ನರಗುಂದದಲ್ಲಿ ಕುಸಿಯುತ್ತಿದೆ ಭೂಮಿ, ಬಿರುಕು ಬಿಡುತ್ತಿವೆ ನೂರಾರು ವರ್ಷದ ಮನೆಗಳು

ಗದಗ: ನಾಲ್ಕೈದು ತಲೆಮಾರು ಬಾಳಿ ಬದುಕಿದ್ದ, ಒಂದೂವರೆ ಶತಮಾನ ಕಂಡರೂ ಬಂಡೆಗಲ್ಲಿನಂತೆ ಇದ್ದಂತಹ ಸಾವಿರಾರು ನೆನಪುಗಳನ್ನ ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿರೋ ಮನೆಗಳು ಈಗ ಅಲುಗಾಡೋಕೆ ಶುರುವಾಗಿದೆ. ಭೂಕುಸಿತದಿಂದ ಉಂಟಾಗುತ್ತಿರುವ ತೊಂದರೆಯಿಂದ ನರಗುಂದದ ಜನ ಕಣ್ಣೀರು ಸುರಿಸುತ್ತಿದ್ದಾರೆ. ಶತಮಾನಗಳ ಕಟ್ಟಿಡಗಳಿಗೆ ಬಂತು ಕುತ್ತು: ಬ್ರಿಟಿಷರ ಕಾಲದಲ್ಲಿ ಕಟ್ಟಿದ್ದ ವಿಶಾಲವಾದ ಭವ್ಯ ಮನೆ ನೂರಾರು ವರ್ಷದಿಂದ ಸಣ್ಣ ಮುಕ್ಕು ಕಾಣದಿದ್ದ ಗದಗ ಜಿಲ್ಲೆಯ ನರಗುಂದದಲ್ಲಿನ ಮನೆಗಳು ಈಗ ಉಂಟಾಗ್ತಿರೋ ಭೂ ಕುಸಿತಕ್ಕೆ ಐತಿಹಾಸಿಕ ಮನೆಗಳಲ್ಲಿ ಬಿರುಕು ಬಿಡ್ತಿವೆ. ಎರಡೇ ತಿಂಗಳಲ್ಲಿ […]

ನರಗುಂದದಲ್ಲಿ ಕುಸಿಯುತ್ತಿದೆ  ಭೂಮಿ,  ಬಿರುಕು ಬಿಡುತ್ತಿವೆ ನೂರಾರು ವರ್ಷದ ಮನೆಗಳು
ಸಾಧು ಶ್ರೀನಾಥ್​

Updated on: Nov 27, 2019 | 7:11 PM

ಗದಗ: ನಾಲ್ಕೈದು ತಲೆಮಾರು ಬಾಳಿ ಬದುಕಿದ್ದ, ಒಂದೂವರೆ ಶತಮಾನ ಕಂಡರೂ ಬಂಡೆಗಲ್ಲಿನಂತೆ ಇದ್ದಂತಹ ಸಾವಿರಾರು ನೆನಪುಗಳನ್ನ ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿರೋ ಮನೆಗಳು ಈಗ ಅಲುಗಾಡೋಕೆ ಶುರುವಾಗಿದೆ. ಭೂಕುಸಿತದಿಂದ ಉಂಟಾಗುತ್ತಿರುವ ತೊಂದರೆಯಿಂದ ನರಗುಂದದ ಜನ ಕಣ್ಣೀರು ಸುರಿಸುತ್ತಿದ್ದಾರೆ.

ಶತಮಾನಗಳ ಕಟ್ಟಿಡಗಳಿಗೆ ಬಂತು ಕುತ್ತು:
ಬ್ರಿಟಿಷರ ಕಾಲದಲ್ಲಿ ಕಟ್ಟಿದ್ದ ವಿಶಾಲವಾದ ಭವ್ಯ ಮನೆ ನೂರಾರು ವರ್ಷದಿಂದ ಸಣ್ಣ ಮುಕ್ಕು ಕಾಣದಿದ್ದ ಗದಗ ಜಿಲ್ಲೆಯ ನರಗುಂದದಲ್ಲಿನ ಮನೆಗಳು ಈಗ ಉಂಟಾಗ್ತಿರೋ ಭೂ ಕುಸಿತಕ್ಕೆ ಐತಿಹಾಸಿಕ ಮನೆಗಳಲ್ಲಿ ಬಿರುಕು ಬಿಡ್ತಿವೆ. ಎರಡೇ ತಿಂಗಳಲ್ಲಿ ಅನೇಕ ಮನೆಗಳ ಸ್ಥಿತಿ ಅಯೋಮಯವಾಗಿದ್ದು, ಬಾಳಿ ಬದುಕಿದ್ದ ಮನೆಯನ್ನ ತೊರೆಯ ಬೇಕಾದ ಸ್ಥಿತಿ ಎದುರಾಗಿದೆ.

ಗೋಪಾಲಕೃಷ್ಣ ಆನೆಗುಂದಿ ಎಂಬುವರ ಈ ಮನೆ ಭೂ ಕುಸಿತದಿಂದ ತತ್ತರಗೊಂಡಿದೆ. ಪಟ್ಟಣದ ಕಸಬಾ ಓಣಿ, ಅರ್ಬಾಣ ಓಣಿ, ಹಗೇದಗಟ್ಟಿ ಓಣಿಯಲ್ಲಿ ಹಲವು ಮನೆಗಳು ಕುಸಿದಿವೆ. ದಿನ ಕಳೆದಂತೆ ಮನೆಗಳಲ್ಲಿ ಬಿರುಕು ಹೆಚ್ಚಾಗುತ್ತಿದ್ದು, ಬೆಲೆ ಕಟ್ಟಲಾಗದ ಮನೆಯನ್ನ ತೊರೆದು ಜನ ಕಣ್ಣೀರಾಕ್ತಿದ್ದಾರೆ.

Published On - 6:20 pm, Wed, 27 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us