾಮಗೆರೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Viral Video: ಚಲಿಸುವ ರೈಲಿನಿಂದ ಬಿದ್ದ ಯುವಕ; ಹೀರೋ ರೀತಿ ಬಂದು ಜೀವ ಉಳಿಸಿದ ರೈಲ್ವೆ ಸಿಬ್ಬಂದಿ
Published On - 4:58 pm, Mon, 14 March 22