ಬೆಂಗಳೂರಲ್ಲಿ ದಾಖಲಾಗಿದೆ ಹೆಚ್ಚು SARI ಕೇಸ್, ಸೋಂಕಿತರನ್ನ ಪತ್ತೆ ಹಚ್ಚೋದೇ ಸವಾಲು!

ಬೆಂಗಳೂರಲ್ಲಿ ದಾಖಲಾಗಿದೆ ಹೆಚ್ಚು SARI ಕೇಸ್, ಸೋಂಕಿತರನ್ನ ಪತ್ತೆ ಹಚ್ಚೋದೇ ಸವಾಲು!

ಬೆಂಗಳೂರು: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಬಲಿಷ್ಠವಾಗಿ ಬೆಳೆಯುತ್ತಿದೆ. ಅದರಲ್ಲೀಗ ಕಿಲ್ಲರ್ ಕೊರೊನಾದ ಚಿತ್ರ ವಿಚಿತ್ರ ವರ್ತನೆ ಭೀತಿ ಹುಟ್ಟಿಸ್ತಿದೆ. ಕೆಮ್ಮಿಲ್ಲ, ಜ್ವರವಿಲ್ಲ, ನೆಗಡಿ ಇಲ್ಲ ಅಂದ್ರೂ ವೈರಸ್ ದೇಹ ಹೊಕ್ಕುತ್ತಿದೆಯಾ ಎಂಬ ಆತಂಕ ಶುರುವಾಗಿದ್ದು, ಸೋಂಕಿತರನ್ನ ಪತ್ತೆ ಹಚ್ಚೋದೇ ಆರೋಗ್ಯ ಇಲಾಖೆಗೆ ಸವಾಲಾಗಿದೆ.

ರಾಜ್ಯದಲ್ಲಿ ಉಸಿರಾಟ ಸಮಸ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. 80 ವರ್ಷದ ಕೊರೊನಾ ಸೋಂಕಿತ ವೃದ್ಧೆಗೆ SARI ಸಮಸ್ಯೆ ಉಂಟಾಗಿತ್ತು. ಉಸಿರಾಟದ ಸಮಸ್ಯೆಯಿಂದ ವೃದ್ಧೆ ಮೃತಪಟ್ಟಿದ್ದರು. ಮೊದಲಿಗೆ ಏಪ್ರಿಲ್ 7ರಂದು ಗದಗದ ವೃದ್ಧೆಗೆ ಸಮಸ್ಯೆ ಕಾಣಿಸಿಕೊಂಡಿತ್ತು. ಏ.7ರಿಂದ ಈವರೆಗೆ ದಿನಕ್ಕೆ ಒಂದೆರಡು SARI ಕೇಸ್ ಪತ್ತೆಯಾಗುತ್ತಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು SARI ಕೇಸ್‌ಗಳು ದಾಖಲಾಗಿವೆ. ಕೊರೊನಾ ಸೋಂಕು ಹೆಚ್ಚಾದಾಗ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ SARI ಸಮಸ್ಯೆ ಹೆಚ್ಚಿದೆ.

ಇದುವರೆಗೂ ಬೆಂಗಳೂರಿನಲ್ಲಿ 13, ಕಲಬುರಗಿಯಲ್ಲಿ 6, ಮೈಸೂರು 2, ಉತ್ತರ ಕನ್ನಡ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. SARI ಪ್ರಕರಣಗಳಿಗೆ ಹೇಗೆ ಕೊರೊನಾ ಬಂತೆಂಬ ಪ್ರಶ್ನೆ ಉಂಟಾಗಿದೆ. ಅಧಿಕಾರಿಗಳಿಂದ SARI ಪ್ರಕರಣಗಳ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

Click on your DTH Provider to Add TV9 Kannada