ಎರಡು ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್
ಪತಿ ಮಂಜುನಾಥ್ ಮಾಡಿದ ಆರೋಪಗಳಿಗೆ ಪತ್ನಿ ಮೇಘಶ್ರೀ ತಿರುಗೇಟು ನೀಡಿದ್ದಾರೆ. ತಮ್ಮ ಎರಡು ವಿವಾಹ ವಿಚ್ಛೇದನಗಳ ಬಗ್ಗೆ ಮಂಜುನಾಥ್‌ಗೆ ಸಂಪೂರ್ಣ ಮಾಹಿತಿ ಇತ್ತು ಎಂದಿರುವ ಅವರು, ಹಣ ಹಾಗೂ ಚಿನ್ನದ ಬಗ್ಗೆ ಪತಿಯ ಆರೋಪಗಳನ್ನು ಸುಳ್ಳು ಎಂದಿದ್ದಾರೆ. ತಾವು ಮಂಜುನಾಥ್‌ಗೆ ಹಣ ಮತ್ತು ಚಿನ್ನ ನೀಡಿದ ಬಗ್ಗೆ ದಾಖಲೆಗಳಿರುವದಾಗಿ ತಿಳಿಸಿ, ಕಾನೂನು ಹೋರಾಟಕ್ಕೆ ಸಿದ್ಧ ಎಂದು ಹೇಳಿದ್ದಾರೆ
ಬೆಂಗಳೂರು, ಜನವರಿ 11: ಮಂಜುನಾಥ್ ಮತ್ತು ಮೇಘಶ್ರೀ ದಂಪತಿ ನಡುವಿನ ಕಲಹ ತಾರಕಕ್ಕೇರಿದೆ. ಪತಿ ಸೈಕೋ ರೀತಿ ವರ್ತಿಸ್ತಾನೆ ಎಂದು ಮೇಘಶ್ರೀ ಮಾಡಿದ್ದ ಆರೋಪಗಳಿಗೆ ಮಂಜುನಾಥ್ ಕೌಂಟರ್ ಕೊಟ್ಟಿದ್ದರು. ಆಕೆಗೆ ಅನೇಕ ಮದುವೆಗಳಾಗಿವೆ. ತಾನು ಕೂಡ ಆಕೆಗೆ 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್ಗಳನ್ನು ನೀಡಿರೋದಾಗಿ ತಿಳಿಸಿದ್ದರು. ಆದ್ರೀಗ ಮಂಜುನಾಥ್ ಆರೋಪವನ್ನು ಮೇಘಶ್ರೀ ಅಲ್ಲಗಳೆದಿದ್ದಾರೆ. ಮಂಜುನಾಥ್‌ಗೆ ತನ್ನ ಹಿಂದಿನ ಎರಡು ವಿವಾಹ ವಿಚ್ಛೇದನಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು ಎಂದಿದ್ದಾರೆ. ಅಲ್ಲದೆ, ಆತ ತನ್ನ ವಿರುದ್ದ ಸುಳ್ಳು ಆರೋಪಗಳನ್ನ ಮಾಡುವುದ ಮುಂದುವರೆಸಿದರೆ ಕ್ರಮ ತೆಗೆದುಕೊಳ್ತೀನಿ. ಹೆಸರು ಬರೆದಿಟ್ಟು ಮುಂದೆ ಏನ್ ಮಾಡ್ಬೇಕೋ ಯೋಚ್ನೆ ಮಾಡ್ತೀನಿ ಎಂದಿದ್ದಾರೆ. ಜೊತೆಗೆ ಆತನೇ
ತನ್ನಿಂದ ಐದು ಲಕ್ಷ ಹಣ ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
