ಹುಣಸೂರಿನಲ್ಲಿ ನನ್ನ ಸೋಲಿಗೆ ಯೋಗೇಶ್ವರ್, N.R.ಸಂತೋಷ್ ಕಾರಣ -ಹೆಚ್.ವಿಶ್ವನಾಥ್
ಹುಣಸೂರಿನಲ್ಲಿ ನನ್ನ ಸೋಲಿಗೆ ಯೋಗೇಶ್ವರ್ ನೇರ ಕಾರಣ. ನನಗೆ ಟಿಕೆಟ್ ನೀಡುವುದಕ್ಕೂ ಮುನ್ನವೇ ಸೀರೆ ಹಂಚಿದ್ದ ಎಂದು ಯೋಗೇಶ್ವರ್ ವಿರುದ್ಧ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಹುಣಸೂರಿನಲ್ಲಿ ನನ್ನ ಸೋಲಿಗೆ ಯೋಗೇಶ್ವರ್ ನೇರ ಕಾರಣ ಎಂದು ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಯೋಗೇಶ್ವರ್ನನ್ನು ನೂರಕ್ಕೆ ನೂರರಷ್ಟು ಸಚಿವರನ್ನಾಗಿ ಮಾಡ್ತೇನೆ ಅಂತ ಸಿ.ಎಂ. ಹೇಳಿಕೆ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಯೋಗೇಶ್ವರ್ ಬಗ್ಗೆ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಣಸೂರಿನಲ್ಲಿ ನನ್ನ ಸೋಲಿಗೆ ಯೋಗೇಶ್ವರ್ ನೇರ ಕಾರಣ. ನನಗೆ ಟಿಕೆಟ್ ನೀಡುವುದಕ್ಕೂ ಮುನ್ನವೇ ಸೀರೆ ಹಂಚಿದ್ದ. ನಾನು ಅಭ್ಯರ್ಥಿ ಎಂದು ಸೀರೆ ಹಂಚಿ ಡ್ಯಾಮೇಜ್ ಮಾಡಿದ್ದ. ನಾನೇ ಅಭ್ಯರ್ಥಿ ಎಂದು ಫೈನಲ್ ಆದ ಬಳಿಕ ಮತ್ತೆ ಬಂದ. ನನಗೆ ಚುನಾವಣಾ ಖರ್ಚಿಗೆ ಬಂದಿದ್ದ ದೊಡ್ಡ ಮೊತ್ತದ ಹಣವನ್ನು ಸಿ.ಪಿ.ಯೋಗೇಶ್ವರ್, N.R.ಸಂತೋಷ್ ಲಪಟಾಯಿಸಿದರು.
ನನ್ನ ಸೋಲಿಗೆ ಇದು ಕೂಡ ಕಾರಣ. ಈ ಬಗ್ಗೆ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೆ. ಆದರೆ ಯಾವುದೇ ಪ್ರಯೋಜನ ಆಗ್ಲಿಲ್ಲ, ಅದು ನನಗೆ ಬೇಸರವಾಗಿದೆ. ಯಾರ ಸಹಕಾರದಿಂದ ಕುರ್ಚಿಯ ಮೇಲೆ ಕುಳಿತಿದ್ದಾರೆ ಈ ವಿಚಾರವನ್ನು ಕೆಲವರು ಮರೆತಿದ್ದಾರೆ ಎಂದು ಸಿಎಂ ವಿರುದ್ಧ ಎಂಎಲ್‌ಸಿ ಹೆಚ್.ವಿಶ್ವನಾಥ್ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: C.P.ಯೋಗೇಶ್ವರ್‌ರನ್ನ ನೂರಕ್ಕೆ ನೂರರಷ್ಟು ಮಂತ್ರಿ ಮಾಡ್ತೇವೆ -ಸಿಎಂ BSY ಭರವಸೆ
Published On - 2:09 pm, Tue, 1 December 20