AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮಗೆ ಶಿವನ ಯಾವ ರೂಪ ಇಷ್ಟ ಅನ್ನೋದ್ರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ

ವ್ಯಕ್ತಿತ್ವ ಪರೀಕ್ಷೆಯ ಆಟಕ್ಕೆ ಸಂಬಂಧಿಸಿದ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಹೀಗೆ ನೀವು ನಿಮ್ಮಿಷ್ಟದ ಬಣ್ಣ, ನಿಮ್ಮಿಷ್ಟದ ಋತುಮಾನ, ನಿಮ್ಮಿಷ್ಟದ ಹಣ್ಣು ಇವುಗಳ ಮುಖಾಂತರ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಇದು ಮಾತ್ರವಲ್ಲದೆ ನಿಮ್ಮ ನೆಚ್ಚಿನ ಶಿವನ ರೂಪದಿಂದಲೂ ನಿಮ್ಮ ನಿಗೂಢ ಪರ್ಸನಾಲಿಟಿ ಹೇಗಿದೆ ಎಂಬುದನ್ನು ತಿಳಿಯಬಹುದು.

Personality Test: ನಿಮಗೆ ಶಿವನ ಯಾವ ರೂಪ ಇಷ್ಟ  ಅನ್ನೋದ್ರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 15, 2025 | 3:57 PM

ತ್ರಿಮೂರ್ತಿಗಳಲ್ಲಿ (Trimurti) ಒಬ್ಬರಾದ  ಶಿವ (Shiva) ಎಲ್ಲರಿಗೂ ಅಚ್ಚುಮೆಚ್ಚು. ಪರಮೇಶ್ವರನೆಂದರೆ ಭಕ್ತ ಪ್ರಿಯ. ಭಕ್ತರು ಕೇಳಿದ್ದನ್ನು ಕರುಣಿಸೋ ದಯಾಮಯ. ಭಕ್ತರು ಶಿವನನ್ನು ನಾನಾ ರೂಪಗಳಲ್ಲಿ, ನಾನಾ ಅವತಾರಗಳಲ್ಲಿ ಪೂಜಿಸುತ್ತಾರೆ. ಶಿವನನ್ನು ಭೋಲೇನಾಥ, ವಿಶ್ವನಾಥ, ನಟರಾಜ, ಪಂಚಮುಖಿ ಶಿವ, ಪಶುಪತಿ, ರುದ್ರ, ಆದಿಯೋಗಿ ಹೀಗೆ ನಾನಾ ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ಶಿವ ರೂಪಗಳಲ್ಲಿ ನಿಮಗ್ಯಾವ ರೂಪ ಇಷ್ಟ ಅನ್ನೋದ್ರ ಮೇಲೂ ನಿಮ್ಮ ವ್ಯಕ್ತಿತ್ವ (Personality) ಹೇಗಿದೆ ಎಂಬುದನ್ನು ತಿಳಿಯಬಹುದಂತೆ.  ಹೌದು ನಿಮ್ಮಿಷ್ಟದ ಬಣ್ಣ, ಹಣ್ಣು, ಋತುಮಾನಗಳ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸುವಂತೆ ನಿಮ್ಮಿಷ್ಟದ ಶಿವನ ರೂಪದ ಮೂಲಕವೂ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಭೋಲೆನಾಥ:

ಶಿವನ ಭೋಲೆನಾಥ ರೂಪವು ಮಗುನಿಂತಹ ಮುಗ್ಧತೆ ಮತ್ತು ಪರಿಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಶಿವನ ಈ ರೂಪವನ್ನು ಇಷ್ಟಪಡುವವರು ತುಂಬಾನೇ ಧೈಆಳು ಸ್ವಭಾವದವರು ಹಾಗೂ ವಿಶ್ವಾಸಾರ್ಹರಾಗಿರುತ್ತಾರೆ. ಸರಳತೆಯನ್ನು ಇಷ್ಟಪಡುವ ಇವರು ಸಹಾಯಕ್ಕೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸಿದೆ ಇತರರಿಗೆ ಸಹಾಯ ಮಾಡುತ್ತಾರೆ. ಇವರ ಈ ದಯಾ ಗುಣವನ್ನೇ ಕೆಲವೊಮ್ಮೆ, ಕೆಲವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ನಟರಾಜ:

