ಮೈನವಿರೇಳಿಸಿದ ಟಗರು ಕಾಳಗ: ವಿಜೇತ ಟಗರಿಗೆ ಭರ್ಜರಿ ಗಿಫ್ಟ್

|

Updated on: Jan 12, 2020 | 6:27 PM

ಹಾವೇರಿ: ರಾಣೆಬೆನ್ನೂರು ನಗರದ ಮಾರುತಿ ನಗರದ ತುಂಗಾಜಲ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ದೇವಾಲಯ ಸಮಿತಿ ವತಿಯಿಂದ ರಾಜ್ಯಮಟ್ಟದ ಟಗರು ಕಾಳಗ ಆಯೋಜನೆ ಮಾಡಲಾಗಿತ್ತು. ಹತ್ತಾರು ತಿಂಗಳು ತಮ್ಮ ಟಗರುಗಳನ್ನ ಪಳಗಿಸಿದ್ದವರೆಲ್ಲಾ ಫೀಲ್ಡ್​ಗೆ ಎಂಟ್ರಿಕೊಟ್ಟು, ತಮ್ಮ ಕುರಿಗಳ ತಾಕತ್ತು ಪ್ರದರ್ಶಿಸಿದ್ರು. ವಿಜೇತರಿಗೆ ಭರ್ಜರಿ ಗಿಫ್ಟ್: ಹಾಲು ಹಲ್ಲಿನ‌ ಟಗರು, 2 ಹಲ್ಲಿನ ಟಗರು, 4 ಹಲ್ಲಿನ‌ ಟಗರು ಹೀಗೆ ಬೇರೆ ಬೇರೆ ಹಂತಗಳಲ್ಲಿ ಟಗರು ಕಾಳಗ ನಡೆಯಿತು. ವಿಜೇತ ಟಗರಿಗೆ ಭರ್ಜರಿ ಗಿಫ್ಟ್ ಕೂಡ ಇಡಲಾಗಿತ್ತು. ಬೈಕ್, ಟಿವಿ ಸೇರಿದಂತೆ […]

ಮೈನವಿರೇಳಿಸಿದ ಟಗರು ಕಾಳಗ: ವಿಜೇತ ಟಗರಿಗೆ ಭರ್ಜರಿ ಗಿಫ್ಟ್
Follow us on

ಹಾವೇರಿ: ರಾಣೆಬೆನ್ನೂರು ನಗರದ ಮಾರುತಿ ನಗರದ ತುಂಗಾಜಲ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ದೇವಾಲಯ ಸಮಿತಿ ವತಿಯಿಂದ ರಾಜ್ಯಮಟ್ಟದ ಟಗರು ಕಾಳಗ ಆಯೋಜನೆ ಮಾಡಲಾಗಿತ್ತು. ಹತ್ತಾರು ತಿಂಗಳು ತಮ್ಮ ಟಗರುಗಳನ್ನ ಪಳಗಿಸಿದ್ದವರೆಲ್ಲಾ ಫೀಲ್ಡ್​ಗೆ ಎಂಟ್ರಿಕೊಟ್ಟು, ತಮ್ಮ ಕುರಿಗಳ ತಾಕತ್ತು ಪ್ರದರ್ಶಿಸಿದ್ರು.

ವಿಜೇತರಿಗೆ ಭರ್ಜರಿ ಗಿಫ್ಟ್:
ಹಾಲು ಹಲ್ಲಿನ‌ ಟಗರು, 2 ಹಲ್ಲಿನ ಟಗರು, 4 ಹಲ್ಲಿನ‌ ಟಗರು ಹೀಗೆ ಬೇರೆ ಬೇರೆ ಹಂತಗಳಲ್ಲಿ ಟಗರು ಕಾಳಗ ನಡೆಯಿತು. ವಿಜೇತ ಟಗರಿಗೆ ಭರ್ಜರಿ ಗಿಫ್ಟ್ ಕೂಡ ಇಡಲಾಗಿತ್ತು. ಬೈಕ್, ಟಿವಿ ಸೇರಿದಂತೆ ವಿವಿಧ ಬಹುಮಾನಗಳನ್ನ ನೀಡಲಾಯಿತು. ಬಹುಮಾನಗಳನ್ನ ಮುಡಿಗೇರಿಸಿಕೊಳ್ಳಲು ಟಗರುಗಳ ಮಧ್ಯೆ ಭರ್ಜರಿ ಫೈಟ್ ನಡೆಯಿತು. ಒಂದು, ಎರಡು, ಮೂರು ಅಂತಾ ಒಂದಾದ ನಂತರ ಒಂದೊಂದು ಡಿಚ್ಚಿಕೊಟ್ಟು ಟಗರುಗಳು ತಮ್ಮ ತಾಕತ್ತು ಪ್ರದರ್ಶಿಸಿದ್ವು. ಇನ್ನೂ ಕೆಲವು ಟಗರುಗಳು ಎದುರಾಳಿಯ ಆರ್ಭಟ ನೋಡಿ ಓಟ ಕಿತ್ತಿದ್ವು.

ಟಗರುಗಳಿಗೆ ಹತ್ತಾರು ಹೆಸರುಗಳನ್ನ ಇಟ್ಟಿದ್ದು ಟಗರು ಕಾಳಗಕ್ಕೆ ಮತ್ತಷ್ಟು ಮೆರಗು ತಂದಿತ್ತು. ಇನ್ನೂ ಕೆಲವರು ಚಿತ್ರ ನಟರು ಮತ್ತು ಸೆಲಬ್ರಿಟಿಗಳ ಹೆಸರನ್ನ ನಾಮಕರಣ ಮಾಡಿದ್ದರು. ಒಟ್ನಲ್ಲಿ ಗೆಲುವಿಗಾಗಿ ಜಿದ್ದಿನಿಂದ ಹೋರಾಡಿದ ಟಗರುಗಳು ಫೇಮಸ್ ಆದ್ರೆ, ಅಖಾಡದಿಂದ ಕಾಲ್ಕಿತ್ತ ಟಗರುಗಳನ್ನ ನೋಡಿ ಜನ ಮುಸಿ ಮುಸಿ ನಕ್ಕರು.