ಗೌರಿ ಹುಣ್ಣಿಮೆಗೆ ಬಂಜಾರ ಸಮುದಾಯದ ಸಂಭ್ರಮ: 9 ದಿನ ಯುವತಿಯರಿಂದ ಕಠಿಣ ವ್ರತ
ಯಾದಗಿರಿ: ಹಬ್ಬಗಳು ಬಂದ್ರೆ ಸಾಕು ಸಕತ್ ಎಂಜಾಯ್ ಮಾಡುವ ಜನ ಅಂದ್ರೆ ಅದು ಬಂಜಾರ ಸಮುದಾಯದ ಜನ. ಹಬ್ಬ ಯಾವುದೆ ಇರಲಿ ಸಂಭ್ರಮ ಮಾತ್ರ ಜೋರಾಗಿರುತ್ತೆ. ಇವತ್ತು ಆ ಜಿಲ್ಲೆಯ ಬಂಜಾರ ಸಮುದಾಯದ ಜನ ತಾಂಡಗಳಲ್ಲಿ ಅದ್ದೂರಿಯಾಗಿ ಗೌರಿ ಹುಣ್ಣಿಮೆಯನ್ನ ಆಚರಿಸಿದ್ದಾರೆ. ಕಲರ್ ಕಲರ್ ಉಡುಗೆ ತೊಟ್ಟು ಸಖತ್ ಆಗಿ ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೊಳುರ ತಾಂಡದಲ್ಲಿ ಬಂಜಾರ ಸಮುದಾಯದ ಜನರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ […]
ಯಾದಗಿರಿ: ಹಬ್ಬಗಳು ಬಂದ್ರೆ ಸಾಕು ಸಕತ್ ಎಂಜಾಯ್ ಮಾಡುವ ಜನ ಅಂದ್ರೆ ಅದು ಬಂಜಾರ ಸಮುದಾಯದ ಜನ. ಹಬ್ಬ ಯಾವುದೆ ಇರಲಿ ಸಂಭ್ರಮ ಮಾತ್ರ ಜೋರಾಗಿರುತ್ತೆ. ಇವತ್ತು ಆ ಜಿಲ್ಲೆಯ ಬಂಜಾರ ಸಮುದಾಯದ ಜನ ತಾಂಡಗಳಲ್ಲಿ ಅದ್ದೂರಿಯಾಗಿ ಗೌರಿ ಹುಣ್ಣಿಮೆಯನ್ನ ಆಚರಿಸಿದ್ದಾರೆ. ಕಲರ್ ಕಲರ್ ಉಡುಗೆ ತೊಟ್ಟು ಸಖತ್ ಆಗಿ ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೊಳುರ ತಾಂಡದಲ್ಲಿ ಬಂಜಾರ ಸಮುದಾಯದ ಜನರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಸಮುದಾಯದ ಜನ ಗೌರಿ ಹುಣ್ಣಿಮೆಯನ್ನ ವಿಶೇಷವಾಗಿ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡ್ತಾರೆ. ಅಂದ ಹಾಗೆ ನವೆಂಬರ್ 30ರಂದು ಕನ್ಯಾಕೊಳುರ ತಾಂಡದಲ್ಲಿ ಗೌರಿ ಹುಣ್ಣಿಮೆಯನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯ್ತು. ತಾಂಡದಲ್ಲಿ ಪ್ರತಿಯೊಬ್ಬರು ತಮಟೆ ಸದ್ದಿಗೆ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ರು.
ಗೌರಿ ಹುಣ್ಣಿಮೆಯಂದು ಸಖತ್ ಎಂಜಾಯ್ ಮಾಡಿದ ತಾಂಡ ಜನ: ಯುವತಿಯರು ಬಣ್ಣ ಬಣ್ಣದ ಉಡುಗೆಯನ್ನು ತೊಟ್ಟು ಹಬ್ಬವನ್ನ ಖುಷಿಯಿಂದ ಆಚರಿಸಿದ್ರು. ತಾಂಡದ ದೇವಸ್ಥಾನ ಆವರಣದಲ್ಲಿ ತಾಂಡದ ಮಕ್ಕಳಿಂದಾ ಹಿಡಿದು ಹಿರಿಯರೆಲ್ಲಾ ಸಂಭ್ರಮದಲ್ಲಿ ಭಾಗಿಯಾಗಿದ್ರು. ಇನ್ನು ಯುವತಿಯರಂತೂ ಒಂದೆ ಬಣ್ಣದ ಉಡುಗೆಗಳನ್ನ ತೊಟ್ಟು ನೃತ್ಯ ಮಾಡಿ ರಂಜಿಸಿದ್ರು. ತಾಂಡದ ಪಡ್ಡೆ ಯುವಕರು, ಯುವತಿಯರು ತಮಟೆ ಸದ್ದಿಗೆ ಹೆಜ್ಜೆ ಹಾಕುವುದನ್ನು ನೋಡುವುದಕ್ಕೆ ಮುಗಿ ಬಿದ್ದಿದ್ರು. ಇನ್ನು ಮಹಿಳೆಯರಂತೋ ತಮ್ಮ ವಯಸ್ಸಿನ ಬಗ್ಗೆ ಕಿಂಚಿತ್ತೂ ಲೆಕ್ಕಿಸದೆ ಸಖತ್ ಆಗಿ ಸ್ಟೇಪ್ಸ್ ಹಾಕುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡುದ್ರು.