ಶಿವನ ನಟರಾಜ ರೂಪವು ಸೃಷ್ಟಿ, ವಿನಾಶ, ಬ್ರಹ್ಮಾಂಡದ ಲಯವನ್ನು ಸಂಕೇತಿಸುತ್ತದೆ. ಶಿವನ ಈ ರೂಪವನ್ನು ಇಷ್ಟಪಡುವವರು ಸೃಜನಶೀಲರು, ಅಭಿವ್ಯಕ್ತಿಶೀಲರು ಮತ್ತು ಕಲೆಗಳ ಬಗ್ಗೆ ಆಸಕ್ತಿ ಹೊಂದಿದವರಾಗಿರುತ್ತಾರೆ. ಅಷ್ಟೇ ಅಲ್ಲದೆ ಇವರಿಗೆ ನೃತ್ಯ ಮತ್ತು ಸಂಗೀತವೆಂದರೆ ತುಂಬಾನೇ ಇಷ್ಟವಂತೆ. ಜೊತೆಗೆ ಜೀವನದಲ್ಲಿ ಸಮತೋಲನದ ಮಹತ್ವವನ್ನು ಕೂಡಾ ಅರ್ಥ ಮಾಡಿಕೊಂಡಿರುತ್ತಾರೆ.

ಇದನ್ನೂ ಓದಿ
Image
ಪುರುಷರು ಸಹ ಅತ್ಯಾಚಾರಕ್ಕೊಳಗಾಗುತ್ತಾರಾ? ಕಾನೂನು ಈ ಬಗ್ಗೆ ಏನು ಹೇಳುತ್ತೆ?
Image
ಚಿತ್ರದಲ್ಲಿ ಮೊದಲು ನಿಮಗೆ ಕಂಡಿದ್ದೇನು? ಫೋಟೋ ನೋಡಿ ವ್ಯಕ್ತಿತ್ವ ಪರೀಕ್ಷಿಸಿ
Image
Medimix soap story: ಮೆಡಿಮಿಕ್ಸ್ ಸೋಪ್ ಹೆಣ್ಣುಮಕ್ಕಳಿಗಲ್ಲ! ಮತ್ಯಾರಿಗೆ
Image
ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಮಕ್ಕಳಿಗೆ ಆಸ್ತಿಯಲ್ಲಿ ಪಾಲಿದ್ಯಾ

ಪಂಚಮುಖಿ ಶಿವ:

ಪಂಚಮುಖಿ ಶಿವನ ಐದು ಮುಖಗಳು ವಿಭಿನ್ನ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ನೀವೇನಾದರೂ ಶಿವನ ಈ ರೂಪವನ್ನು ಇಷ್ಟಪಡುವವರಾಗಿದ್ದರೆ, ನೀವು ಬುದ್ಧಿವಂತರು ಮತ್ತು ಜೀವನದ ಬಗ್ಗೆ ದೃಷ್ಟಿಕೋನವನ್ನು ಹೊಂದಿರುವವರಾಗಿರುತ್ತೀರಿ. ನೀವು ಪ್ರತಿಯೊಂದು ಸನ್ನಿವೇಶಗಳನ್ನು ವಿವಿಧ ಆಯಾಮಗಳಿಂದ ಪರೀಕ್ಷಿಸುವವರಾಗಿರುವುದರಿಂದ ನೀವು ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತೀರಿ. ಅಷ್ಟೇ ಅಲ್ಲದೆ ನೀವು ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿರುವವರಾಗಿರುತ್ತೀರಿ.

ಪಶುಪತಿ:

ಪಶು ಎಂದರೆ ಪ್ರಾಣಿ, ಪತಿ ಎಂದರೆ ಪ್ರಭು. ಶಿವನ ಈ ರೂಪವು ಎಲ್ಲಾ ಜೀವಿಗಳೊಂದಿಗೆ ಶಿವನ ಸಂಪರ್ಕವನ್ನು ಪ್ರತಿನಿಧಿಸುತ್ತದೆ. ನೀವು ಶಿವನ ಈ ರೂಪವನ್ನು ಇಷ್ಟಪಡುವವರಾಗಿದ್ದರೆ ಪ್ರಾಣಿಗಳು ಮತ್ತು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ವಿಶೇಷವಾದ ಕಾಳಜಿಯನ್ನು ಹೊಂದಿರುವವರಾಗಿರುತ್ತೀರಿ. ನಿಮ್ಮಲ್ಲಿ ಬಲವಾದ ನಾಯಕತ್ವದ ಗುಣಗಳು ಮತ್ತು ಆಳವಾದ ಜವಾಬ್ದಾರಿ ಪ್ರಜ್ಞೆ ಕೂಡ ಇದೆ. ನ್ಯಾಯದಲ್ಲಿ ನಂಬಿಕೆಯನ್ನು ಹೊಂದಿರುವ ನೀವು ಸಂಪ್ರದಾಯಗಳೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುತ್ತೀರಿ.

