Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿ ಹರ ವೀರ ಮಲ್ಲು ಬಿಡುಗಡೆ ಮತ್ತೆ ಮುಂದಕ್ಕೆ, ಪವನ್ ಕಲ್ಯಾಣ್ ಅಭಿಮಾನಿಗಳಿಗೆ ನಿರಾಸೆ

Pawan Kalyan: ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ರಂಗದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಆದರೆ ಅವರು ಶುರು ಮಾಡಿದ ಮೂರು ಸಿನಿಮಾಗಳು ಪೂರ್ಣವಾಗಿಲ್ಲ. ಅದರಲ್ಲಿ ಒಂದು ಸಿನಿಮಾ ಆಗಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗಿತ್ತು. ಆದರೆ ಅದು ಸಹ ಈಗ ಮುಂದೂಡಲ್ಪಡುತ್ತಿದೆ.

ಹರಿ ಹರ ವೀರ ಮಲ್ಲು ಬಿಡುಗಡೆ ಮತ್ತೆ ಮುಂದಕ್ಕೆ, ಪವನ್ ಕಲ್ಯಾಣ್ ಅಭಿಮಾನಿಗಳಿಗೆ ನಿರಾಸೆ
Hari Hara Veera Mallu
Follow us
ಮಂಜುನಾಥ ಸಿ.
|

Updated on:Apr 16, 2025 | 6:37 PM

ಪವನ್ ಕಲ್ಯಾಣ್ (Pawan Kalyan) ಪೂರ್ಣ ಪ್ರಮಾಣದ ನಾಯಕ ನಟರಾಗಿ ನಟಿಸಿದ ಸಿನಿಮಾ ಒಂದು ಬಿಡುಗಡೆ ಆಗಿ ಐದು ವರ್ಷವಾಯ್ತು. 2022 ರಲ್ಲಿ ಬಿಡುಗಡೆ ಆಗಿದ್ದ ‘ಭೀಮ್ಲಾ ನಾಯಕ್’ ಕೊನೆಯ ಸಿನಿಮಾ. ಅದಾದ ಮೇಲೆ ‘ಬ್ರೋ’ ಸಿನಿಮಾ ಬಿಡುಗಡೆ ಆಯ್ತಾದರೂ ಅದರಲ್ಲಿ ಪವನ್ ಅವರದ್ದು ಎಕ್ಸ್​ಟೆಂಡೆಡ್ ಅತಿಥಿ ಪಾತ್ರವಷ್ಟೆ. ರಾಜಕೀಯದಲ್ಲಿ ಬಲು ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಈಗ ಚಿತ್ರರಂಗದಿಂದ ಒಂದು ಕಾಲು ಹೊರಗಿಟ್ಟುಬಿಟ್ಟಿದ್ದಾರೆ. ಆದರೆ ಚುನಾವಣೆಗೆ ಮುನ್ನ ಒಪ್ಪಿಕೊಂಡ ಸಿನಿಮಾಗಳನ್ನಾದರೂ ಪೂರ್ಣ ಮಾಡಿಕೊಡುವ ಜವಾಬ್ದಾರಿ ಅವರ ಮೇಲಿದೆ. ಅದರಂತೆ ಅವರ ‘ಹರಿಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣವನ್ನು ಪವನ್ ಪೂರ್ಣಗೊಳಿಸಿದ್ದು, ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆಯಾಗಿತ್ತು. ಆದರೆ ಈಗ ಹೊರಬಿದ್ದಿರುವ ಸುದ್ದಿಗಳ ಪ್ರಕಾರ ಸಿನಿಮಾದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ.

‘ಹರಿ ಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣ ಶುರುವಾಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಆಂಧ್ರ ವಿಧಾನಸಭೆ ಚುನಾವಣೆಗೆ ಮುಂಚೆಯೇ ಈ ಸಿನಿಮಾದ ಚಿತ್ರೀಕರಣ ಕೆಲ ಅನಿವಾರ್ಯ ಕಾರಣಗಳಿಂದ ನಿಂತಿತ್ತು. ಆ ನಂತರ ಪವನ್​ರ ಅನುಕೂಲಕ್ಕೆ ತಕ್ಕಂತೆ ಸೆಟ್ ಬದಲಿಸಿ ಮತ್ತೆ ಚಿತ್ರೀಕರಣ ಮಾಡಲಾಗಿದೆ. ಸಿನಿಮಾ ಮೇ 9 ಕ್ಕೆ ಬಿಡುಗಡೆ ಆಗಲಿದೆ ಎಂದು ಘೋಷಣೆ ಸಹ ಮಾಡಲಾಗಿತ್ತು. ಅದಕ್ಕೆ ಮುಂಚೆ ಸಿನಿಮಾದ ಹಾಡು, ಟೀಸರ್ ಬಿಡುಗಡೆ ಸಹ ಮಾಡಲಾಯ್ತು. ಆದರೆ ಈಗ ಹೊರಬಿದ್ದಿರುವ ಸುದ್ದಿಯಂತೆ ಸಿನಿಮಾದ ಬಿಡುಗಡೆ ತಡವಾಗಲಿದೆ.

