ದಾವಣಗೆರೆಯಲ್ಲಿ ರಾಜ್ಯಮಟ್ಟದ ಬಂಜಾರ ಜಾಗೃತಿ ಸಮಾವೇಶ: ಗಮನ ಸೆಳೆದ ಲಂಬಾಣಿ ನೃತ್ಯ, ಕೋಲಾಟ

ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 282ನೇ ಜಯಂತೋತ್ಸವ ಹಾಗೂ ರಾಜ್ಯಮಟ್ಟದ ಬಂಜಾರ ಜಾಗೃತಿ ಸಮಾವೇಶ ನಡೆಯಿತು. ವಿಶೇಷವಾಗಿ ಲಂಬಾಣಿಗಳು ಎಂದರೆ ನೃತ್ಯ ಹಾಡು ಇಲ್ಲದೆ ಹೋದರೆ ಅದಕ್ಕೆ ಲಂಬಾಣಿ ಉತ್ಸವ ಎನ್ನುವುದೇ ತಪ್ಪು. ಇಂತಹ ಒಂದು ಉತ್ಸವಕ್ಕೆ ಸಾಕ್ಷಿ ಆಗಿದ್ದು ಚನ್ನಗಿರಿ ಸರ್ಕಾರಿ ಹೈಸ್ಕೂಲ್ ಮೈದಾನ.

ದಾವಣಗೆರೆಯಲ್ಲಿ ರಾಜ್ಯಮಟ್ಟದ ಬಂಜಾರ ಜಾಗೃತಿ ಸಮಾವೇಶ: ಗಮನ ಸೆಳೆದ ಲಂಬಾಣಿ ನೃತ್ಯ, ಕೋಲಾಟ
ಲಂಬಾಣಿ ನೃತ್ಯ
Follow us
sandhya thejappa
|

Updated on: Mar 14, 2021 | 4:02 PM

ದಾವಣಗೆರೆ: ಲಂಬಾಣಿಗಳು ಎನ್ನುವ ಹೆಸರು ಕೇಳುತ್ತಿದ್ದಂತೆ ಎನೋ ಒಂದು ರೀತಿಯ ಖುಷಿ. ಅವರ ಬದುಕುವ ರೀತಿ, ಮಾತನಾಡುವ ಭಾಷೆ, ಹಾಡು-ಕುಣಿತ ಹೀಗೆ ಒಂದು ರೀತಿಯ ಸಂಭ್ರಮವೇ ಅವರ ಜೀವನ. ತನ್ನದೇ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಲಂಬಾಣಿ ಸಮುದಾಯದ ರಾಜ್ಯಮಟ್ಟದ ಸಮ್ಮೇಳನ ನಿನ್ನೆ (ಫೆಬ್ರವರಿ 13) ಚನ್ನಗಿರಿಯಲ್ಲಿ ನಡೆಯಿತು. ಸಮ್ಮೇಳನದಲ್ಲಿ ಲಂಬಾಣಿ ನೃತ್ಯ, ಕೋಲಾಟ, ಜಾನಪದ ಶೈಲಿ ಇತರೆ ಕಲಾಪ್ರಕಾರಗಳು ಗಮನಸೆಳೆದವು.

ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 282ನೇ ಜಯಂತೋತ್ಸವ ಹಾಗೂ ರಾಜ್ಯಮಟ್ಟದ ಬಂಜಾರ ಜಾಗೃತಿ ಸಮಾವೇಶ ನಡೆಯಿತು. ವಿಶೇಷವಾಗಿ ಲಂಬಾಣಿಗಳು ಎಂದರೆ ನೃತ್ಯ ಹಾಡು ಇಲ್ಲದೆ ಹೋದರೆ ಅದಕ್ಕೆ ಲಂಬಾಣಿ ಉತ್ಸವ ಎನ್ನುವುದೇ ತಪ್ಪು. ಇಂತಹ ಒಂದು ಉತ್ಸವಕ್ಕೆ ಸಾಕ್ಷಿ ಆಗಿದ್ದು ಚನ್ನಗಿರಿ ಸರ್ಕಾರಿ ಹೈಸ್ಕೂಲ್ ಮೈದಾನ. ವಿಶೇಷವಾಗಿ ಕುಡಚಿ ಕ್ಷೇತ್ರದ ಶಾಸಕ, ತಾಂಡಾ ನಿಗಮ ಅಭಿವೃದ್ಧಿ ಅಧ್ಯಕ್ಷ ಪಿ.ರಾಜೀವ್ ಉದ್ಘಾಟನೆ ಮಾಡಿದರು. ರಾಜ್ಯ ಬಂಜಾರ ಸಮುದಾಯದ ಎಲ್ಲಾ ನಾಯಕರು, ಬಂಜಾರ ಸಂಘಗಳ ಪದಾಧಿಕಾರಿಗಳು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಮಾತನಾಡಿದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿಯಲ್ಲಿ ಬುಡಕಟ್ಟು ಸಂಪ್ರದಾಯದ ಬಂಜಾರ ಸಂಸ್ಕೃತಿ ಇನ್ನು ಜೀವಂತವಾಗಿದೆ. ಬಂಜಾರ ತಾಂಡಾಗಳಲ್ಲಿ ಕಾಂಕ್ರೀಟ್ ರಸ್ತೆ, ಬಂಜಾರ ಸಮುದಾಯ ಭವನ, ಕಂದಾಯ ಗ್ರಾಮ ಘೋಷಣೆ, ಬಗರ್ ಹುಕಂ ಜಮೀನಿನಲ್ಲಿ ಉಳುಮೆ ಮಾಡಿರುವವರಿಗೆ ಹಕ್ಕು ಪತ್ರ ನೀಡುವುದು ಹೀಗೆ ಹಲವು ಅಭಿವೃದ್ಧಿ ಕೆಲಸಗಳನ್ನು ನನ್ನ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ. ಇಂತಹದೊಂದು ಸಮಾವೇಶ ನಡೆದಿರುವುದು ಲಂಬಾಣಿ ಸಮುದಾಯ ಜಾಗೃತವಾಗಿರುವುದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.

ಲಂಬಾಣಿ ಸಮುದಾಯದ ಉತ್ಸವ

ಚನ್ನಗಿರಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಲಂಬಾಣಿ ಉತ್ಸವ

ಗೌರಿ ಹುಣ್ಣಿಮೆಗೆ ಬಂಜಾರ ಸಮುದಾಯದ ಸಂಭ್ರಮ: 9 ದಿನ ಯುವತಿಯರಿಂದ ಕಠಿಣ ವ್ರತ

Perseverance Rover: ಸೆರೆಯಾಯ್ತು ಮಂಗಳನ ಅಂಗಳದ ಸದ್ದು, ನೀವೂ ಕೇಳಿನೋಡಿ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು