ಇನ್ನೂ ಹಲವರ ಸಿಡಿಗಳಿವೆ, ಎಸ್ಐಟಿ ಬದಲು ಸಿಬಿಐ ತನಿಖೆ ಒಳ್ಳೇದು: ಬಸನಗೌಡ ಪಾಟೀಲ್ ಯತ್ನಾಳ್
ಸಿಡಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ಕೊಡಲಾಗಿದೆ. ತನಿಖೆ ಎಷ್ಟರಮಟ್ಟಿಗೆ ಪಾರದರ್ಶಕತೆಯಿಂದ ನಡೆಯುತ್ತದೆ, ಎನ್ನುವುದೇ ನನಗೆ ಸಂಶಯ ಮೂಡಿಸುತ್ತಿದೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ: ರಮೇಶ್ ಜಾರಕಿಹೊಳಿ ಸಿಡಿ ಹಿಂದೆ ಒಂದು ದೊಡ್ಡ ಷಡ್ಯಂತ್ರವಿದೆ. ರಾಜಕೀಯವಾಗಿ ಅವರನ್ನು ಮುಗಿಸಲು ವ್ಯವಸ್ಥಿತವಾಗಿ ಷಡ್ಯಂತ್ರ ನಡೆದಿದೆ ಸಿಡಿ ಪ್ರಕರಣದ ತನಿಖೆ ಹೊಣೆಯನ್ನು ಎಸ್ಐಟಿಗೆ ವಹಿಸಲಾಗಿದೆ. ತನಿಖೆ ಎಷ್ಟರಮಟ್ಟಿಗೆ ಪಾರದರ್ಶಕತೆಯಿಂದ ನಡೆಯುತ್ತದೆ, ಎನ್ನುವುದೇ ನನಗೆ ಸಂಶಯ ಮೂಡಿಸುತ್ತಿದೆ. ಅಲ್ಲಿರುವ ಓರ್ವ ಅಧಿಕಾರಿ ವಿಜಯೇಂದ್ರ ಹೇಳಿದಂತೆ ಕೇಳುತ್ತಾರೆ. ಹೀಗಾಗಿ ಎರಡೂ ಪಕ್ಷದಲ್ಲಿನ ಒಬ್ಬೊಬ್ಬ ನಾಯಕರು ಜಾರಕಿಹೊಳಿಯನ್ನು ವ್ಯವಸ್ಥಿತವಾಗಿ ಮುಗಿಸಲು ಪ್ಲಾನ್ ಮಾಡಿದ್ದಾರೆ. ಬಿಜೆಪಿಯ ಓರ್ವ ಉನ್ನತ ನಾಯಕ ಹಾಗೂ ಕಾಂಗ್ರೆಸ್ನಲ್ಲಿನ ಓರ್ವ ಉನ್ನತ ನಾಯಕ ಸೇರಿ ಷಡ್ಯಂತ್ರ ರೂಪಿಸಿದ್ದಾರೆ. ಸಿಬಿಐ ತನಿಖೆಯಿಂದ ಮಾತ್ರ ಸತ್ಯಹೊರಬಳೀಲು ಸಾಧ್ಯ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಜಾರಕಿಹೊಳಿ ದೂರು ನೀಡಿದ ತಕ್ಷಣ ಯುವತಿ ವಿಡಿಯೋ ಹೊರಗೆ ಬರುತ್ತದೆ. ಪ್ರಕರಣವನ್ನು ಎಸ್ಐಟಿ ಬದಲು ಸಿಬಿಐ ತನಿಖೆಗೆ ಕೊಡಬೇಕು. ಇನ್ನೂ ಬಹಳ ಜನರ ಸಿಡಿಗಳು ಇವೆ. ಬಿಜೆಪಿಯ ಉನ್ನತ ನಾಯಕನ ಮಗನ ಬಳಿ ಹಾಗೂ ಕಾಂಗ್ರೆಸ್ ಉನ್ನತ ನಾಯಕನ ಮನೆಯಲ್ಲಿ ಸಿಡಿಗಳು ಇವೆ ಎಂದಿದ್ದಾರೆ.
ಸಿಬಿಐನಿಂದ ತನಿಖೆ ಮಾಡಿಸಿ, ಬ್ಲಾಕ್ ಮೇಲ್ ಮಾಡುವ ರಾಜಕಾರಣಿಗಳನ್ನು ಜೈಲಿಗೆ ಅಟ್ಟಬೇಕು. ಇಂತಹ ರಾಜಕಾರಣಿಗಳನ್ನು ಜೈಲಿಗೆ ಅಟ್ಟದಿದ್ದರೆ ಕರ್ನಾಟಕದಲ್ಲಿ ಕೆಟ್ಟ ಸಂಸ್ಕೃತಿ ಆರಂಭವಾಗುತ್ತದೆ. ಮೊದಲಿನ ವಿಡಿಯೋದಲ್ಲಿ ಬೀದರ್ ಭಾಷೆ ಕೇಳಿಬರುತ್ತದೆ. ಮತ್ತೊಂದು ವಿಡಿಯೋದಲ್ಲಿ ಬೇರೆ ಶೈಲಿಯ ಕನ್ನಡ ಬಳಕೆ ಆಗಿದೆ. ಭಾಷೆಗಳು ಹೇಗೆ ಬದಲಾಗಿವೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಿನ್ನೆಯಷ್ಟೇ ದೂರು ದಾಖಲಾಗಿದೆ.. ತಾಳ್ಮೆಯಿಂದ ಕಾಯೋಣ: ಸತೀಶ್ ಜಾರಕಿಹೊಳಿ
ಇದನ್ನೂ ಓದಿ: ಸತೀಶ್ ಜಾರಕಿಹೊಳಿ-ಸಿದ್ದರಾಮಯ್ಯ ಮಾತುಕತೆ: ಸದನದಲ್ಲಿ ಕಾಂಗ್ರೆಸ್ನಿಂದ ಸಿಡಿ ಪ್ರಕರಣ ಚರ್ಚೆ ಸಾಧ್ಯತೆ ಕಡಿಮೆ!
Published On - 4:20 pm, Sun, 14 March 21