- Kannada News Photo gallery If you are getting married follow these tips from moms to make your marriage eternal
ಈ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ತಪ್ಪದೆ ಕೇಳಿ
ಮದುವೆ ಎಂಬುದು ಜೀವನ ಪರ್ಯಂತ ಸಾಗುವ ಒಂದು ಮಧುರವಾದ ಅನುಬಂಧ. ಅಲ್ಲದೆ ಮದುವೆ ಜೀವನದ ಮಹತ್ವವಾದ ತಿರುವು ಕೂಡಾ ಹೌದು. ಈ ಸುಂದರ ಸಂಬಂಧ ಶಾಶ್ವತವಾಗಿ ಸುಮಧುರವಾಗಿ ಇರಬೇಕೆಂದರೆ ಒಂದಷ್ಟು ವಿಚಾರಗಳ ಬಗ್ಗೆ ಜಾಗೃತೆ ವಹಿಸುವುದು ಅತ್ಯಗತ್ಯ. ಹೀಗಿರುವಾಗ ಈ ವಿಷಯದಲ್ಲಿ ಅಮ್ಮನ ಮಾತನ್ನು ಕೇಳುವುದು ಸೂಕ್ತ. ಏಕೆಂದರೆ ಸಂಬಂಧ ನಿಭಾಯಿಸುವ, ಸಾಂಸಾರಿಕ ಜೀವನವನ್ನು ಸರಿದೂಗಿಸಿಕೊಂಡ ಹಾಗೂ ಜವಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಹೋಗುವ ವಿಷಯದಲ್ಲಿ ಅಮ್ಮನಿಗೆ ಅನುಭವವಿದೆ. ಹಾಗಾಗಿ ಈ ವಿಚರದಲ್ಲಿ ಅಮ್ಮನ ಮಾತನ್ನು ಕೇಳುವುದು ಸೂಕ್ತ.
Updated on:Apr 16, 2025 | 6:11 PM

ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವುದು: ಮದುವೆಯ ವಿಚಾರಕ್ಕೆ ಬಂದಾಗ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ಮೊದಲ ಹಂತದಲ್ಲಿಯೇ ದುಡುಕಿದರೆ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆ-ಮನಕ್ಕೆ ಸೂಕ್ತವಾಗುವ, ಸಂಸ್ಕಾರಯುತ, ಒಳ್ಳೆಯ ಗುಣವಿರುವ ಸಂಗಾತಿಯನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ.

ಮೊಬೈಲ್, ಇತ್ಯಾದಿ ಸಾಧನಗಳಿಂದ ದೂರವಿರಿ: ಈಗ ನೀವು 24 ಗಂಟೆಯೂ ಮೊಬೈಲ್‌ನಲ್ಲಿಯೇ ಸಮಯವನ್ನು ಕಳೆಯುತ್ತಿರಬಹುದು. ಆದರೆ ಮದುವೆಯಾದ ಬಳಿಕ ಈ ಅಭ್ಯಾಸವನ್ನು ಬಿಟ್ಟುಬಿಡಿ. ಹೀಗೆ ಯಾವಾಗಲೂ ಮೊಬೈಲ್‌ನಲ್ಲಿಯೇ ಗಮನ ಇದ್ರೆ, ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಿಲ್ಲ. ಇದರಿಂದ ಮನಸ್ತಾಪಗಳು ತಲೆದೂರುವ ಸಾಧ್ಯತೆ ಇರುತ್ತದೆ.

ರಾಜಿ ಸಂಧಾನ: ಸಂಬಂಧದಲ್ಲಿ ಒಂದಷ್ಟು ಜಗಳ, ಹುಸಿ ಮುನಿಸುಗಳು ಸಾಮಾನ್ಯ. ಈ ಸಣ್ಣ ಮನಸ್ತಾಪಗಳನ್ನೇ ದೊಡ್ಡದು ಮಾಡಿಕೊಂಡು ಮಾತು ಬಿಟ್ಟರೆ ಮುಂದಿನ ದಿನಗಳಲ್ಲಿ ಇದುವೇ ಸಂಬಂಧದಲ್ಲಿ ಬಿರುಕು ಮೂಡುವುದಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಒಬ್ಬರಿಗೊಬ್ಬರು ಮಾತನಾಡಿಕೊಂಡು, ತಪ್ಪನ್ನು ತಿದ್ದಿಕೊಂಡು ನಡೆಯುವ ಗುಣವನ್ನು ಇಂದೇ ರೂಢಿಸಿಕೊಳ್ಳಿ.

ತಪ್ಪುಗಳನ್ನು ಕ್ಷಮಿಸಿ: ಕೆಲವರು ಸಂಗಾತಿಗಳ ತಪ್ಪನ್ನು ಕ್ಷಮಿಸದೆ ಅದೇ ವಿಷಯವನ್ನು ಇಟ್ಟುಕೊಂಡು ಪದೇ ಪದೇ ಜಗಳವಾಡುತ್ತಾರೆ. ಈ ಜಗಳಗಳು, ಮನಸ್ತಾಪಗಳು ಅತಿರೇಕಕ್ಕೆ ತಿರುಗಿದರೆ ಇದು ನಿಮ್ಮ ಸುಂದರ ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ. ಈ ವಿಷಯವಾಗಿ ಡಿವೋರ್ಸ್ ಹಂತಕ್ಕೆ ಹೋದವರು ಇದ್ದಾರೆ. ಹೀಗಿರುವಾಗ ನೀವು ಮದುವೆಯಾದ ಬಳಿಕ ನಿಮ್ಮ ಸಂಬಂಧ ಶಾಶ್ವತವಾಗಿರಬೇಕೆಂದರೆ ತಪ್ಪನ್ನು ಕ್ಷಮಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ನಿಷ್ಠೆಯಿಂದ ಇರಿ: ಮದುವೆಯಾದ ಬಳಿಕ ನೀವು ಯಾರಿಗಾಗಿಯೋ ನಿಮ್ಮ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ಎಂತಹದ್ದೇ ಸಂದರ್ಭ ಬಂದರೂ ಸಂಬಂಧದ ವಿಷಯದಲ್ಲಿ ನಿಷ್ಠಾವಂತರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ನಿಷ್ಠೆ ಪ್ರೀತಿ, ಪರಸ್ಪರ ಗೌರವ, ಅರ್ಥ ಮಾಡಿಕೊಳ್ಳುವ ಗುಣ ಈ ಎಲ್ಲಾ ಅಂಶಗಳು ಸಂಬಂಧಗಳನ್ನು ಬಲ ಪಡಿಸುತ್ತದೆ.
Published On - 6:10 pm, Wed, 16 April 25
























