ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?, ಗಂಡ-ಹೆಂಡ್ತಿ ಜಗಳ ಕೇಸ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್
ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ, ಇವರ ಜಗಳ ಮಾತ್ರ ಬೀದಿಗೆ ಬಂದಿದೆ. ತನ್ನ ಗಂಡ ಸೈಕೋ, ಸಾಕಷ್ಟು ಟಾರ್ಚರ್ ಕೊಡುತ್ತಾನೆ ಎಂದು ಮಹಿಳೆ ಪೊಲೀಸ್ ಮೆಟ್ಟಿಲೇರಿದ್ದಾಳೆ. ಅತ್ತೆ ಮಾನವ ಮುಂದೆ ಬೆತ್ತಲಾಗಿ ಓಡಾಡುತ್ತಾನೆ. ಅಶ್ಲೀಲ ವಿಡಿಯೋ ತೋರಿಸಿ ಕಾಟ ಕೊಡುತ್ತಾನೆಂದು ದೂರಿದ್ದಾಳೆ. ಆದರೆ, ಈ ಕೇಸಿಗೆ ಗಂಡ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ. ನಮ್ಮಿಬ್ಬರಿಗೂ ಅಧಿಕೃತವಾಗಿ ಮದುವೆಯಾಗಿಲ್ಲ. ಮದುವೆ ನೊಂದಣಿಗೆ ಮೇಘಾಶ್ರೀ ದಾಖಲೆಗಳನ್ನು ಕೋಡಲಿಲ್ಲ. ಇದರಿಂದ ಅನುಮಾನ ಬಂದು ಪ್ರಶ್ನಿಸಿದಾಗ ಮೇಘಾಶ್ರೀ ಬಂಡವಾಳ ಬಯಲಾಗಿದೆ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಚಿಕ್ಕಬಳ್ಳಾಪುರ, (ಜನವರಿ 11): ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ, ಇವರ ಜಗಳ ಮಾತ್ರ ಬೀದಿಗೆ ಬಂದಿದೆ. ತನ್ನ ಗಂಡ ಸೈಕೋ, ಸಾಕಷ್ಟು ಟಾರ್ಚರ್ ಕೊಡುತ್ತಾನೆ ಎಂದು ಮಹಿಳೆ ಪೊಲೀಸ್ ಮೆಟ್ಟಿಲೇರಿದ್ದಾಳೆ. ಅತ್ತೆ ಮಾನವ ಮುಂದೆ ಬೆತ್ತಲಾಗಿ ಓಡಾಡುತ್ತಾನೆ. ಅಶ್ಲೀಲ ವಿಡಿಯೋ ತೋರಿಸಿ ಕಾಟ ಕೊಡುತ್ತಾನೆಂದು ದೂರಿದ್ದಾಳೆ. ಆದರೆ, ಈ ಕೇಸಿಗೆ ಗಂಡ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ. ನಮ್ಮಿಬ್ಬರಿಗೂ ಅಧಿಕೃತವಾಗಿ ಮದುವೆಯಾಗಿಲ್ಲ. ಮದುವೆ ನೊಂದಣಿಗೆ ಮೇಘಾಶ್ರೀ ದಾಖಲೆಗಳನ್ನು ಕೋಡಲಿಲ್ಲ. ಇದರಿಂದ ಅನುಮಾನ ಬಂದು ಪ್ರಶ್ನಿಸಿದಾಗ ಮೇಘಾಶ್ರೀ ಬಂಡವಾಳ ಬಯಲಾಗಿದೆ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮೇಘಾಶ್ರೀ ಪತಿ ಮಂಜುನಾಥ್ ಟಿವಿ9ಗೆ ಪ್ರತಿಕ್ರಿಯಿಸಿ, ನಾನು ಕೆಲಸ ಮಾಡ್ತಿದ್ದ ಕಂಪನಿಯಲ್ಲಿ ನನ್ನ ಬಳಿ ರಿಪೋರ್ಟ್ ಮಾಡಲು ಬಂದಿದ್ದಳು. ಬೆತ್ತಲೆಯಾಗಿ ವಿಡಿಯೊ ಕಾಲ್ ಮಾಡುವುದು, ಅರೆಬೆತ್ತಲು ವಿಡಿಯೊ ಕಳುಹಿಸುವುದು, ಹನಿಟ್ರ್ಯಾಪ್ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಳು. ನಾನು ಆಕೆಯ ಜೊತೆ ವಿಚಿತ್ರವಾಗಿ ವರ್ತಿಸಿಲ್ಲ. ಆಕೆ ಮೊದಲೆ ಎರಡು ಮದುವೆ ಮಾಡಿಕೊಂಡಿದ್ದಳು. ಮದುವೆ ಮಾಡಿಕೊಂಡಿರುವ ವಿಚಾರ ನನಗೆ ತಿಳಿಸಿರಲಿಲ್ಲ. ಆಕೆ ಶೋಕಿ ಮಾಡುವ ಗೀಳು ಹೊಂದಿದ್ದಾಳೆ. ಕುಡಿದು ಬೇಕಾಬಿಟ್ಟಿ ವರ್ತಿಸುತ್ತಿದ್ದಳು ಎಂದು ಆರೋಪಿಸಿದ್ದಾರೆ.
ಇದನ್ನೂ ನೋಡಿ; ಎರಡು ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್
ರೌಡಿ ಶೀಟರ್ ನೊರ್ವನನ್ನು ಅಣ್ಣ ಅಂತಾ ಆತನಿಂದ ಬೆದರಿಕೆ ಹಾಕಿಸುತ್ತಿದ್ದಳು. ಸುಮಾರು 25 ಲಕ್ಷ ರೂಪಾಯಿ ನಷ್ಟು ಹಣ ಪಡೆದುಕೊಂಡಿದ್ದಾಳೆ. ಮೊದಲನೆ ಗಂಡ, ಎರಡನೇ ಗಂಡ, ಶಾಪಿಂಗ್ ಮಾಡುವ , ಸ್ನೇಹಿತರ ಜೊತೆ ಶೋಕಿ ಮಾಡುವ ಫೋಟೋಗಳನ್ನು ರಿಲೀಸ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

