ದಾವಣಗೆರೆ: ತಮ್ಮ ಕ್ಷೇತ್ರದ ಜನರ ನೋವು ನಲಿವಿನಲ್ಲಿ ಭಾಗಿಯಾಗುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಲ್ಲಾ ಕಾರ್ಯಕ್ರಮಗಳಲ್ಲಿ ಕೊಂಚ ವಿಭಿನ್ನವಾಗಿಯೇ ಪಾಲ್ಗೊಳ್ಳುತ್ತಾರೆ. ಇತರೆ ಗಣ್ಯರಂತೆ ಜನಸಾಮಾನ್ಯರಿಂದ ಮಾರುದೂರ ಇರದೆ ತಮ್ಮ ಕ್ಷೇತ್ರದ ಜನರೊಂದಿಗೆ ಬೆರೆತು ಎಲ್ಲಾ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಂತೆಯೇ, ಈ ಬಾರಿ ಸಹ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂದು ಮಹಿಳಾಮಣಿಗಳೊಟ್ಟಿಗೆ ಸೇರಿ ಶಾಸಕರು ತುಸು ಡಿಫರೆಂಟ್ ಆಗಿಯೇ ಸಮಾರಂಭವನ್ನು ಆಚರಿಸಿದರು.
ಹೌದು, ಇಂದು ದಿನಾಚರಣೆ ಪ್ರಯುಕ್ತ ಏಪರ್ಡಿಸಲಾಗಿದ್ದ ಆಲ್ ಲೆಡೀಸ್ ಬೈಕ್ ಱಲಿಯಲ್ಲಿ ಶಾಸಕರು ಸಹ ಪಾಲ್ಗೊಂಡರು. ತಮ್ಮ ಮಡದಿ ಜೊತೆ ಬೈಕ್ ಏರಿ ಬಂದ ಶಾಸಕ ಎಂ.ಪಿ.ರೇಣುಕಾಚಾರ್ಯ ಇತರೆ ಮಾನಿನಿಯರೊಂದಿಗೆ ಸೇರಿ ಬಿಂದಾಸ್ ಆಗಿ ಱಲಿಯಲ್ಲಿ ಮಿಂಚಿದರು. ದಾರಿಯುದ್ದಕ್ಕೂ ಮಡಿದಿಯೊಂದಿಗೆ ಪಕ್ಷದ ಬಾವುಟ ಹಿಡಿದು ಹಾರ್ನ್ ಹೊಡೆಯುತ್ತಾ ಸಾಗಿದರು.
ಬಳಿಕ, ಸಮಾರಂಭದಲ್ಲಿ ಭಾಗವಹಿಸಿದ ಶಾಸಕರಿಗೆ ಭರ್ಜರಿ ಸ್ವಾಗತ ಕೋರಿದ ಮಾನಿನಿಯರು ನಂತರ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಸುತ್ತಿಕೊಂಡರು. ಜಿಲ್ಲೆಯ ಹೊನ್ನಾಳಿಯಲ್ಲಿ ಮಹಿಳಾ ಮೋರ್ಚಾದಿಂದ ಱಲಿ ಆಯೋಜನೆ ಮಾಡಲಾಗಿತ್ತು. ಪಟ್ಟಣದ ಹಿರೇಕಲ್ಮಠದ ಆವರಣದಿಂದ ಗುರುಭವನದವರೆಗೆ ಬೈಕ್ ಱಲಿ ನಡೆಯಿತು.
ಇದನ್ನೂ ಓದಿ: ನಮಗೆ ಯಾರು ದಿಕ್ಕಿಲ್ಲವೆಂದು ನನ್ನ ಮಗನನ್ನು ಬಿಟ್ಟು ಕಳಿಸಿಲ್ಲ -SIT ವಶದಲ್ಲಿರುವ ಪುತ್ರ ಬಾರದಿದ್ದಕ್ಕೆ ತಾಯಿ ಕಣ್ಣೀರು‘