AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುವ ತಪ್ಪು ಮಾಡಬೇಡಿ

ಹಣ್ಣುಗಳು ವಾರಗಟ್ಟಲೆ ತಾಜಾವಾಗಿರಬೇಕೆಂದು ಹಲವರು ಹಣ್ಣುಗಳನ್ನು ಮಾರುಕಟ್ಟೆಯಿಂದ ತಂದ ತಕ್ಷಣವೇ ಫ್ರಿಡ್ಜ್‌ನಲ್ಲಿ ಇಡುತ್ತಾರೆ. ತಜ್ಞರ ಪ್ರಕಾರ, ಕೆಲವೊಂದಷ್ಟು ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರಂತೆ. ಹೀಗೆ ಮಾಡುವುದರಿಂದ ಅವುಗಳ ರುಚಿ ಕಡಿಮೆಯಾಗುವುದರ ಜೊತೆಗೆ ಅವುಗಳ ಪೋಷಕಾಂಶಗಳು ಸಹ ಕಡಿಮೆಯಾಗಬಹುದು. ಹಾಗಾಗಿ ಈ ಕೆಲವು ಹಣ್ಣುಗಳನ್ನು ತಪ್ಪಿಯೂ ಫ್ರಿಡ್ಜ್‌ನಲ್ಲಿ ಇಡಲು ಹೋಗಬೇಡಿ.

ಮಾಲಾಶ್ರೀ ಅಂಚನ್​
| Edited By: |

Updated on: Apr 15, 2025 | 3:54 PM

Share
ಬಾಳೆಹಣ್ಣುಗಳನ್ನು ಎಂದಿಗೂ ಫ್ರಿಡ್ಜ್‌ನಲ್ಲಿ ಇಡಬಾರದು. ರೆಫ್ರಿಜರೇಟರ್‌ನಲ್ಲಿ ಇಟ್ಟಾಗ, ಬಾಳೆಹಣ್ಣಿನ ಸಿಪ್ಪೆ ಶೀಘ್ರವೇ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ ಮತ್ತು ಅವುಗಳ ರುಚಿ ಕೂಡಾ ಬದಲಾಗಲು ಪ್ರಾರಂಭಿಸುತ್ತದೆ. ಬಾಳೆಹಣ್ಣನ್ನು ಶೀತ ಪರಿಸರದಲ್ಲಿ ಇಟ್ಟರೆ, ಅವುಗಳು ಬೇಗನೆ ಕೆಡಲು ಪ್ರಾರಂಭಿಸುತ್ತವೆ.

1 / 5
ಕಲ್ಲಂಗಡಿಯಲ್ಲಿ ನೀರಿನ ಅಂಶ ಹೇರಳವಾಗಿರುವುದರಿಂದ, ಜನ ಬೇಸಿಗೆಯಲ್ಲಿ ಹೆಚ್ಚಾಗಿ ಈ ಹಣ್ಣನ್ನೇ ತಿನ್ನಲು ಇಷ್ಟಪಡುತ್ತಾರೆ. ಮತ್ತು ಮಾರುಕಟ್ಟೆಯಿಂದ ಖರೀದಿಸಿದ ಈ ಹಣ್ಣನ್ನು ಹೆಚ್ಚಿನವರು  ತಂಪಾಗಿಸಲು ಫ್ರಿಜ್‌ನಲ್ಲಿ ಇಡುತ್ತಾರೆ. ಹೀಗೆ ಈ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಕಲ್ಲಂಗಡಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕಡಿಮೆಯಾಗುತ್ತವೆ ಮತ್ತು ಅದರ ಪೌಷ್ಟಿಕಾಂಶದ ಮೌಲ್ಯವೂ ಕಡಿಮೆಯಾಗುತ್ತದೆ. ಇದಕ್ಕಾಗಿಯೇ ತಜ್ಞರು ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಇಡದಂತೆ ಸಲಹೆ ನೀಡುತ್ತಾರೆ.

2 / 5
ಹಣ್ಣುಗಳ ರಾಜ ಮಾವನ್ನು ರೆಫ್ರಿಜರೇಟರ್‌ನಲ್ಲಿ ಇಡುವ ತಪ್ಪು ಮಾಡಬೇಡಿ, ಏಕೆಂದರೆ ಶೀತ ತಾಪಮಾನವು ಮಾವಿನ ಹಣ್ಣಿನ ರುಚಿ ಮತ್ತು ವಿನ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಮಾವಿನ ಹಣ್ಣಿನ ಮೇಲೆ ಕಪ್ಪು ಕಲೆಗಳು ಮೂಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ.

3 / 5
ಅನಾನಸ್‌ ಹಣ್ಣನ್ನು ಕೂಡಾ ರೆಫ್ರಿಜರೇಟರ್‌ನಲ್ಲಿ ಇಡಬಾರದು. ಫ್ರಿಡ್ಜ್‌ನಲ್ಲಿ ಇಡುವುದರಿಂದ ಈ ಹಣ್ಣಿನ ರುಚಿ ಕೆಡುತ್ತದೆ ಮತ್ತು ಶೀಘ್ರವೇ ಹಣ್ಣು ಮೃದುವಾಗುತ್ತದೆ.  ಜೊತೆಗೆ ಅದರ ನೈಸರ್ಗಿಕ ಪರಿಮಳ ಸಹ ಹೋಗುತ್ತದೆ. ಹಾಗಾಗಿ ಕೋಣೆಯ ಉಷ್ಣಾಂಶದಲ್ಲಿ ಅನಾನಸ್ ಹಣ್ಣನ್ನು ಇಡುವುದರಿಂದ ಅದರ ತಾಜಾತನವನ್ನು ಕಾಪಾಡಿಕೊಳ್ಳಬಹುದು.

4 / 5
ಲಿಚಿ ಬೇಸಿಗೆಯಲ್ಲಿ ಹೇರಳವಾಗಿ ಸಿಗುವುದರಿಂದ ಸಾಕಷ್ಟು ಜನ ಈ ಹಣ್ಣನ್ನು ಖರೀದಿಸುತ್ತಾರೆ. ಇವುಗಳನ್ನು ಖರೀದಿಸಿದ ನಂತರ ಅವುಗಳನ್ನು ವಾರಗಟ್ಟಲೆ ತಾಜಾವಾಗಿರಿಸಲು ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಲಿಚಿ ಹಣ್ಣು ಒಳಗಿನಿಂದ ಹಾಳಗುತ್ತದೆ. ಇದಲ್ಲದೆ ಸೇಬು, ಪಪ್ಪಾಯ, ಅವಕಾಡೊ, ಸಿಟ್ರಿಸ್‌ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು.

5 / 5
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ

ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ

ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್