Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವಿ ಅಳಿಯನ ಅತ್ತೆ ಪರಾರಿ ಪ್ರಕರಣ, ಎಲ್ಲವೂ ಸರಿ ಇದ್ದಿದ್ರೆ ಇಂದು ಶಿವಾನಿ ಮದುವೆ ನಡೀತಿತ್ತು

ಭಾವಿ ಅಳಿಯನ ಜತೆ ಅತ್ತೆ ಓಡಿ ಹೋದ ಪ್ರಕರಣ ಇನ್ನೂ ಯಾರ ತಲೆಯಿಂದಲೂ ಮಾಸುತ್ತಿಲ್ಲ. ಇಂದು ಶಿವಾನಿ ಹಾಗೂ ರಾಹುಲ್ ಮದುವೆಯಾಗಬೇಕಿತ್ತು. ಮದುವೆ 9 ದಿನಗಳು ಬಾಕಿ ಇರುವಾಗಲೇ ಆತ ಅತ್ತೆ ಜತೆ ಓಡಿ ಹೋಗಿದ್ದ. ಈ ಘಟನೆ ಅಲಿಗಢದಲ್ಲಿ ನಡೆದಿತ್ತು, ಈ ಸಂದರ್ಭದಲ್ಲಿ ಮನೆಯಲ್ಲಿರುವ ಆಭರಣಗಳನ್ನೆತ್ತಿಕೊಂಡು ಅತ್ತೆ ಪರಾರಿಯಾಗಿದ್ದಳು.ಅವರಿಬ್ಬರೂ ಓಡಿಹೋಗಿ 10 ದಿನಗಳು ಕಳೆದಿವೆ, ಆದರೆ ಪೊಲೀಸರಿಗೆ ಇನ್ನೂ ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ. ನನ್ನ ಪಾಲಿಗೆ ಅವಳು ಸತ್ತಿದ್ದಾಳೆ ಎಂದು ಜಿತೇಂದ್ರ ಹೇಳಿದ್ದಾರೆ

ಭಾವಿ ಅಳಿಯನ ಅತ್ತೆ ಪರಾರಿ ಪ್ರಕರಣ, ಎಲ್ಲವೂ ಸರಿ ಇದ್ದಿದ್ರೆ ಇಂದು ಶಿವಾನಿ ಮದುವೆ ನಡೀತಿತ್ತು
ರಾಹುಲ್ ಗಾಂಧಿ
Follow us
ನಯನಾ ರಾಜೀವ್
|

Updated on:Apr 16, 2025 | 3:13 PM

ಅಲಿಗಢ, ಏಪ್ರಿಲ್ 16: ಎಲ್ಲವೂ ಸರಿ ಇದ್ದಿದ್ರೆ ಇಂದು ಶಿವಾನಿ ಹಾಗೂ ರಾಹುಲ್ ಮದುವೆ(Marriage) ನಡೆಯುತ್ತಿತ್ತು ಎಂದು ವಧುವಿನ ತಂದೆ ಕಣ್ಣೀರು ಹಾಕಿದ್ದಾರೆ. ಮದುವೆ 9 ದಿನಗಳು ಬಾಕಿ ಇರುವಾಗಲೇ ಭಾವಿ ಅಳಿಯ ತನ್ನ ಅತ್ತೆಯ ಜತೆ ಪರಾರಿಯಾಗಿದ್ದನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆ ಅಲಿಗಢದಲ್ಲಿ ನಡೆದಿತ್ತು, ಈ ಸಂದರ್ಭದಲ್ಲಿ ಮನೆಯಲ್ಲಿರುವ ಆಭರಣಗಳನ್ನೆತ್ತಿಕೊಂಡು ಅತ್ತೆ ಪರಾರಿಯಾಗಿದ್ದಳು.

ಅವರಿಬ್ಬರೂ ಓಡಿಹೋಗಿ 10 ದಿನಗಳು ಕಳೆದಿವೆ, ಆದರೆ ಪೊಲೀಸರಿಗೆ ಇನ್ನೂ ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ. ನನ್ನ ಪಾಲಿಗೆ ಅವಳು ಸತ್ತಿದ್ದಾಳೆ ಎಂದು ಜಿತೇಂದ್ರ ಹೇಳಿದ್ದಾರೆ. ಏತನ್ಮಧ್ಯೆ, ಮದ್ರಾಕ್ ಪೊಲೀಸ್ ಠಾಣೆ ಪ್ರದೇಶದ ಮನೋಹರ್‌ಪುರ್ ಗ್ರಾಮದಲ್ಲಿರುವ ಜಿತೇಂದ್ರ ಕುಮಾರ್ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ.

ಇಂದು ಈ ಮನೆಯಲ್ಲಿ ಶೆಹನಾಯಿ ನುಡಿಸಬೇಕಿತ್ತು. ಆದರೆ ಅದಕ್ಕೂ ಮುನ್ನ ವಧುವಿನ ತಾಯಿ ತನ್ನ ಭಾವಿ ಅಳಿಯನೊಂದಿಗೆ ಓಡಿಹೋಗಿದ್ದಳು. ಅತ್ತೆ ಮತ್ತು ಅಳಿಯನ ಬಗ್ಗೆ ಹಳ್ಳಿಯ ಜನರಲ್ಲಿ ತುಂಬಾ ಕೋಪವಿದೆ. ತನ್ನ ಅಳಿಯನೊಂದಿಗೆ ಓಡಿಹೋದ ಮಹಿಳೆಯ ಹೆಸರು ಅಪ್ನಾ ದೇವಿ.

ಇದನ್ನೂ ಓದಿ
Image
ಎರಡೇ ವಾರಕ್ಕೆ ಮುರಿದು ಬಿತ್ತು ಹಿಂದೂ ಯುವಕ, ಮುಸ್ಲಿಂ ಯುವತಿ ಪ್ರೇಮ ವಿವಾಹ!
Image
ವರ್ಷದ ಈ ತಿಂಗಳಿನಲ್ಲಿ ಮದುವೆ ಮಾಡಿಕೊಳ್ಳಲ್ಲ… ಏಕೆ ಗೊತ್ತಾ?
Image
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
Image
ಅನ್ಯಕೋಮಿನವನೊಂದಿಗೆ ಹಿಂದೂ ಯುವತಿ ಮದುವೆ: ವಿವಾಹ ಮಾಡಿಸಿದ್ದವನಿಗೆ ಬೆದರಿಕೆ

ಮತ್ತಷ್ಟು ಓದಿ: ಮಗಳ ಮದುವೆಗೂ ಮುನ್ನ ಭಾವಿ ಅಳಿಯನ ಜತೆ ಪರಾರಿಯಾದ ಅತ್ತೆ

ಇಂದು ನನ್ನ ಮಗಳು ಶಿವಾನಿ ರಾಹುಲ್ ಜೊತೆ ಮದುವೆಯಾಗಬೇಕಿತ್ತು. ರಾಹುಲ್ ಮದುವೆ ಮೆರವಣಿಗೆ ನಮ್ಮ ಮನೆಗೆ ಬರಬೇಕಿತ್ತು. ಮಗಳು ದಡ ಸೇರಿ ಜೀವನ ಕಟ್ಟಿಕೊಳ್ಳುವ ಮೊದಲೇ ತಾಯಿಯೇ ಅಂತ್ಯಗೊಳಿಸಿದ್ದಾಳೆ ಎಂದು ಹೇಳಿದ್ದಾರೆ. ರಾಹುಲ್ ಒಳ್ಳೆಯ ಹುಡುಗ ಏನೋ ಮಾಟ ಮಂತ್ರ ಮಾಡಿ ತಲೆ ಕೆಡಿಸಿರಬೇಕು ಎಂದು ಆತನ ಗ್ರಾಮಸ್ಥರು ಹೇಳುತ್ತಿದ್ದಾರೆ. ಹೋಳಿ ಹಬ್ಬದ ದಿನದಂದು ಅವಳ ಅತ್ತೆ ಅವಳಿಗೆ ಎರಡು ತಾಯಿತಗಳನ್ನು ಕಟ್ಟಿದ್ದರು ಎಂದು ಹೇಳಲಾಗಿದೆ.

ಆ ಮಹಿಳೆಯೇ ಮಗಳಿಗೆ ಆತನೊಂದಿಗೆ ನಿಶ್ಚಿತಾರ್ಥ ನೆರವೇರಿಸಿದ್ದಳು, ಹುಡುಗನನ್ನು ಆಕೆಯೇ ಹುಡುಕಿದ್ದಳು. ಮದುವೆಯ ಸಿದ್ಧತೆಗಳ ನೆಪದಲ್ಲಿ ವರನು ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದ. ಕುಟುಂಬಕ್ಕೆ ತಿಳಿಯದಂತೆ, ಅಳಿಯ ಮತ್ತು ಅತ್ತೆಯ ನಡುವೆ ಸಂಬಂಧ ಬೆಳೆಯುತ್ತಿತ್ತು. ವರನು ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದ, ಅದನ್ನುಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಏಪ್ರಿಲ್ 16 ರಂದು ಮದುವೆ ನಿಗದಿಯಾಗಿತ್ತು, ಮತ್ತು ಆಮಂತ್ರಣ ಪತ್ರಿಕೆಗಳನ್ನು ವಿತರಿಸಲಾಗಿತ್ತು. ಆದರೆ, ವರ ಮತ್ತು ಅತ್ತೆ ಶಾಪಿಂಗ್ ನೆಪದಲ್ಲಿ ಒಟ್ಟಿಗೆ ಮನೆಯಿಂದ ಹೊರಟುಹೋದವರು ಹಿಂದಿರುಗಿ ಬರಲಿಲ್ಲ. ಎಲ್ಲಿದ್ದಾರೆ ಎಂಬುದೂ ಯಾರಿಗೂ ತಿಳಿದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Wed, 16 April 25

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