ಮಲೇರಿಯಾ ವಿರುದ್ಧ ಭಾರತದ ಪ್ರಬಲ ಹೋರಾಟ; ಸಾವಿನ ಸಂಖ್ಯೆ ಇಳಿಮುಖ
ಭಾರತದಲ್ಲಿ ಕಳೆದ 2ವರ್ಷಗಳಿಂದ ಮಲೇರಿಯಾ ವಿರುದ್ಧ ನಿರಂತರ ಹೋರಾಟ ನಡೆಯುತ್ತಿರುವ ಪರಿಣಾಮ ವಾರ್ಷಿಕ ಮಲೇರಿಯಾ ಪ್ರಕರಣದಲ್ಲಿ ಶೇ.18 ಮತ್ತು ಸಾವಿನ ಪ್ರಮಾಣದಲ್ಲಿ ಶೇ. 20ರಷ್ಟು ಕಡಿಮೆಯಾಗಿದೆ.
ವಿಶ್ವಸಂಸ್ಥೆ: ಮಲೇರಿಯಾ ವಿರುದ್ಧದ ಹೋರಾಟದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಆಗ್ನೇಯ ಏಷ್ಯಾದಲ್ಲಿ 2000ನೇ ಇಸವಿಯಲ್ಲಿ 20 ಕೋಟಿ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷ ಅದು 5.6 ದಶಲಕ್ಷಕ್ಕೆ ಇಳಿದಿದ್ದು ದಾಖಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಸೋಮವಾರ ವಿಶ್ವ ಮಲೇರಿಯಾ ವರದಿ-2020 ಬಿಡುಗಡೆ ಮಾಡಿದೆ. ಜಾಗತಿಕವಾಗಿ 22.9 ಕೋಟಿ ಮಲೇರಿಯಾ ಕೇಸ್ಗಳು ದಾಖಲಾಗಿದೆ. ಈ ವಾರ್ಷಿಕ ವರದಿಯ ಅಂದಾಜು ಕಳೆದ ನಾಲ್ಕು ವರ್ಷಗಳಿಂದಲೂ ಹೆಚ್ಚೇನೂ ಬದಲಾಗುತ್ತಿಲ್ಲ. ಕಳೆದ ವರ್ಷ ಒಟ್ಟಾರೆ 40,900 ಜನರು ಮಲೇರಿಯಾದಿಂದ ಪ್ರಾಣ ಕಳೆದುಕೊಂಡಿದ್ದರು. ಹಾಗೇ 2018ರಲ್ಲಿ 4,11,000 ಜನ ಈ ರೋಗಕ್ಕೆ ಬಲಿಯಾಗಿದ್ದರು. ಆದರೆ ಆಗ್ನೇಯ ಏಷ್ಯಾದ ದೇಶಗಳು ಮಲೇರಿಯಾ ವಿರುದ್ಧ ಪ್ರಬಲವಾಗಿ ಹೋರಾಡುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಸಾವಿನ ಪ್ರಮಾಣ ಇಳಿಮುಖ ಈ ದೇಶಗಳಲ್ಲಿ ಮಲೇರಿಯಾ ಪ್ರಕರಣ ಶೇ.73ರಷ್ಟಿದೆ ಮತ್ತು ಸಾವಿನ ಪ್ರಮಾಣ ಶೇ.74ಕ್ಕೆ ಇಳಿದಿದೆ. ಅದರಲ್ಲೂ ಭಾರತದಲ್ಲಿ ರೋಗದ ಪ್ರಮಾಣ ತೀವ್ರ ಕಡಿಮೆಯಾಗಿದೆ. 2000ರಲ್ಲಿ 29,500ಮಂದಿ ಮಲೇರಿಯಾದಿಂದ ಸಾವನ್ನಪ್ಪಿದ್ದರು, 2019ರಲ್ಲಿ 7700 ಜನ ಸಾವನ್ನಪ್ಪಿದ್ದಾರೆ. ಅಂದಿಗೆ ಹೋಲಿಸಿದರೆ ಈ ಪ್ರಮಾಣ ತುಂಬ ಕಡಿಮೆ ಎಂದು ಡಬ್ಲ್ಯೂಎಚ್ಒ ಡೈರೆಕ್ಟರ್ ಜನರಲ್ ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.
ಭಾರತದಲ್ಲಿ ಕಳೆದ 2 ವರ್ಷಗಳಿಂದ ಮಲೇರಿಯಾ ವಿರುದ್ಧ ನಿರಂತರ ಹೋರಾಟ ನಡೆಯುತ್ತಿರುವ ಪರಿಣಾಮ ವಾರ್ಷಿಕ ಮಲೇರಿಯಾ ಪ್ರಕರಣದಲ್ಲಿ ಶೇ.18 ಮತ್ತು ಸಾವಿನ ಪ್ರಮಾಣದಲ್ಲಿ ಶೇ. 20ರಷ್ಟು ಕಡಿಮೆಯಾಗಿದೆ. 2019ರಲ್ಲಿ ಭಾರತದಲ್ಲಿ ಶೇ.88 ಮಲೇರಿಯಾ ಪ್ರಕರಣಗಳು ಹಾಗೂ ಶೇ.86 ಸಾವಿನ ಪ್ರಕರಣಗಳು ವರದಿಯಾಗಿದೆ ಎಂದು ಡಬ್ಲ್ಯೂಎಚ್ಒ ವಿವರಿಸಿದೆ.
ಬುರ್ಕಿನಾ ಫಾಸೊ, ಕ್ಯಾಮರೂನ್, ಕಾಂಗೋ, ಘಾನಾ, ಭಾರತ, ಮಾಲಿ, ಮೊಜಾಂಬಿಕ್, ನಿಜರ್, ನೈಜೀರಿಯಾ, ಉಗಾಂಡಾ ಮತ್ತು ತಾಂಜೇನಿಯಾದಲ್ಲಿ ಹೆಚ್ಚು ಮಲೇರಿಯಾ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಜಾಗತಿಕ ಮಲೇರಿಯಾ ವರದಿಯಲ್ಲಿ ಶೇ.71ರಷ್ಟು ಪಾಲು ಈ ದೇಶಗಳದ್ದೇ ಆಗಿವೆ. ಆದರೆ ಭಾರತದಲ್ಲಿ ರೋಗದ ಪ್ರಮಾಣ ಕಡಿಮೆಯಾಗುತ್ತಿರುವುದು ಆಶಾದಾಯಕ ಎಂದು ವರದಿ ಹೇಳಿದೆ.
ಇನ್ನಷ್ಟು..
ಕೊರೊನಾ ಮೂಲ ಚೀನಾ ಅಲ್ಲ ಎಂಬ ವಾದವನ್ನು ಒಪ್ಪುವುದು ಕಷ್ಟ ಕಷ್ಟ ಎಂದ WHO! ಸೊಳ್ಳೆಗಳನ್ನು ಮನೆಯಿಂದ ಹೊರ ಓಡಿಸಲು ಕರ್ಪೂರ ಬಹಳ ಪರಿಣಾಕಾರಿ