ಬೆಂಗಳೂರಲ್ಲಿ ಧಾರಾಕಾರ ಮಳೆ: ವಾಹನ ಸವಾರರ ಪರದಾಟ
ಬೆಂಗಳೂರಲ್ಲಿ ಏಕಾಏಕಿ ಸುರಿದ ಧಾರಾಕಾರ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಲಾಂಗ್ ವೀಕೆಂಡ್ ಹಿನ್ನಲೆ ನಗರ ಸುತ್ತಲು ಮನೆಯಿಂದ ಹೊರಬಂದವರಿಗೆ ವರುಣ ಶಾಕ್ ಕೊಟ್ಟಿದ್ದು, ಹಲವು ದಿನಗಳ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದಾನೆ. ಚ್ಮಂಡ್ ಸರ್ಕಲ್, ಶಾಂತಿನಗರ, ಲಾಲ್ ಬಾಗ್, ಕೆ.ಆರ್.ಸರ್ಕಲ್, ಚಾಮರಾಜಪೇಟೆ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಜಯನಗರ ಸೇರಿ ಹಲವೆಡೆ ಧಾರಾಕಾರ ಮಳೆಯಾಗಿದೆ.
ಬೆಂಗಳೂರು, ಅಕ್ಟೋಬರ್ 02: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹಲವು ದಿನಗಳ ಬಿಡುವು ಕೊಟ್ಟಿದ್ದ ಮಳೆರಾಯ (Rain) ಮತ್ತೆ ಅಬ್ಬರಿಸಿದ್ದಾನೆ. ನಗರದ ರಿಚ್ಮಂಡ್ ಸರ್ಕಲ್, ಶಾಂತಿನಗರ, ಲಾಲ್ ಬಾಗ್, ಕೆ.ಆರ್.ಸರ್ಕಲ್, ಚಾಮರಾಜಪೇಟೆ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಜಯನಗರ ಸೇರಿ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆ ನೀರು ರಸ್ತೆಯಲ್ಲೇ ಹರಿದ ಪರಿಣಾಮ ವಾಹನ ಸವಾರರು ಪರದಾಡಿದ ಪ್ರಸಂಗವೂ ನಡೆದಿದೆ. ಲಾಂಗ್ ವೀಕೆಂಡ್ ಹಿನ್ನಲೆ ನಗರ ಸುತ್ತಲು ಮನೆಯಿಂದ ಹೊರಬಂದವರಿಗೆ ವರುಣ ಶಾಕ್ ಕೊಟ್ಟಿದ್ದಾನೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us