ದಾವಣಗೆರೆ: ಬರಡು ಭೂಮಿಯಲ್ಲೂ ಸೇಬು ಬೆಳೆದು ಯಶಸ್ವಿಯಾದ ರೈತ
ದಾವಣಗೆರೆ ಜಿಲ್ಲೆಯ ಜಗಳೂರಿನ ಬರಡು ಭೂಮಿಯಲ್ಲಿ ಚಿತ್ರದುರ್ಗದ ರೈತ ರುದ್ರಮುನಿ ಕಾಶ್ಮೀರಿ ಸೇಬುಗಳನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ಈ ಸೇಬುಗಳು ಬಯಲು ಸೀಮೆಯಲ್ಲಿ ಬೆಳೆದಿರುವುದು ಅಚ್ಚರಿಯ ಸಂಗತಿ. ಇವರ ಈ ಯಶಸ್ಸು ಇತರ ರೈತರಿಗೆ ಸ್ಫೂರ್ತಿಯಾಗಿದೆ. ಕಡಿಮೆ ನೀರಿನ ಅವಶ್ಯಕತೆ ಹೊಂದಿರುವ ಇಸ್ರೇಲ್ ತಳಿಯ ಸೇಬುಗಳನ್ನು ಬೆಳೆದಿರುವುದು ಇಲ್ಲಿ ಗಮನಾರ್ಹ.
Updated on:Apr 15, 2025 | 9:51 PM

ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಕುಡಿಯುವ ನೀರು ಸಿಗುವುದು ಕಷ್ಟ. ಇಂತಹ ಪ್ರದೇಶದಲ್ಲಿ ಓರ್ವ ರೈತ ಕಾಶ್ಮೀರಿ ಸೇಬು ಬೆಳೆದಿದ್ದಾರೆ. ಸಾಮಾನ್ಯವಾಗಿ ಈ ಸೇಬುವನ್ನು ಕಾಶ್ಮೀರದಲ್ಲಿ ಮಾತ್ರ ಬೆಳೆಯುತ್ತಾರೆ. ಆದರೆ, ಜಗಳೂರಿನಂತಹ ಬಯಲು ಸೀಮೆಯ ಮಣ್ಣಿನಲ್ಲೂ ಸೇಬು ಬೆಳೆಯುವ ಮೂಲಕ ರೈತ ಅಚ್ಚರಿ ಮೂಡಿಸಿದ್ದಾರೆ.

ಸೇಬು ಹಣ್ಣನ್ನು ಸಾಮಾನ್ಯವಾಗಿ ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಬೆಳೆಯಬಹುದು. ಹೀಗಾಗಿ, ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದ್ದಂತೆ ಈಶಾನ್ಯ ಪ್ರದೇಶಗಳಲ್ಲಿ ಸೇಬು ಹೆಚ್ಚು ಬೆಳೆಯುತ್ತಾರೆ. ಆದರೆ, ಈ ಸೇಬು ಬಯಲು ಸೀಮೆಯ ದಾವಣಗೆರೆ ಜಿಲ್ಲೆಯ ಜಗಳೂರು ಮಣ್ಣಿನಲ್ಲಿ ಬೆಳೆಯಬಹು ಎಂದು ರೈತ ರುದ್ರಮುನಿ ತೋರಿಸಿಕೊಟ್ಟಿದ್ದಾರೆ.

ಜಗಳೂರಿ ತಾಲೂಕಿನಲ್ಲಿ ಬರಡು ಭೂಮಿಯೇ ಹೆಚ್ಚಿದೆ. ಇಂತಹ ಭೂಮಿಯಲ್ಲಿ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ರೈತ ರುದ್ರಮುನಿ ಸೇಬು ಬೆಳೆದಿದ್ದಾರೆ. ರುದ್ರಮುನಿ ಅವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮೂಡಲಮಾಚಿಕೆರೆ ಗ್ರಾಮದಲ್ಲಿ ಸ್ವಲ್ಪ ಜಮೀನು ಖರೀದಿ ಮಾಡಿದ್ದಾರೆ. ಇದರಲ್ಲಿ ಒಂದು ಕಾಲು ಎಕರೆ ಜಮೀನಿನಲ್ಲಿ ಸೇಬು ಬೆಳೆದಿದ್ದಾರೆ.

ರೈತ ರುದ್ರಮುನಿ ಅವರು ಒಂದು ಕಾಲು ಎಕರೆ ಜಮೀನಿನಲ್ಲಿ ಒಟ್ಟು 550 ಸಸಿಗಳನ್ನು ನಾಟಿ ಮಾಡಿದ್ದಾರೆ. ಸಸಿ ನಾಟಿ ಮಾಡಿ 17 ತಿಂಗಳು ಉರುಳಿದ್ದು, ಈಗಾಗಲೇ ಗೊಂಚಲು ಕಾಯಿ ಬಿಟ್ಟಿದೆ. ಚಿತ್ರದುರ್ಗದ ಗೊಡಬನಾಳ್ ಗ್ರಾಮದ ಜ್ಯೋತಿಪ್ರಕಾಶ್ ಎಂಬುವರ ಬಳಿ ಒಂದು ಕಾಲು ಲಕ್ಷ ರೂ. ಕೊಟ್ಟು ಸಸಿ ತಂದು 24 ಸಾವಿರ ರೂ. ಖರ್ಚು ಮಾಡಿ ಸಸಿ ನಾಟಿ ಮಾಡಿ ಸೇಬು ಬೆಳೆದಿದ್ದಾರೆ. ಸೇಬು ಫಸಲು ಚೆನ್ನಾಗಿ ಬಂದಿದ್ದು, ಮೇ ತಿಂಗಳ ಕೊನೆಯಲ್ಲಿ ಕಟಾವಿಗೆ ಬರಲಿದೆ.

ಒಂದು ಲೆಕ್ಕಾಚಾರದ ಪ್ರಕಾರ ಐದು ನೂರು ಕೆಜಿ ಸೇಬು ಬರುವ ನಿರೀಕ್ಷೆ ಇದೆ. ಒಂದು ಕೆಜಿಗೆ ನೂರು ರೂಪಾಯಿ ಯಂತೆ ಬೆಲೆ ಸಿಗಬಹುದು. 550 ಗಿಡ ಹಾಕಲಾಗಿದೆ. ಸಸಿಗೆ ಒಂದು ಲಕ್ಷ ರೂಪಾಯಿ. ಸಸಿ ಹಾಕಲು 25 ಸಾವಿರ ಖರ್ಚಾಗಿದೆ. ಇದಕ್ಕು ಫಂಗಸ್ ರೋಗ ಬರುತ್ತದೆ, ಗಿಡ ಮೇಲಿಂದ ಒಣಗಿಕೊಂಡು ಬರುವುದೇ ಫಂಗಸ್.

ಡಿಸೆಂಬರ್ ಚಳಿಗಾಲದಲ್ಲಿ ವೇಳೆ ಕಟಿಂಗ್ ಮಾಡುವುದು ಇರುತ್ತದೆ. ಆಗ ಹೂವು ಬಿಡುತ್ತದೆ. ಇಸ್ರೇಲ್ ತಳಿ ಸೇರಿ ಮೂರು ತಳಿಯ ಸೇಬು ಬೆಳೆಯಲಾಗಿದೆ. ಯೂಟ್ಯೂಬ್ ನೋಡಿ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಹೆಚ್ಆರ್ಎಮ್ಎನ್ ತಳಿ, ಡೋರ್ ಸೆಟ್ ಗೋಲ್ಡ್ ತಳಿ ಬೆಳೆಯಲಾಗಿದೆ. ಹೆಚ್ಆರ್ಎಮ್ಎನ್ 99, ಡೋರ್ ಸೆಟ್ ಗೋಲ್ಡ್ ಬೆಳೆಯಲಾಗಿದೆ. ಇನ್ನು ಹೆಚ್ಆರ್ಎಮ್ಎನ್, ಡೋರ್ ಸೆಟ್ ಗೋಲ್ಡ್ ಭಾರತೀಯ ತಳಿಯಾಗಿವೆ.

ಮೇಘಾಲಯ ಕಾಶ್ಮೀದಲ್ಲಿ ಬೆಳೆಯುವ ಸೇಬಿಗೆ ಹೆಚ್ಚಿಕೆ ನೀರು ಬೇಕಾಗುತ್ತದೆ. ರೈತ ಕೊಳವೆ ಬಾವಿ ಮೂಲಕ ನಾಲ್ಕು ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಒಂದು ಗಿಡ 40 ವರ್ಷ ಬದಕುತ್ತದೆ. ಇಲ್ಲಿನ ವಾತಾವರಣಕ್ಕೆ 25 ವರ್ಷ ಮಾತ್ರ ಗಿಡ ಬದಕುತ್ತದೆ. ಒಂದು ವರ್ಷಕ್ಕೆ ಎರಡು ಫಸಲು ಬರುತ್ತವೆ. ಗಿಡಕ್ಕೆ ಬೇವಿನ ಹಿಂಡಿ, ಹೊಂಗೆ ಹಿಂಡಿ, ಹಸು ಕುರಿ ಗೊಬ್ಬರ ಹಾಕಲಾಗುತ್ತದೆ. ಮೆಕ್ಕೆಜೋಳ ರಾಗಿ ಬೆಳೆದ್ರೆ ಸಾಕು ಎನ್ನುತ್ತಿದ್ದ ರೈತರಿಗೆ ಅದೇ ಮಣ್ಣಿನಲ್ಲಿ ಸೇಬು ಬೆಳೆದು ರೈತ ರುದ್ರಮುನಿ ಅಚ್ಚರಿ ಮೂಡಿಸಿದ್ದಾರೆ.
Published On - 9:51 pm, Tue, 15 April 25



