‘ಹರಿಹರ ವೀರ ಮಲ್ಲು’ ಸಿನಿಮಾದ ಪೂರ್ಣ ಚಿತ್ರೀಕರಣ ಇನ್ನೂ ಮುಗಿದಿಲ್ಲವಂತೆ ಆಕ್ಷನ್ ಸೇರಿದಂತೆ ಕೆಲ ದೃಶ್ಯಗಳ ಚಿತ್ರೀಕರಣ ಬಾಕಿ ಇದೆಯಂತೆ, ಆ ವೇಳೆಗಾಗಲೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಆದರೆ ಪವನ್ ಕಲ್ಯಾಣ್, ರಾಜಕೀಯ ಕಾರ್ಯಕ್ರಮದ ನಡುವೆ ಹಾಗೂ ಮುಖ್ಯವಾಗಿ ಆರೋಗ್ಯ ಸಮಸ್ಯೆಯ ಕಾರಣ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲಾಗಲಿಲ್ಲವಂತೆ. ಪವನ್ ಕಲ್ಯಾಣ್​, ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಬಾಕಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲವಂತೆ. ಹಾಗಾಗಿ ಸಿನಿಮಾದ ಮುಖ್ಯ ಭಾಗಗಳ ಚಿತ್ರೀಕರಣ ಪೂರ್ಣವಾಗಿಲ್ಲ. ಹಾಗಾಗಿ ನಿಗದಿಯಂತೆ ಮೇ 9 ರಂದು ಸಿನಿಮಾ ಬಿಡುಗಡೆ ಆಗುತ್ತಿಲ್ಲ.

ಇದನ್ನೂ ಓದಿ:ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಕಲ್ಯಾಣ್ ಪತ್ನಿ

ಇತ್ತೀಚೆಗಷ್ಟೆ ಪವನ್ ಕಲ್ಯಾಣ್​ರ ಪುತ್ರ ಮಾರ್ಕ್ ಶಂಕರ್​ ಸಿಂಗಪುರದಲ್ಲಿ ಆದ ಅಗ್ನ ಅವಘದಲ್ಲಿ ಗಾಯಗೊಂಡಿದ್ದು, ಮಾರ್ಕ್ ಶಂಕರ್ ಶ್ವಾಸಕೋಶ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಅವರ ರಾಜಕೀಯ ಮತ್ತು ಸಿನಿಮಾ ಕಾರ್ಯಕ್ರಮಗಳಿಗೆ ತಡೆ ಒಡ್ಡಿದೆ.

‘ಹರಿ ಹರ ವೀರ ಮಲ್ಲು’ ಸಿನಿಮಾ ಮಾತ್ರವಲ್ಲ ಇನ್ನೂ ಎರಡು ಸಿನಿಮಾಗಳು ಪವನ್ ಕಲ್ಯಾಣ್ ಕೈಯಲ್ಲಿವೆ. ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ಸಹ ಅರ್ಧ ಮುಗಿದಿವೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಪವನ್ ಕಲ್ಯಾಣ್ ಜೊತೆಗೆ ಶ್ರೀಲೀಲಾ ಸಹ ನಟಿಸುತ್ತಿದ್ದಾರೆ. ಇನ್ನು ‘ಓಜಿ’ ಸಿನಿಮಾದ ಬಗ್ಗೆ ಸ್ವತಃ ಪವನ್ ಕಲ್ಯಾಣ್​ಗೆ ಬಹಳ ನಿರೀಕ್ಷೆ ಇದೆಯಂತೆ. ಆದರೆ ಆ ಸಿನಿಮಾದ ಚಿತ್ರೀಕರಣ ಇನ್ನೂ ಪೂರ್ಣವಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Wed, 16 April 25