ಪಾರ್ಕಿಂಗ್ ಸೌಕರ್ಯವಿದ್ದರೆ ಮಾತ್ರ ವಾಹನ ಖರೀದಿಗೆ ಅನುಮತಿ: ಬಿಡಿಎ ಚಿಂತನೆ
ಬೆಂಗಳೂರು: ವಾಸಸ್ಥಳದ ಕಟ್ಟಡದಲ್ಲಿ ಪಾರ್ಕಿಂಗ್ಗೆ ಸ್ಥಳಾವಕಾಶವಿದ್ದರೆ ಮಾತ್ರ ಇನ್ನು ಮುಂದೆ ವಾಹನ ಖರೀದಿಗೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದರು. ನಗರದಲ್ಲಿ ಹೆಚ್ಚುತ್ತಿರುವ ವಾಹನ ಪಾರ್ಕಿಂಗ್ ಸಮಸ್ಯೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆ ಪರಿಹರಿಸಲು ಇರುವ ಸಾಧ್ಯತೆಗಳ ಬಗ್ಗೆ ಮಾತನಾಡಿದರು. ನಗರದ ಹಲವೆಡೆ ಮನೆಯ ಮುಂಭಾಗದ ರಸ್ತೆ, ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಸರ್ಕಾರಿ ಖಾಲಿ ನಿವೇಶನ ಗುರುತಿಸುವುದರೊಂದಿಗೆ, ಖಾಸಗಿ ಖಾಲಿ ನಿವೇಶನಗಳಲ್ಲಿಯೂ ಪಾರ್ಕಿಂಗ್ಗೆ ಅವಕಾಶ ಕೊಡುವ […]
ಬೆಂಗಳೂರು: ವಾಸಸ್ಥಳದ ಕಟ್ಟಡದಲ್ಲಿ ಪಾರ್ಕಿಂಗ್ಗೆ ಸ್ಥಳಾವಕಾಶವಿದ್ದರೆ ಮಾತ್ರ ಇನ್ನು ಮುಂದೆ ವಾಹನ ಖರೀದಿಗೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದರು.
ನಗರದಲ್ಲಿ ಹೆಚ್ಚುತ್ತಿರುವ ವಾಹನ ಪಾರ್ಕಿಂಗ್ ಸಮಸ್ಯೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆ ಪರಿಹರಿಸಲು ಇರುವ ಸಾಧ್ಯತೆಗಳ ಬಗ್ಗೆ ಮಾತನಾಡಿದರು.
ನಗರದ ಹಲವೆಡೆ ಮನೆಯ ಮುಂಭಾಗದ ರಸ್ತೆ, ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಸರ್ಕಾರಿ ಖಾಲಿ ನಿವೇಶನ ಗುರುತಿಸುವುದರೊಂದಿಗೆ, ಖಾಸಗಿ ಖಾಲಿ ನಿವೇಶನಗಳಲ್ಲಿಯೂ ಪಾರ್ಕಿಂಗ್ಗೆ ಅವಕಾಶ ಕೊಡುವ ಬಗ್ಗೆ ಬಿಬಿಎಂಪಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.
ಪಾರ್ಕಿಂಗ್ ಸಮಸ್ಯೆ ಬಗ್ಗೆ ಪರಿಶೀಲಿಸಿ ಸಲಹೆ ನೀಡಲು ಸಮಿತಿ ರಚಿಸಲಾಗಿದೆ. ಸಮಿತಿ ವರದಿ ನೀಡಿದ ನಂತರ ಪರಿಹಾರದ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.
ಪಾರ್ಕಿಂಗ್ಗೆ ಜಾಗವಿಲ್ಲದೆ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಡಿಎನಲ್ಲಿ ಪ್ರಗತಿಗಿಂತ ಭ್ರಷ್ಟಾಚಾರವೇ ಹೆಚ್ಚು ಸದ್ದು ಮಾಡ್ತಿದೆ: BDA ನೂತನ ಅಧ್ಯಕ್ಷ S R ವಿಶ್ವನಾಥ್
Published On - 1:33 pm, Tue, 1 December 20