ಇದನ್ನೂ ಓದಿ: ಮೊಲ ಅಥವಾ ಬಾತುಕೋಳಿ; ಈ ಚಿತ್ರದಲ್ಲಿ ಮೊದಲು ಕಂಡಿದ್ದೇನು? ಇದು ಹೇಳುತ್ತೆ ನಿಮ್ಮ ವ್ಯಕ್ತಿತ್ವ

ರುದ್ರ:

ಇದು ಶಿವನ  ಉಗ್ರ ರೂಪವನ್ನು ಪ್ರತಿನಿಧಿಸುತ್ತದೆ. ಪರಮೇಶ್ವರನ ಈ ರೂಪವನ್ನು ಇಷ್ಟಪಡುವವರು ಬಲವಾದ ಇಚ್ಛಾಶಕ್ತಿಯನ್ನು ಹೊಂದಿರುವವರಾಗಿರುತ್ತಾರೆ. ನ್ಯಾಯದ ಕಡೆ ನಿಲುವನ್ನು ಹೊಂದಿರುವ ಇವರು ಯಾವುದೇ ಕಾರಣಕ್ಕೂ ಅನ್ಯಾಯವನ್ನು ಸಹಿಸುವುದಿಲ್ಲ. ಇವರು ಕಠೋರ ವ್ಯಕ್ತಿಯಾಗಿ ಕಂಡರೂ ಅವರಿಗೆ ತಮ್ಮ ಪ್ರೀತಿಪಾತ್ರರೆಂದರೆ ಬಲು ಇಷ್ಟ.

ಶಂಕರ:

ಇದು ಶಿವನ ದಯಾಳು ಮತ್ತು ಕರುಣಾಳು ಸ್ವಭಾವವನ್ನು ಪ್ರತಿನಿಧಿಸುತ್ತದೆ. ಶಿವನ ಶಂಕರ ರೂಪವನ್ನು ಇಷ್ಟಪಡುವವರು ಶಾಂತ ಮತ್ತು ಸ್ಥಿರ ಸ್ವಭಾವವನ್ನು ಹೊಂದಿರುತ್ತಾರೆ. ಎಲ್ಲೆಡೆಸಕಾರಾತ್ಮಕತೆಯನ್ನು ಹರಡುವ ಇವರು ಪ್ರತಿಯೊಂದು ಸಂದರ್ಭದಲ್ಲೂ ತಾಳ್ಮೆಯನ್ನು ಹೊಂದಿರುತ್ತಾರೆ.

ನೀಲಕಂಠ:

ನೀವು ಶಿವನ ನೀಲಕಂಠ ರೂಪವನ್ನು ಇಷ್ಟಪಡುವವರಾಗಿದ್ದರೆ ನೀವು ಬಲವಾದ ಕರ್ತವ್ಯ ಮತ್ತು ತ್ಯಾಗದ ಪ್ರಜ್ಞೆಯನ್ನು ಹೊಂದಿರುವವರಾಗಿರುತ್ತೀರಿ. ಇವರು ಇತರರನ್ನು ರಕ್ಷಿಸಲು ನೀವು ಯಾವ ಸವಾಲುಗಳನ್ನು ಸಹ  ಸ್ವೀಕರಿಸಲು ಸಿದ್ಧರಿರುತ್ತಾರೆ.

ಆದಿಯೋಗಿ:

ಶಿವನ ಈ ರೂಪವನ್ನು ಇಷ್ಟಪಡುವವರು ಆಳವಾದ ಆಧ್ಯಾತ್ಮಕ ಜ್ಞಾನವನ್ನು ಹೊಂದಿರುತ್ತಾರೆ. ಸ್ವಯಂ ಶಿಸ್ತನ್ನು ಹೊಂದಿರುವ ಇವರು ಸಾಮಾಜಿಕವಾಗಿ ಬೆರೆಯುವುದಕ್ಕಿಂತ ಏಕಾಂತತೆ ಮತ್ತು ಆತ್ಮಾವಲೋಕನವನ್ನು ಬಯಸುವವರಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