ಕ್ಷಮೆ ಕೇಳಿ ಉಡುಗೊರೆ ಕೊಟ್ಟ ಗಿಲ್ಲಿ, ಶಿಕ್ಷೆ ಕೊಟ್ಟ ಕಾವ್ಯಾ
Bigg Boss Kannada 12: ಗಿಲ್ಲಿ ಮತ್ತು ಕಾವ್ಯಾ ಒಳ್ಳೆಯ ಗೆಳೆತನವನ್ನು ಈ ಜೋಡಿ ಕಾಪಾಡಿಕೊಂಡು ಬಂದಿದ್ದಾರೆ. ಗಿಲ್ಲಿ, ಪ್ರೀತಿ-ಪ್ರೇಮ ಎಂದು ಕಾವ್ಯಾರ ಕಾಲೆಳೆಯುತ್ತಾರಾದರೂ ಕಾವ್ಯಾ ಅದಕ್ಕೆಲ್ಲ ಅವಕಾಶ ಕೊಟ್ಟಿದ್ದೇ ಇಲ್ಲ. ಹಾಗೆಂದು ಗೆಳೆತನವನ್ನು ದೂರ ತಳ್ಳಿಲ್ಲ. ಇದೀಗ ಫಿನಾಲೆ ವಾರಕ್ಕೆ ಮುಂಚೆ ಬಿಗ್ಬಾಸ್ ಮನೆಯಲ್ಲಿ ಕೆಲವು ಅದ್ಭುತಗಳು ನಡೆದಿವೆ. ಗಿಲ್ಲಿ, ಕಾವ್ಯಾ ಬಳಿ ಕ್ಷಮೆ ಕೇಳಿ ಉಡುಗೊರೆ ಕೊಟ್ಟಿದ್ದಾರೆ. ಆದರೆ ಕಾವ್ಯಾ ಮಾತ್ರ, ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟಿದ್ದಾರೆ.

ಬಿಗ್ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಅವರದ್ದು ಒಳ್ಳೆಯ ಜೋಡಿ. ಒಮ್ಮೊಮ್ಮೆ ಬಹಳ ಆತ್ಮೀಯರಾಗಿರುವ ಇವರು ಇನ್ನು ಕೆಲವೊಮ್ಮೆ ಕಿತ್ತಾಡುತ್ತಾರೆ. ಒಳ್ಳೆಯ ಗೆಳೆತನವನ್ನು ಈ ಜೋಡಿ ಕಾಪಾಡಿಕೊಂಡು ಬಂದಿದೆ. ಗಿಲ್ಲಿ, ಪ್ರೀತಿ-ಪ್ರೇಮ ಎಂದು ಕಾವ್ಯಾರ ಕಾಲೆಳೆಯುತ್ತಾರಾದರೂ ಕಾವ್ಯಾ ಅದಕ್ಕೆಲ್ಲ ಅವಕಾಶ ಕೊಟ್ಟಿದ್ದೇ ಇಲ್ಲ. ಹಾಗೆಂದು ಗೆಳೆತನವನ್ನು ದೂರ ತಳ್ಳಿಲ್ಲ. ಇದೀಗ ಫಿನಾಲೆ ವಾರಕ್ಕೆ ಮುಂಚೆ ಬಿಗ್ಬಾಸ್ ಮನೆಯಲ್ಲಿ ಕೆಲವು ಅದ್ಭುತಗಳು ನಡೆದಿವೆ. ಗಿಲ್ಲಿ, ಕಾವ್ಯಾ ಬಳಿ ಕ್ಷಮೆ ಕೇಳಿ ಉಡುಗೊರೆ ಕೊಟ್ಟಿದ್ದಾರೆ. ಆದರೆ ಕಾವ್ಯಾ ಮಾತ್ರ, ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟಿದ್ದಾರೆ.
ಈ ಪಯಣದಲ್ಲಿ ನಿಮ್ಮ ಜೊತೆಗೆ ನಿಂತ ವ್ಯಕ್ತಿಗೆ ನಿಮ್ಮ ವಸ್ತುವೊಂದನ್ನು ಉಡುಗೊರೆಯಾಗಿ ಕೊಟ್ಟು ಧನ್ಯವಾದ ಹೇಳಿ ಎಂದು ಸುದೀಪ್ ಹೇಳಿದರು. ಕೂಡಲೇ ಗಿಲ್ಲಿ, ಕಾವ್ಯಾಗೆ ಕೈಗೆ ಬೆಳ್ಳಿಯ ಬ್ರೇಸ್ಲೆಟ್ ಒಂದನ್ನು ನೀಡಿದರು. ಅಸಲಿಗೆ ಕಾವ್ಯಾರ ಮನೆಯವರು ಗಿಲ್ಲಿಗೆ ಬ್ರೇಸ್ಲೆಟ್ ಒಂದನ್ನು ನೀಡಿದ್ದರು. ಅದನ್ನೇ ಮರಳಿ ಕೊಡುತ್ತಿದ್ದೀಯ ಎಂದು ಕಾವ್ಯಾ ಕೇಳಿದರು. ಅದಕ್ಕೆ ಗಿಲ್ಲಿ, ಇಲ್ಲ ಅದು ನನ್ನ ಬಳಿಯೇ ಇದೆ. ಇದು ನಿನಗೆ ಕೊಡಲೆಂದೇ ಹೊಸದು ತರಿಸಿಕೊಂಡಿದ್ದೆ ಎಂದು ಹೇಳಿ ಉಡುಗೊರೆಯನ್ನು ಕೊಟ್ಟರು. ಇನ್ನು ಕಾವ್ಯಾ, ಗಿಲ್ಲಿ ಇಷ್ಟು ದಿನ ತಮ್ಮ ಪರವಾಗಿ ನಿಂತಿದ್ದಕ್ಕೆ ಅವರ ಬಾಚಣಿಗೆಯನ್ನು ಗಿಲ್ಲಿಗೆ ನೀಡಿದರು. ಅಂದಹಾಗೆ ಗಿಲ್ಲಿ, ಕಾವ್ಯಾಗೆ ಉಡುಗೊರೆ ಕೊಡುವ ಮೊದಲು, ಇತ್ತೀಚೆಗೆ ಕಾವ್ಯಾ ಬಗ್ಗೆ ತಾವು ಆಡಿದ ಮಾತು ಸರಿ ಇರಲಿಲ್ಲ. ಏನೋ ತಮಾಷೆ ಮಾಡಲು ಹೋಗಿ ಏನೋ ಹೇಳಿಬಿಟ್ಟೆ ಹಾಗೆ ಹೇಳಬಾರದಿತ್ತು ಎಂದು ಹೇಳಿ ಕ್ಷಮೆ ಸಹ ಕೇಳಿದರು.
