ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಅನ್ನೋ ಸಿದ್ದರಾಮಯ್ಯನವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಇಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
‘BJP ಜತೆ ಕುಮಾರಸ್ವಾಮಿ ಒಳಒಪ್ಪಂದ ಮಾಡಿಕೊಂಡಿದ್ದಾರೆ’ ಎಂದೆಲ್ಲಾ ಮಾತಾಡಿ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದಾರೆ ಸಿದ್ದರಾಮಯ್ಯ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು, ಬಿಜೆಪಿಯ ‘ಬಿ’ ಟೀಂ ಅಂದಿದ್ರಿ ಎಂದೂ ಕುಮಾರಸ್ವಾಮಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಅಂದು ಸಿದ್ದರಾಮಯ್ಯ ಕುತಂತ್ರದ ರಾಜಕಾರಣ ಮಾಡಿದ್ರು, ಹೀಗಾಗಿ ಬಿಜೆಪಿಗೆ 105 ಬಂತು, ಇಲ್ಲಿದಿದ್ರೆ ಬಿಜೆಪಿಗೆ 70 ಸ್ಥಾನ ಬರ್ತಿತ್ತು. ಬಿಜೆಪಿ ಅವ್ರು ಏನ್ ಸಾಧನೆ ಮಾಡಿದ್ದಾರೆ ಅಂತ ನಾನು ಅವ್ರ ಜೊತೆ ಒಳಒಪ್ಪಂದ ಮಾಡಿಕೊಳ್ಳಬೇಕು. ಕಾಂಗ್ರೆಸ್ ಗಿಂತ ಎರಡು ಪಟ್ಟು ಈ ಚುನಾವಣೆಯಲ್ಲಿ ನಾನು ಕೆಲಸ ಮಾಡಲು ಮುಂದಾಗಿದ್ದೇನೆ.
2008 ರಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿತ್ತು. ಅವತ್ತು ಕಾಂಗ್ರೆಸ್, ಜೆಡಿಎಸ್ ಉಪಚುನಾವಣೆ ಯಲ್ಲಿ ಎಷ್ಟು ಸ್ಥಾನ ಗೆದ್ದಿತ್ತು ಎಂದು ಮೊದಲು ತಿಳಿದುಕೊಳ್ಳಿ. ಕಾಂಗ್ರೆಸ್ ಗಿಂತಲೂ ನಾವೇ ಅವತ್ತು ಜಾಸ್ತಿ ಸ್ಥಾನ ಗೆದ್ದೆವು. ನೀವು ನಮ್ಮಿಂದ ಗೋವಿಂದರಾಜನಗರ ಗೆದ್ರಿ. ನಾವು ಯಡಿಯೂರಪ್ಪ ಅವ್ರನ್ನ ಉಳಿಸುತ್ತೇವೆ ಅಂತ ಹೇಳಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರೋದ್ರೀಂದ ಸರ್ಕಾರಕ್ಕೆ ಅನುಕೂಲ ಅಂತ ದೇವೇಗೌಡರು ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.
Published On - 3:44 pm, Wed, 13 November 19