ಕ್ವಾರಂಟೈನ್​ನಲ್ಲಿರುವ ಹೊಂಗಸಂದ್ರ ‌ಬಿಹಾರಿಗಳಿಗೆ ಬೇಕಂತೆ ಸಿಗರೇಟ್, ಗುಟ್ಕಾ

ಬೆಂಗಳೂರು: ನಗರದ ಹೊಂಗಸಂದ್ರದಲ್ಲಿ ಬಿಹಾರಿ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರಿಗೆ ಕ್ವಾರಂಟೈನ್ ಮಾಡಲಾಗಿದೆ. ಆದರೆ ಈಗ ಬಿಬಿಎಂಪಿ ಸಿಬ್ಬಂದಿಗೆ ಹೊಂಗಸಂದ್ರ ಬಿಹಾರಿಗಳದ್ದೇ ದೊಡ್ಡ ತಲೆನೋವಾಗಿದೆ. ದಿನನಿತ್ಯ ಕ್ವಾರಂಟೈನ್​ನಲ್ಲಿರುವವರು ಸಿಗರೇಟ್, ಗುಟ್ಕಾ ಬೇಕು ಅಂತಾ ಗಲಾಟೆ ಶುರು ಮಾಡಿದ್ದಾರೆ. ರಾತ್ರಿ ವೇಳೆ ಕ್ವಾರಂಟೈನ್ ಪಿಜಿ ಸುತ್ತಾಡುವುದು, ಹೊರಗಡೆ ಬಿಡಿ ಎಂದು ಹಠ ಮಾಡುವುದು. ಉತ್ತಮವಾದ ಊಟ ಕೊಟ್ರು ಗಲಾಟೆ ಮಾಡುತ್ತಿದ್ದಾರೆ. ಇದರಿಂದ ಬಿಬಿಎಂಪಿ ಸಿಬ್ಬಂದಿಗಳು ಮಂಡೆ ಬಿಸಿ ಮಾಡಿಕೊಂಡಿದ್ದಾರೆ. […]

ಕ್ವಾರಂಟೈನ್​ನಲ್ಲಿರುವ ಹೊಂಗಸಂದ್ರ ‌ಬಿಹಾರಿಗಳಿಗೆ ಬೇಕಂತೆ ಸಿಗರೇಟ್, ಗುಟ್ಕಾ

Updated on: Apr 26, 2020 | 11:11 AM

ಬೆಂಗಳೂರು: ನಗರದ ಹೊಂಗಸಂದ್ರದಲ್ಲಿ ಬಿಹಾರಿ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರಿಗೆ ಕ್ವಾರಂಟೈನ್ ಮಾಡಲಾಗಿದೆ. ಆದರೆ ಈಗ ಬಿಬಿಎಂಪಿ ಸಿಬ್ಬಂದಿಗೆ ಹೊಂಗಸಂದ್ರ ಬಿಹಾರಿಗಳದ್ದೇ ದೊಡ್ಡ ತಲೆನೋವಾಗಿದೆ.

ದಿನನಿತ್ಯ ಕ್ವಾರಂಟೈನ್​ನಲ್ಲಿರುವವರು ಸಿಗರೇಟ್, ಗುಟ್ಕಾ ಬೇಕು ಅಂತಾ ಗಲಾಟೆ ಶುರು ಮಾಡಿದ್ದಾರೆ. ರಾತ್ರಿ ವೇಳೆ ಕ್ವಾರಂಟೈನ್ ಪಿಜಿ ಸುತ್ತಾಡುವುದು, ಹೊರಗಡೆ ಬಿಡಿ ಎಂದು ಹಠ ಮಾಡುವುದು. ಉತ್ತಮವಾದ ಊಟ ಕೊಟ್ರು ಗಲಾಟೆ ಮಾಡುತ್ತಿದ್ದಾರೆ.

ಇದರಿಂದ ಬಿಬಿಎಂಪಿ ಸಿಬ್ಬಂದಿಗಳು ಮಂಡೆ ಬಿಸಿ ಮಾಡಿಕೊಂಡಿದ್ದಾರೆ. ಸಿಬ್ಬಂದಿ ಮಾತಿಗೆ ಬಿಹಾರಿಗಳು ಕ್ಯಾರೆ ಅಂತಿಲ್ಲ. ರಾತ್ರಿಯಾದ್ರೆ ಸಾಕು ಎಣ್ಣೆ ಬೇಕು ಎಂದು ಸಿಬ್ಬಂದಿಗಳ ಜೊತೆ ಜಗಳ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇವರನ್ನು ಸಂತೈಸಲಾಗದೆ ಸಿಬ್ಬಂದಿಗಳಿಗೆ ನರಕದಂತಾಗಿದೆ.