ಹತ್ತಾರು ಬೈಕ್ ಸುಟ್ಟು ಭಸ್ಮ, 15 ಮನೆಗಳಿಗೆ ಹಾನಿ: ಆಕಸ್ಮಿಕ ಬೆಂಕಿಯೋ, ದ್ವೇಷದ ಕಿಡಿಯೋ?
ಅವರೆಲ್ಲಾ ದಿನಕೂಲಿ ನಂಬಿ ಬದುಕೋರು.. ಆದ್ರೆ ಅವರ ಬದುಕು ಇಂದು ದುಸ್ತರವಾಗಿದೆ. ಜೀವನಕ್ಕೆ ಆಧಾರವಾಗಿದ್ದ ಸ್ಪಂಜುಗಳು ಹೊತ್ತಿ ಉರಿದಿದ್ದು ಸಾಕಷ್ಟು ನಷ್ಟವಾಗಿದೆ. ಹೌದು... ನಿನ್ನೆ ತಡರಾತ್ರಿ 2:30ರ ಸುಮಾರಿಗೆ ಎಲ್ಲರೂ ಕೂಡ ಗಾಢ ನಿದ್ರೆಯಲ್ಲಿದ್ರು. ಆದ್ರೆ ಏಕಾಏಕಿ ಹೊತ್ತಿ ಉರಿದ ಬೆಂಕಿ ಕೂಲಿನಗರದ ನಿವಾಸಿಗಳ ನಿದ್ದೆಯನ್ನ ಹಾಳು ಮಾಡಿ ಬದುಕನ್ನ ಬೀದಿಗೆ ತಂದಿದೆ. ನಂದಿನಿಲೇಔಟ್‌ನ ಕೂಲಿನಗರದ ನಿವಾಸಿಗಳು ಸ್ಪಾಂಜ್‌ಗಳನ್ನ ಮಾರಿ ಜೀವನ ಸಾಗಿಸೋರು. ಹೀಗಾಗಿ ತಮ್ಮ ಮನೆಗಳ ಮೇಲೆ ಸ್ಪಾಂಜ್‌ಗಳ ಮೂಟೆಯನ್ನ ಇರಿಸಿದ್ರು. ಆದ್ರೆ ತಡರಾತ್ರಿ ಏಕಾಏಕಿ ಸ್ಪಾಂಜು ಹೊತ್ತಿ ಉರಿದಿದೆ.
ಬೆಂಗಳೂರು, (ಜನವರಿ 11): ಅವರೆಲ್ಲಾ ದಿನಕೂಲಿ ನಂಬಿ ಬದುಕೋರು.. ಆದ್ರೆ ಅವರ ಬದುಕು ಇಂದು ದುಸ್ತರವಾಗಿದೆ. ಜೀವನಕ್ಕೆ ಆಧಾರವಾಗಿದ್ದ ಸ್ಪಂಜುಗಳು ಹೊತ್ತಿ ಉರಿದಿದ್ದು ಸಾಕಷ್ಟು ನಷ್ಟವಾಗಿದೆ. ಹೌದು… ನಿನ್ನೆ ತಡರಾತ್ರಿ 2:30ರ ಸುಮಾರಿಗೆ ಎಲ್ಲರೂ ಕೂಡ ಗಾಢ ನಿದ್ರೆಯಲ್ಲಿದ್ರು. ಆದ್ರೆ ಏಕಾಏಕಿ ಹೊತ್ತಿ ಉರಿದ ಬೆಂಕಿ ಕೂಲಿನಗರದ ನಿವಾಸಿಗಳ ನಿದ್ದೆಯನ್ನ ಹಾಳು ಮಾಡಿ ಬದುಕನ್ನ ಬೀದಿಗೆ ತಂದಿದೆ. ನಂದಿನಿಲೇಔಟ್‌ನ ಕೂಲಿನಗರದ ನಿವಾಸಿಗಳು ಸ್ಪಾಂಜ್‌ಗಳನ್ನ ಮಾರಿ ಜೀವನ ಸಾಗಿಸೋರು. ಹೀಗಾಗಿ ತಮ್ಮ ಮನೆಗಳ ಮೇಲೆ ಸ್ಪಾಂಜ್‌ಗಳ ಮೂಟೆಯನ್ನ ಇರಿಸಿದ್ರು. ಆದ್ರೆ ತಡರಾತ್ರಿ ಏಕಾಏಕಿ ಸ್ಪಾಂಜು ಹೊತ್ತಿ ಉರಿದಿದೆ. ಸ್ಪಾಂಜ್ ಹೊತ್ತಿದ ಪರಿಣಾಮ ಬೆಂಕಿ ಮುಗಿಲೆತ್ತರಕ್ಕೆ ಹಬ್ಬಿದ್ದು, ಅಲ್ಲಿದ್ದ ಸುಮಾರು 10ರಿಂದ 15 ಮನೆಗಳಿಗೆ ಹಾನಿ ಹಾಗಿದೆ. ಇನ್ನು ಮನೆ ಮುಂದೆ ನಿಲ್ಲಿಸಿದ 7-8 ಬೈಕ್ ಹಾಗೂ ಟಾಟಾ ಏಸ್‌ಗಳು ಸುಟ್ಟು ಹೋಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದು…, ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಇನ್ನು ಇದು ಆಕಸ್ಮಿಕ ಬೆಂಕಿಯೋ ಅಥವಾ ದ್ವೇಷದಿಂದ ಹೊತ್ತಿಸಿದ ಕಿಡಿಯೋ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್ ಹೇಳಿಕೆ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ

