Marriage Advice: ಯುವ ಜನರೇ… ಮದುವೆ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ಕೇಳಿ
ಈಗಿನ ಕಾಲದಲ್ಲಿ ಮದುವೆಯ ವಿಷಯಕ್ಕೆ ಬಂದಾಗ, ಸಂಗಾತಿಯನ್ನು ಆಯ್ಕೆ ಮಾಡುವ ವಿಷಯಕ್ಕೆ ಬಂದಾಗ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳನೇ ಮುಖ್ಯವಾಗಿರುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್, ವಿವಾಹೇತರ ಸಂಬಂಧಗಳ ಪ್ರಕರಣಗಳು ತೀರಾ ಹೆಚ್ಚಿವೆ. ಹೀಗಿರುವಾಗ ಮದುವೆ ವಿಷಯದಲ್ಲಿ, ಎಂತಹ ಸಂಗಾತಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಅಮ್ಮನ ಹಾಗೂ ಹಿರಿಯರ ಮಾತುಗಳನ್ನು, ಸಲಹೆಗಳನ್ನು ಕೇಳುವುದು ತುಂಬಾನೇ ಮುಖ್ಯ.

ಮದುವೆ (Marriage) ಎಂಬುದು ಜೀವನ ಪರ್ಯಂತ ಸಾಗುವ ಒಂದು ಮಧುರವಾದ ಅನುಬಂಧ. ಅಲ್ಲದೆ ಮದುವೆ ಜೀವನದ (Marriage Life) ಮಹತ್ವವಾದ ತಿರುವು ಕೂಡಾ ಹೌದು. ಈ ಸುಂದರ ಸಂಬಂಧ ಶಾಶ್ವತವಾಗಿ (eternal) ಸುಮಧುರವಾಗಿ ಇರಬೇಕೆಂದರೆ ಒಂದಷ್ಟು ವಿಚಾರಗಳ ಬಗ್ಗೆ ಜಾಗೃತೆ ವಹಿಸುವುದು ಅತ್ಯಗತ್ಯ. ಜಾತಕ ಕೂಡಿಸಿ ಮಾಡಿದ ಮದುವೆಗಳು ಡಿವೋರ್ಸ್‌ನಲ್ಲಿ (divorce) ಅಂತ್ಯವಾದ, ಗಂಡ-ಹೆಂಡತಿ (husband-wife) ಕಲಹ, ಕೌಟುಂಬಿಕ ಕಲಹ, ವಿವಾಹೇತರ ಸಂಬಂಧ ಹೀಗೆ ಸಾಕಷ್ಟು ಪ್ರಕರಣಗಳು ಸಮಾಜದಲ್ಲಿ ನಡೆಯುತ್ತಿವೆ. ಇದೇ ಕಾರಣಕ್ಕೆ ಇತ್ತೀಚಿಗೆ ಬಹಳಷ್ಟು ಮಂದಿ ವಿವಾಹವಾಗಲು ಹಿಂಜರಿಯುತ್ತಾರೆ. ಇನ್ನೂ ಕೆಲವರು ಸಂಗಾತಿಯನ್ನು (life Partner) ಆಯ್ಕೆ ಮಾಡುವ ವಿಚಾರದಲ್ಲಿ ದುಡುಕು ನಿರ್ಧಾರಗಳನ್ನು ತೆಗೆದುಕೊಂಡು ನೋವು ಅನುಭವಿಸುತ್ತಾರೆ. ಹೀಗಿರುವಾಗ ಮದುವೆ ವಿಷಯದಲ್ಲಿ, ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಅಮ್ಮನ (Mother) ಮಾತುಗಳನ್ನು ಕೇಳುವುದು ತುಂಬಾನೇ ಮುಖ್ಯ.
ಮದುವೆಯ ವಿಷಯದಲ್ಲಿ ಅಮ್ಮನ ಮಾತನ್ನು ಕೇಳುವುದು ಮುಖ್ಯ ಯಾಕೆ ಗೊತ್ತಾ?