ಇದನ್ನೂ ಓದಿ:ಗ್ಲಾಮರಸ್ ಅವತಾರದಲ್ಲಿ ಮಾಜಿ ಬಿಗ್ಬಾಸ್ ಸ್ಪರ್ಧಿ ರಿಶಾ ಗೌಡ: ವಿಡಿಯೋ
ಯಾರು ನಿಮ್ಮನ್ನು ಬಹಳ ಕಾಡಿಸಿದ್ದಾರೊ ಅವರಿಗೆ ಶಿಕ್ಷೆ ಕೊಡುವ ಅವಕಾಶವನ್ನು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದರು. ಮನೆಯ ಎಲ್ಲ ಸ್ಪರ್ಧಿಗಳು ಅತಿ ಹೆಚ್ಚು ಶಿಕ್ಷೆ ಕೊಟ್ಟಿದ್ದು ಗಿಲ್ಲಿಗೆ. ಕೈ ಮತ್ತು ಕಾಲಿನ ಕೂದಲಿಗೆ ವ್ಯಾಕ್ಸ್ ಹೇರ್ ರಿಮೂವರ್ ಹಾಕಿ ಕೀಳುವುದು, ಕಹಿಯಾದ ಕಶಾಯ ಕುಡಿಸುವುದು, ಲಿಂಬೆ ಮತ್ತು ಮೆಣಸಿನಕಾಯಿಯನ್ನು ಒಟ್ಟಿಗೆ ತಿನ್ನಿಸುವುದು ಮತ್ತು ದೊಡ್ಡದಾದ, ಅಗಲವಾದ ನಕಲಿ ಕೈ ಇಂದ ಹೊಡೆಯುವುದು. ಈ ನಾಲ್ಕು ಶಿಕ್ಷೆಗಳಲ್ಲಿ ಯಾವ ಶಿಕ್ಷೆಯನ್ನು ಬೇಕಾದರೂ ನೀಡಬಹುದಾಗಿತ್ತು.
ಅಂತೆಯೇ ಕಾವ್ಯಾ, ಗಿಲ್ಲಿಗೆ ವ್ಯಾಕ್ಸ್ ಹಾಕಿ ಹೇರ್ ರಿಮೂವ್ ಮಾಡಿದರು. ಅದಾದ ಬಳಿಕ ಅಶ್ವಿನಿ, ಗಿಲ್ಲಿಗೆ ಕಶಾಯ ಕುಡಿಸಿದರು. ರಘು ಬಂದು ಕೈಯಿಂದ ಹೊಡೆದರು. ರಾಶಿಕಾ ಬಂದು ಮೆಣಸಿನಕಾಯಿ-ನಿಂಬೆ ತಿನ್ನುವಂತೆ ಮಾಡಿದರು ಹೀಗೆ ಹೆಚ್ಚು ಮಂದಿ ಗಿಲ್ಲಿಗೆ ಶಿಕ್ಷೆ ನೀಡಿದರು. ಗಿಲ್ಲಿ ಮಾತ್ರ ರಘುಗೆ ಶಿಕ್ಷೆ ನೀಡಿದರು. ರಘುಗೆ ಹೇರ್ ರಿಮೂವರ್ ಹಾಕಿ ತೆಗೆದರು.
ಈ ವಾರ ರಾಶಿಕಾ, ಬಿಗ್ಬಾಸ್ ಮನೆಯಿಂದ ಎವಿಕ್ಟ್ ಆಗಿದ್ದಾರೆ. ಆ ಮೂಲಕ ಗಿಲ್ಲಿ, ಅಶ್ವಿನಿ, ಧ್ರುವಂತ್, ರಘು, ಧನುಶ್, ರಕ್ಷಿತಾ ಶೆಟ್ಟಿ ಮತ್ತು ಕಾವ್ಯಾ ಮಾತ್ರವೇ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದು, ಇವರೆಲ್ಲ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ಈ ವಾರ ಮಧ್ಯ ಭಾಗದಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದು ಯಾರೆಂದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:12 pm, Sun, 11 January 26




