AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ನಿಮ್ಮ ವೈವಾಹಿಕ ಜೀವನವನ್ನು ಸರ್ವನಾಶ ಮಾಡುತ್ತದೆ: ಅಧ್ಯಯನ ಬಿಚ್ಚಿಟ್ಟ ಸತ್ಯ

ಹಣ ಎನ್ನುವುದು ಒಬ್ಬ ವ್ಯಕ್ತಿಯನ್ನು ಮೂರ್ಖನಾಗಿ ಮಾಡುತ್ತದೆ, ಅದರಲ್ಲೂ ದಂಪತಿಗಳು ಹಣ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಹಣ ಎನ್ನುವುದು ಯಾರನ್ನೂ ಬೇಕಾದರೂ ದೂರ ಮಾಡಬಹುದು. ಹಣ ಇಲ್ಲದೇ ಯಾವುದು ನಡೆಯುವುದಿಲ್ಲ. ಆದರೆ ಹಣ ಎಷ್ಟು ಮುಖ್ಯವೋ ಅಷ್ಟೇ ಉಪಯೋಗಿಸಬೇಕು ಹಾಗೂ ಸಂಪಾದಿಸಬೇಕು. ಈ ಬಗ್ಗೆ ಜರ್ನಲ್ ಆಫ್ ಸೋಶಿಯಲ್ ಅಂಡ್ ಪರ್ಸನಲ್ ರಿಲೇಶನ್‌ಶಿಪ್ಸ್‌ ಎಂಬ ಅಧ್ಯಯನ ಸಂಸ್ಥೆ ಒಂದು ಮಹತ್ವದ ವಿಚಾರವನ್ನು ತಿಳಿಸಿದೆ. ಈ ಬಗ್ಗೆ ಇಲ್ಲಿದೆ ನೋಡಿ.

ಹಣ ನಿಮ್ಮ ವೈವಾಹಿಕ ಜೀವನವನ್ನು ಸರ್ವನಾಶ ಮಾಡುತ್ತದೆ: ಅಧ್ಯಯನ ಬಿಚ್ಚಿಟ್ಟ ಸತ್ಯ
ಸಾಂದರ್ಭಿಕ ಚಿತ್ರ Image Credit source: Getty Images
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 16, 2025 | 3:30 PM

ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಹಣ ಎಷ್ಟು ಮುಖ್ಯ ಎಂಬುದು ಹಣ (Money )ಇಲ್ಲದವನಿಗೆ ಅಲ್ಲ. ಹಣ ಇದ್ದವನಿಗೆ ಗೊತ್ತು, ಯಾಕೆಂದರೆ ಹಣದ ಹಿಂದೆ ಓಡುವ ವ್ಯಕ್ತಿಗೆ ಎಂದಿಗೂ ತೃಪ್ತಿ ಆಗುವುದಿಲ್ಲ. ಅವನು ಹಣಕ್ಕೆ ಮಾತ್ರ ಬೆಲೆ ನೀಡುತ್ತಾನೆ. ಹಣ ಇದ್ದವನೇ ಕಿಂಗ್ ಎಂಬ ಭಾವನೆ ಬಂದಿರುತ್ತದೆ. ಹೀಗಿನ ಕಾಲದಲ್ಲಿ ಮದುವೆ ಎನ್ನುವುದು ಕೂಡ ವ್ಯಾಪರವಾಗಿದೆ. ಹಣ ಇರುವ ಹುಡುಗನೇ ಈ ಹುಡುಗಿಯರಿಗೆ ಬೇಕು. ಹುಡುಗರಿಗೂ ಅಷ್ಟೇ ಸಂಪಾದಿಸುವ ಹುಡುಗಿಯೇ ಬೇಕು. ಶ್ರೀಮಂತ ಹುಡುಗ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಭ್ರಮೆ ಈ ಹುಡುಗಿಯರದ್ದು, ಸಂಪಾದಿಸುವ ಹುಡುಗಿ ಬಂದರೆ ಹೆಚ್ಚು ಹಣ ಮಾಡಬಹುದು ಎಂಬುದು ಹುಡುಗರ ಮನಸ್ಥಿತಿ. ಆದರೆ ಇದು ತಪ್ಪು ಎನ್ನುವುದನ್ನು ಅಧ್ಯಯನ ಒಂದು ಹೇಳಿದೆ. ಹಣದಿಂದ ಒಂದು ಒಳ್ಳೆಯ ಸಂಬಂಧ ದೂರು ಆಗುತ್ತದೆ. ಹಣಕ್ಕೆ ಎಲ್ಲಿ ಪ್ರಾಮುಖ್ಯತೆ ನೀಡಬೇಕು ಅಲ್ಲಿ ನೀಡುವುದು ಒಳ್ಳೆಯದು. ಈ ಹಣ ಸಂಪಾದಿಸುವ ಭರದಲ್ಲಿ ನಮ್ಮ ನಡುವಿನ ಸಂಬಂಧಗಳನ್ನೇ ನಾವು ದೂರ ಮಾಡಿಕೊಳ್ಳುತ್ತಿದ್ದೇವೆ. ಜರ್ನಲ್ ಆಫ್ ಸೋಶಿಯಲ್ ಅಂಡ್ ಪರ್ಸನಲ್ ರಿಲೇಶನ್‌ಶಿಪ್ಸ್‌ (Journal of Social and Personal Relationships) ಎಂಬ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ವರದಿ ಪ್ರಕಾರ, ಹಣದ ಬಗ್ಗೆ ಹೆಚ್ಚು ಯೋಚಿಸುವ ದಂಪತಿಗಳು ತಮ್ಮ ನಡುವಿನ ಸಂಬಂಧದ ಸಂವಹನದಲ್ಲಿ ಕಳಪೆಯಾಗಿರುತ್ತಾರೆ ಎಂದು ಈ ವರದಿ ಹೇಳುತ್ತಾದೆ.

ಹಣದ ಎಂಬ ಅಮಲಿನಲ್ಲಿರುವ ದಂಪತಿಗಳು ತಮ್ಮ ವೈವಾಹಿಕ ಜೀವನದ ತೃಪ್ತಿಯನ್ನು ಪಡೆಯುವುದಿಲ್ಲ. ಆದರೆ ಇದಕ್ಕೊಂದು ಮಾರ್ಗವಿದೆ ಎಂಬುದನ್ನು ಈ ಅಧ್ಯಯನ ಹೇಳುತ್ತದೆ. ಯಾವ ದಂಪತಿಗಳು ಹಣ ಸಂಪಾದಿಸುವುದರ ಜತೆಗೆ ತಮ್ಮ ಸಂಬಂಧಕ್ಕೆ ಪ್ರಾಮುಖ್ಯತೆ ನೀಡುವುದು ಹಾಗೂ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಸಂಬಂಧ ಹಾಗೂ ಹಣ ಎರಡನ್ನೂ ನಿಭಾಯಿಸುವ ಬಗ್ಗೆ ಕಾಳಜಿಯನ್ನು ವಹಿಸಬೇಕು. ಹೀಗೆ ಮಾಡಿದ್ರೆ ಹಣವನ್ನು ಸಂಪಾದನೆ ಮಾಡಬಹುದು ಜತೆಗೆ ತಮ್ಮ ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳಬಹುದು.

ಈ ಹಣ ಎನ್ನುವುದು ಒಂದು ಸಂಬಂಧವನ್ನು ಉಳಿಸಬಹುದು ಅಥವಾ ಮುರಿದು ಹಾಕಬಹುದು. ಈ ಎರಡು ಶಕ್ತಿ ಇದೆ. ಹಣ ಸಂತೋಷವನ್ನು ನೀಡುತ್ತದೆ. ಆದರೆ ಅದು ಕ್ಷಣಿಕ, ದಂಪತಿಗಳು ಒಂದು ವೇಳೆ ಹಣಕ್ಕೆ ಗಮನ ನೀಡಿದ್ರೆ ಅವರ ಮನಸ್ಥಿತಿ ಹೇಗೆ ಎಂಬ ಬಗ್ಗೆ ಹೇಳುತ್ತದೆ. ಹೀಗೆ ಮಾಡಿದ್ರೆ ತೊಂದರೆಗಳೇ ಹೆಚ್ಚು. ಅನೇಕರಿಗೆ ಹಣ ಒಂದು ಇದ್ರೆ ಎಲ್ಲವನ್ನು ಮಾಡಬಹುದು, ಎಲ್ಲವನ್ನು ಗಳಿಸಬಹುದು ಎಂಬ ನಂಬಿಕೆ. ಆದರೆ ಹಣ ಹಿಂದೆ ಓಡುವ ಇಂತಹ ವ್ಯಕ್ತಿಗಳಿಗೆ ಸಮಸ್ಯೆಗಳೇ ಹೆಚ್ಚು. ಇದು ದಂಪತಿಗಳ ನಡುವೆ ಜಗಳಕ್ಕೂ ಕಾರಣವಾಗಬಹುದು. ದಂಪತಿಗಳಿಬ್ಬರ ಈ ಯೋಚನೆಗಳು ಅವರ ನಡುವೆ ಒತ್ತಡವನ್ನು ನಿರ್ಮಾಣ ಮಾಡುತ್ತದೆ ಹಾಗೂ ಕಳಪೆ ಸಂವಹನವನ್ನು ಉಂಟು ಮಾಡುತ್ತದೆ. ಅದಕ್ಕಾಗಿ ತಜ್ಞರು ನೀಡುವ ಸಲಹೆ, ನೀವು ಹಣದ ವ್ಯವಹಾರಗಳನ್ನು ಆರೋಗ್ಯಕರವಾಗಿ ನಿಭಾಯಿಸಿ.

ಇದನ್ನೂ ಓದಿ
Image
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
Image
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
Image
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
Image
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

ಇದನ್ನೂ ಓದಿ: ಯುವ ಜನರೇ… ಮದುವೆ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ಕೇಳಿ

ಹಣದ ಬಗ್ಗೆ ಗಮನ ನೀಡಿದಾಗ ನಿಮ್ಮ ದಾಂಪತ್ಯದಲ್ಲಿ ಕಂದಕ ಬರುವುದು ಖಂಡಿತ, ಅದನ್ನು ನಿಭಾಯಿಸುವಲ್ಲಿ ವಿಫಲತೆ ಕಂಡರೆ, ಅದು ನಿಮ್ಮ ದಾಂಪತ್ಯದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಹಣದ ಹಿಂದೆ ಹೋಗಬೇಡಿ ಎನ್ನುವುದು ಸಂಶೋಧಕರು ಸಲಹೆ. ಇಬ್ಬರು ಅರ್ಥಮಾಡಿಕೊಂಡು ಸಂಪಾದಿಸಿ. ಹಣ ಬಂದರು, ಬರದಿದ್ದರು, ನಿಮ್ಮ ವರ್ತನೆ ಗೌರವಯುತವಾಗಿರಲಿ, ನಿಮ್ಮ ಭಾವನೆಗಳಿಗೆ ಮೊದಲು ಮೌಲ್ಯ ನೀಡಿ. ಜತೆಗೆ ನಿಮಗೆ ಎಷ್ಟು ಬೇಕು ಅಥವಾ ಭವಿಷ್ಯಕ್ಕೆ ಎಷ್ಟು ಬೇಕು ಅಷ್ಟರಲ್ಲಿಯೇ ತೃಪ್ತಿ ಪಡೆಯಲು ನೋಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..