ಏಕೆಂದರೆ ಎಂತಹದ್ದೇ ಕಷ್ಟ ಸಮಯದಲ್ಲೂ ಸಂಬಂಧ ನಿಭಾಯಿಸುವ, ಸಾಂಸಾರಿಕ ಜೀವನವನ್ನು ಸರಿದೂಗಿಸಿಕೊಂಡು ನಡೆಸುವ, ಜವಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಹೋಗುವ ವಿಷಯದಲ್ಲಿ ಅಮ್ಮನಿಗೆ ಅಥವಾ ಹಿರಿಯರಿಗೆ ಸಾಕಷ್ಟು ಅನುಭವವಿರುತ್ತದೆ. ಹಾಗಾಗಿ ಮದುವೆಯ ವಿಷಯದಲ್ಲಿ, ಎಂತಹ ಸಂಗಾತಿಯನ್ನು ಆಯ್ಕೆ ಮಾಡಿದರೆ ಸೂಕ್ತ ಎಂಬ ವಿಚಾರದಲ್ಲಿ ಅಮ್ಮನ ಮಾತನ್ನು ಕೇಳುವುದು ಸೂಕ್ತ.
ಮದುವೆ ವಿಷಯದಲ್ಲಿ ಅಮ್ಮನ ಸಲಹೆ:
ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು:
ಮದುವೆಯ ವಿಚಾರಕ್ಕೆ ಬಂದಾಗ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ಮೊದಲ ಹಂತದಲ್ಲಿಯೇ ದುಡುಕಿದರೆ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆ-ಮನಕ್ಕೆ ಸೂಕ್ತವಾಗುವ, ಸಂಸ್ಕಾರಯುತ, ಒಳ್ಳೆಯ ಗುಣವಿರುವ ಸಂಗಾತಿಯನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ.
ಮೊಬೈಲ್, ಇತ್ಯಾದಿ ಸಾಧನಗಳಿಂದ ದೂರವಿರಿ:
ಈಗ ನೀವು 24 ಗಂಟೆಯೂ ಮೊಬೈಲ್‌ನಲ್ಲಿಯೇ ಸಮಯವನ್ನು ಕಳೆಯುತ್ತಿರಬಹುದು. ಆದರೆ ಮದುವೆಯಾದ ಬಳಿಕ ಈ ಅಭ್ಯಾಸವನ್ನು ಬಿಟ್ಟುಬಿಡಿ. ಹೀಗೆ ಯಾವಾಗಲೂ ಮೊಬೈಲ್‌ನಲ್ಲಿಯೇ ಗಮನ ಇದ್ರೆ, ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಿಲ್ಲ. ಹೀಗೆ ಕೆಲಸ ಮುಗಿದ ಬಳಿಕವೂ ಮೊಬೈಲ್ ನೋಡುತ್ತಾ ಸಮಯ ಕಳೆದರೆ ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಮನಸ್ತಾಪಗಳು ತಲೆದೂರುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆ ನಂತರದಲ್ಲಿ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಆದ್ದರಿಂದ ಮದುವೆಯ ಬಳಿಕ ಮೊಬೈಲ್‌ನಲ್ಲಿ ಸಮಯ ಕಳೆಯುವ ಬದಲು ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.
ರಾಜಿ ಸಂಧಾನ:
ಸಂಬಂಧದಲ್ಲಿ ಒಂದಷ್ಟು ಜಗಳ, ಹುಸಿ ಮುನಿಸುಗಳು ಸಾಮಾನ್ಯ. ಈ ಸಣ್ಣ ಮನಸ್ತಾಪಗಳನ್ನೇ ದೊಡ್ಡದು ಮಾಡಿಕೊಂಡು ಮಾತು ಬಿಟ್ಟರೆ ಮುಂದಿನ ದಿನಗಳಲ್ಲಿ ಇದುವೇ ಸಂಬಂಧದಲ್ಲಿ ಬಿರುಕು ಮೂಡುವುದಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಒಬ್ಬರಿಗೊಬ್ಬರು ಮಾತನಾಡಿಕೊಂಡು, ತಪ್ಪನ್ನು ತಿದ್ದಿಕೊಂಡು ನಡೆಯುವ ಗುಣವನ್ನು ಇಂದೇ ರೂಢಿಸಿಕೊಳ್ಳಿ.
ಇದನ್ನೂ ಓದಿ: ನಿಮಗೆ ಶಿವನ ಯಾವ ರೂಪ ಇಷ್ಟ ಅನ್ನೋದ್ರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ
ದಯೆಯಿಂದಿರಿ:
ಸಂಗಾತಿಯೊಂದಿಗೆ ಯಾವಾಗಲೂ ಕೋಪ ಮಾಡಿಕೊಳ್ಳುದಲ್ಲ. ಅವರನ್ನು ಸಂತೋಷವಾಗಿರುವಂತೆ ನೋಡಿಕೊಳ್ಳಿ. ಹುಷಾರಿಲ್ಲದ ಸಂದರ್ಭದಲ್ಲಿ ಮಗುವಿನಂತೆ ಅವರನ್ನು ಆರೈಕೆ ಮಾಡಿ, ಸಂಗಾತಿ ಟೆನ್ಷನ್ ಅಥವಾ ಬೇಜಾರಿನಲ್ಲಿದ್ದರೆ ಅವರನ್ನು ಹುರಿದುಂಬಿಸಿ. ಈ ಎಲ್ಲಾ ಸಣ್ಣ ಸಣ್ಣ ವಿಷಯಗಳು ಸಂಬಂಧವನ್ನು ಬಲಗೊಳಿಸುತ್ತದೆ.
ತಪ್ಪುಗಳನ್ನು ಕ್ಷಮಿಸಿ:
ಕೆಲವರು ಸಂಗಾತಿಗಳ ತಪ್ಪನ್ನು ಕ್ಷಮಿಸದೆ ಅದೇ ವಿಷಯವನ್ನು ಇಟ್ಟುಕೊಂಡು ಪದೇ ಪದೇ ಜಗಳವಾಡುತ್ತಾರೆ. ಈ ಜಗಳಗಳು, ಮನಸ್ತಾಪಗಳು ಅತಿರೇಕಕ್ಕೆ ತಿರುಗಿದರೆ ಇದು ನಿಮ್ಮ ಸುಂದರ ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ. ಈ ವಿಷಯವಾಗಿ ಡಿವೋರ್ಸ್ ಹಂತಕ್ಕೆ ಹೋದವರು ಇದ್ದಾರೆ. ಹೀಗಿರುವಾಗ ನೀವು ಮದುವೆಯಾದ ಬಳಿಕ ನಿಮ್ಮ ಸಂಬಂಧ ಶಾಶ್ವತವಾಗಿರಬೇಕೆಂದರೆ ತಪ್ಪನ್ನು ಕ್ಷಮಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ನಿಷ್ಠೆಯಿಂದ ಇರಿ:
ಮದುವೆಯಾದ ಬಳಿಕ ನೀವು ಯಾರಿಗಾಗಿಯೋ ನಿಮ್ಮ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ಎಂತಹದ್ದೇ ಸಂದರ್ಭ ಬಂದರೂ ಸಂಬಂಧದ ವಿಷಯದಲ್ಲಿ ನಿಷ್ಠಾವಂತರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ನಿಷ್ಠೆ ಪ್ರೀತಿ, ಪರಸ್ಪರ ಗೌರವ, ಅರ್ಥ ಮಾಡಿಕೊಳ್ಳುವ ಗುಣ ಈ ಎಲ್ಲಾ ಅಂಶಗಳು ಸಂಬಂಧಗಳನ್ನು ಬಲ ಪಡಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