ತಾಂಡದ ಯುವತಿಯರಿಂದ 9ದಿನಗಳ ಕಠಿಣ ವ್ರತ: ಇನ್ನು ಕನ್ಯಾಕೊಳುರ ತಾಂಡ ಒಂದೆ ಅಲ್ಲದೆ ಜಿಲ್ಲೆಯ ಪ್ರತಿಯೊಂದು ತಾಂಡದಲ್ಲಿ ಇದೆ ರೀತಿ ಸಂಭ್ರಮ ಮನೆ ಮಾಡಿರುತ್ತೆ. ಯಾಕೆಂದರೆ ಈ ಹಬ್ಬವನ್ನ ಸಂಭ್ರಮಿಸುವ ಮೊದಲು ತಾಂಡದ ಯುವತಿಯರು ಕಠಿಣ ವ್ರತವನ್ನ ಮಾಡಿರುತ್ತಾರೆ. ತಾಂಡದ ಪ್ರತಿಯೊಂದು ಮನೆಯ ಯುವತಿಯರು ಮನೆಯಲ್ಲಿ ಗೌರಿ ಹುಣ್ಣಿಮೆಕ್ಕಿಂತ 9 ದಿನ ಮುಂಚಿತವಾಗಿ ದೇವರ ಜಗಲಿ ಬಳಿ ಗೋಧಿ ಕಾಳನ್ನ ಬುಟ್ಟೆಯಲ್ಲಿ ಹಾಕಿ ಪೂಜೆ ಮಾಡುತ್ತಾರೆ. ಗೋಧಿ ಕಾಳು 9 ದಿನಗಳಲ್ಲಿ ಸಸಿಯಾಗುವವರೆಗೆ ಗೋಧಿ ಕಾಳು ಹಾಕಿದ ಯುವತಿಯರು ಕಠಿಣ ವ್ರತವನ್ನ ಪಾಲಿಸುತ್ತಾರೆ. ಒಂಬತ್ತು ದಿನಗಳ ಕಾಲ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಸ್ನಾನ ಮಾಡಿ ಗೋಧಿ ಸಸಿಗಳಿಗೆ ನೀರು ಹಾಕುತ್ತಾರೆ.
ಒಂಬತ್ತು ದಿನಗಳ ಕಾಲ ಕಠಿಣ ವ್ರತ ಮಾಡುವ ಮೂಲಕ ಸಸಿಯನ್ನ ಬೆಳೆಸುತ್ತಾರೆ. ಇನ್ನು ಇದೆ ಒಂಬತ್ತು ದಿನ ಸಸಿ ಬೆಳೆಸುವ ಯುವತಿಯರು ಕಾರ, ಉಪ್ಪು, ಬೆಳ್ಳುಳ್ಳಿ, ಎಣ್ಣೆ ಇಲ್ಲದ ಆಹಾರವನ್ನೇ ಸೇವಿಸುತ್ತಾರೆ. ಒಂಬತ್ತು ದಿನಗಳು ಪೂರ್ಣಗೊಂಡ ಬಳಿಕ ಅಂದ್ರೆ ಗೌರಿ ಹುಣ್ಣಿಮೆಯ ದಿನ ಇಡೀ ರಾತ್ರಿ ತಮಟೆ, ಬ್ಯಾಂಡ್ಗಳ ಸದ್ದಿಗೆ ಕುಣಿದು ಕುಪ್ಪಳಿಸುತ್ತಾರೆ. ಇನ್ನು ಗೌರಿ ಹುಣ್ಣಿಮೆಯ ಮಾರನೇ ದಿನ ಯುವತಿಯರು ಬೆಳೆಸಿದ ಸಸಿಯನ್ನ ತಾಂಡದ ಹಿರಿಯರಿಗೆ ಹಿಡಿ ಹಿಡಿಯಾಗಿ ಕೊಟ್ಟು ಆಶೀರ್ವಾದ ಪಡೆಯುತ್ತಾರೆ. ನಂತರ ಉಳಿದ ಸಸಿಗಳನ್ನ ಪೂಜೆ ಮಾಡಿ ನದಿ ಅಥವಾ ಹಳ್ಳದಲ್ಲಿ ವಿಸರ್ಜನೆ ಮಾಡುತ್ತಾರೆ. ಇನ್ನು ತಾಂಡದಲ್ಲಿ ನಡೆಯುವ ಈ ಸಂಭ್ರಮಕ್ಕೆ ಸುತ್ತಮುತ್ತಲಿನ ತಾಂಡದ ಸಂಬಂಧಿಕರು ಸಹ ಬಂದು ಭಾಗವಹಿಸುತ್ತಾರೆ.
ಈ ಹಬ್ಬವನ್ನ ಆಚರಿಸುವುದಕ್ಕೆ ತಾಂಡದ ಕೆಲ ಮುಖಂಡರು ತಾಂಡದ ಪ್ರತಿ ಮನೆಗೆ ಇಷ್ಟು ಅಂತ ಹಣವನ್ನ ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಹಣದಿಂದ ಎಲ್ಲಾ ಮುಗಿದ ಮೇಲೆ ನಾಲ್ಕೈದು ಕುರಿಗಳನ್ನ ಕೊಯ್ದು ಪ್ರತಿ ಮನೆಗೆ ಮಾಂಸವನ್ನ ಹಂಚಲಾಗುತ್ತೆ. ಮನೆಗೆ ಬಂದ ಸಂಬಂಧಿಕರಿಗೆ ಮಾಂಸದ ಊಟ ಮಾಡಿ ಕಳುಹಿಸಬೇಕು ಎಂಬುವುದು ಬಂಜಾರ ಸಮುದಾಯದ ಜನರ ಸಂಪ್ರದಾಯವಾಗಿದೆ.
-ಅಮೀನ್ ಹೊಸುರ್