ನಮಗೆ ಯಾರು ದಿಕ್ಕಿಲ್ಲವೆಂದು ನನ್ನ ಮಗನನ್ನು ಬಿಟ್ಟು ಕಳಿಸಿಲ್ಲ -SIT ವಶದಲ್ಲಿರುವ ಪುತ್ರ ಬಾರದಿದ್ದಕ್ಕೆ ತಾಯಿ ಕಣ್ಣೀರು

ಮತ್ತೊಬ್ಬ ವಿದ್ಯಾರ್ಥಿಯ ದೊಡ್ಡಪ್ಪ ವಕೀಲನಾಗಿದ್ದಕ್ಕೆ ಆತನನ್ನು ಬಿಟ್ಟಿದ್ದಾರೆ. ನಮಗೆ ಯಾರು ದಿಕ್ಕಿಲ್ಲವೆಂದು ನನ್ನ ಮಗನನ್ನು ಬಿಟ್ಟು ಕಳಿಸಿಲ್ಲ ಎಂದು ತಮ್ಮ ಮಗನನ್ನು ಬಿಡುಗಡೆ ಮಾಡುವಂತೆ ವಿದ್ಯಾರ್ಥಿಯ ತಾಯಿ ಕಣ್ಣೀರು ಹಾಕಿದ್ದಾರೆ.

ನಮಗೆ ಯಾರು ದಿಕ್ಕಿಲ್ಲವೆಂದು ನನ್ನ ಮಗನನ್ನು ಬಿಟ್ಟು ಕಳಿಸಿಲ್ಲ -SIT ವಶದಲ್ಲಿರುವ ಪುತ್ರ ಬಾರದಿದ್ದಕ್ಕೆ ತಾಯಿ ಕಣ್ಣೀರು
ಪ್ರಾತಿನಿಧಿಕ ಚಿತ್ರ
Follow us
KUSHAL V
|

Updated on: Mar 14, 2021 | 4:47 PM

ಬೀದರ್: ನನ್ನ ಮಗ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ಆದರೆ, 3 ದಿನಗಳಾದ್ರೂ ಕೋರ್ಟ್‌ಗೆ ಹಾಜರುಪಡಿಸಿಲ್ಲವೆಂದು ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ SIT ವಶದಲ್ಲಿರುವ ಇಂಜಿನಿಯರಿಂಗ್​ ವಿದ್ಯಾರ್ಥಿಯ ತಾಯಿ ಕಣ್ಣೀರು ಹಾಕಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿಯ ದೊಡ್ಡಪ್ಪ ವಕೀಲನಾಗಿದ್ದಕ್ಕೆ ಆತನನ್ನು ಬಿಟ್ಟಿದ್ದಾರೆ. ನಮಗೆ ಯಾರು ದಿಕ್ಕಿಲ್ಲವೆಂದು ನನ್ನ ಮಗನನ್ನು ಬಿಟ್ಟು ಕಳಿಸಿಲ್ಲ ಎಂದು ತಮ್ಮ ಮಗನನ್ನು ಬಿಡುಗಡೆ ಮಾಡುವಂತೆ ವಿದ್ಯಾರ್ಥಿಯ ತಾಯಿ ಕಣ್ಣೀರು ಹಾಕಿದ್ದಾರೆ. ಜಿಲ್ಲೆಯ ಭಾಲ್ಕಿ ಪಟ್ಟಣದ ನಿವಾಸಿಯಾಗಿರುವ ವಿದ್ಯಾರ್ಥಿಯ ತಾಯಿ ತಮ್ಮ ನೋವು ತೋಡಿಕೊಂಡಿದ್ದಾರೆ.

ಮಾ.11ರಂದು SIT ತಂಡ ವಿದ್ಯಾರ್ಥಿಗಳಿಬ್ಬರನ್ನು ವಶಕ್ಕೆ ಪಡೆದಿದ್ದರು. ಮೆಕ್ಯಾನಿಕಲ್ ಇಂಜಿನಿಯರ್ ಹಾಗೂ ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರನ್ನು ವಶಕ್ಕೆ ಪಡೆದಿದ್ದರು. ಇಬ್ಬರನ್ನು ಮೂರು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿಟ್ಟು ಪೊಲೀಸರಿಂದ ವಿಚಾರಣೆ ನಡೆದಿತ್ತು.

ಬಳಿಕ SIT ತಂಡ ಕಾನೂನು ವಿದ್ಯಾರ್ಥಿಯನ್ನು ಬಿಟ್ಟು ಕಳಿಸಿದ್ದರು. ಆದರೆ, ಮೆಕ್ಯಾನಿಕಲ್ ಇಂಜಿನಿಯರ್‌ನನ್ನು ಬಿಟ್ಟು ಕಳುಹಿಸಿರಲಿಲ್ಲ. ಮೂರು ದಿನಗಳಾದ್ರೂ ಮಗ ಬಾರದಿದ್ದಕ್ಕೆ ಆತನ ತಾಯಿ ಕಣ್ಣೀರು ಹಾಕಿದ್ದಾರೆ. ಜೊತೆಗೆ, ಒಬ್ಬರನ್ನು ಬಿಟ್ಟು ಮತ್ತೊಬ್ಬರನ್ನು SIT ಬಿಡದಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಅಂದ ಹಾಗೆ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ SIT ಅಧಿಕಾರಿಗಳು ಇಂದು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಮೂವರನ್ನೂ ವಿಚಾರಣೆ ಮಾಡಲಾಗಿತ್ತು. ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಮೂಲದ ಪತ್ರಕರ್ತ ಹಾಗೂ ಸಿಡಿಯಲ್ಲಿದ್ದ ಯುವತಿಯ ಬಾಯ್ ಫ್ರೆಂಡ್ ಸೇರಿದಂತೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ವಿಚಾರಣೆಯ ಬಳಿಕ ಐವರನ್ನೂ ಬಿಟ್ಟು ಕಳಿಸಲಾಗಿತ್ತು. ಆದರೆ, ಇದೀಗ ಐವರ ಪೈಕಿ ಮೂವರನ್ನು ವಶಕ್ಕೆ ಪಡೆದು SIT ತಂಡ ವಿಚಾರಣೆ ನಡೆಸುತ್ತಿದೆ.

ಇದಲ್ಲದೆ, ಎರಡು ದೂರುನ್ನ ಪರಿಗಣನೆಗೆ ತೆಗದುಕೊಂಡು ತಂಡ ತನಿಖೆಗೆ  ಮುಂದಾಗಿದೆ. ದಿನೇಶ್​ ಕಲ್ಲಹಳ್ಳಿ ಮತ್ತು ರಮೇಶ ಕೊಟ್ಟಿರುವ ದೂರುಗಳನ್ನು ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ. ಎರಡು ದೂರುಗಳ ಮೇಲೆ ಎರಡು ಆಯಾಮದಲ್ಲಿ ತೀವ್ರ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಇನ್ನೂ ಹಲವರ ಸಿಡಿಗಳಿವೆ, ಎಸ್​ಐಟಿ ಬದಲು ಸಿಬಿಐ ತನಿಖೆ ಒಳ್ಳೇದು: ಬಸನಗೌಡ ಪಾಟೀಲ್ ಯತ್ನಾಳ್

ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು