Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಊಟಕ್ಕೆ ಹಪ್ಪಳ ಸವಿಯುತ್ತೀರಾ? ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಯಾಕೆ?

ಹಪ್ಪಳಗಳು ಊಟಕ್ಕೆ ಸೇವನೆ ಮಾಡಲು ತುಂಬಾ ರುಚಿಯಾಗಿರುತ್ತದೆ. ಹಾಗೂ ಅದು ಗರಿಗರಿಯಾಗಿರುತ್ತದೆ, ಇದರಲ್ಲಿ ಕ್ಯಾಲೋರಿ ಕಡಿಮೆ ಇರಬಹುದು ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ಹಪ್ಪಳಗಳನ್ನು ಸೇವನೆ ಮಾಡುವಾಗ ಯಾವೆಲ್ಲ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಹಾಗೂ ಯಾವ ಹಪ್ಪಳಗಳನ್ನು ಸೇವಿಸಬಾರದು, ಯಾವ ಹಪ್ಪಳಗಳನ್ನು ಸೇವನೆ ಮಾಡಬೇಕ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಪ್ರತಿದಿನ ಊಟಕ್ಕೆ ಹಪ್ಪಳ ಸವಿಯುತ್ತೀರಾ? ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಯಾಕೆ?
ಹಪ್ಪಳImage Credit source: Getty Images
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 15, 2025 | 5:36 PM

ಇಂದಿನ ಜೀವನಶೈಲಿಗೆ (Lifestyle) ಹೊಂದಿಕೊಳ್ಳುವಂತೆ ಬದುಕುವುದು ಸುಲಭವಾಗಿದೆ. ಅದಕ್ಕೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತಿದೆ. ಒಂದು ವೇಳೆ ನಾವು ಹಳೆಯ ಜೀವನಶೈಲಿಯನ್ನು, ಆಹಾರ ಪದ್ಧತಿ, ಆರೋಗ್ಯ ಕ್ರಮಗಳನ್ನು ಪಾಲಿಸಿಕೊಂಡು ಬಂದರೆ ನಮ್ಮ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಹೀಗಾಗಿ ಹಳೆಯ ಪದ್ಧತಿಗಳು ಆಹಾರ ಉಪಯೋಗಿಸಿದ್ರೆ ಒಳ್ಳೆಯದು, ಆದರೆ ಇಂದಿನ ಕಾಲದಲ್ಲಿ ಆರೋಗ್ಯಯುತವಾದ ಆಹಾರವನ್ನು ಹುಡುಕುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹಪ್ಪಳವನ್ನು ಮನೆಯಲ್ಲೇ ಮಾಡುತ್ತಿದ್ದರು. ಆದರೆ ಇದೀಗ ಹಪ್ಪಳವನ್ನು ಅಂಗಡಿಗಳಿಂದ ತರುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಹಪ್ಪಳ ಎಲ್ಲ ಮನೆಯಲ್ಲೂ ಊಟಕ್ಕೆ ಅಗತ್ಯವಾಗಿತ್ತು. ಅದು ಕೂಡ ಮನೆಯಲ್ಲೇ ಮಾಡಿದ ಹಪ್ಪಳ, ಈಗ ಕೂಡ ಊಟಕ್ಕೆ ಬೇಕು. ಆದರೆ ಮನೆಯಲ್ಲಿ ಮಾಡಿದಲ್ಲ. ಒದೊಂದು ಕಡೆ ಒಂದು ರೀತಿಯ ಹಪ್ಪಳವನ್ನು ಬಳಸುತ್ತಾರೆ. ದಕ್ಷಿಣ ಭಾರತದಲ್ಲಿ ಅಕ್ಕಿ ಹಪ್ಪಳಗಳು, ರಾಜಸ್ಥಾನದಲ್ಲಿ ಕಡಲೆ ಹಿಟ್ಟು (ಬೇಸನ್) ಹಪ್ಪಳಗಳು, ಪಂಜಾಬ್​​​ನಲ್ಲಿ ಉದ್ದಿನ ಬೇಳೆ ಹಪ್ಪಳಗಳು. ಈಗ ಬೇರೆ ಬೇರೆ ರೀತಿಯ ಹಪ್ಪಳಗಳು ಬಂದಿದೆ. ಗೆಣಸು, ಟಪಿಯೋಕಾ ಮತ್ತು ಹಲಸಿನ ಹಣ್ಣಿನಂತಹ ನವೀನ ರುಚಿಯ ಹಪ್ಪಳಗಳು ಬಂದಿದೆ. ಆದರೆ ಇದು ಹಪ್ಪಳಗಳು ಕಡಿಮೆ ಕ್ಯಾಲೋರಿ ಇದೆ ಎಂಬ ಭಾವನೆ ನಮ್ಮಲ್ಲಿ ಇರಬಹುದು. ಆದರೆ ಅದು ನಿಜಾವೇ? ಎಂಬ ಬಗ್ಗೆ ಅರಿವಿಲ್ಲ, ಆ ಬಗ್ಗೆ ಇಲ್ಲಿದೆ.

ಹಪ್ಪಳದ ಪೌಷ್ಟಿಕಾಂಶ

ಒಂದು ಹಪ್ಪಳ ಸರಿಸುಮಾರು 13 ಗ್ರಾಂ ಪೌಷ್ಟಿಕಾಂಶ ಹೊಂದಿರುತ್ತದೆ. 35-40 ಕೆ.ಸಿ.ಎಲ್ ಕ್ಯಾಲೋರಿ ಹೊಂದಿದ್ದು, 0.42 ಗ್ರಾಂ ಕೊಬ್ಬು ಇರುತ್ತದೆ. ಹಾಗೂ ಒಂದು ಹಪ್ಪಳದಲ್ಲಿ 3.3 ಗ್ರಾಂ ಪೋಷಕಾಂಶ ಇರುತ್ತದೆ. ಇದರಲ್ಲಿ 7.8 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಒಳಗೊಂಡಿದೆ. 226 ಮಿಗ್ರಾಂ ಸೋಡಿಯಂ ಇದೆ. ಇವುಗಳನ್ನು ನೋಡಿದಾಗ ಇದನ್ನು ವಾರದಲ್ಲಿ ಅಥವಾ ಅಪರೂಪಕ್ಕೆ ಸೇವಿಸುವುದು ಉತ್ತಮವಾಗಿರುತ್ತದೆ. ಎರಡು ಹಪ್ಪಳ ಚಪಾತಿಯಷ್ಟೇ ಕ್ಯಾಲೊರಿಗಳನ್ನು ಒದಗಿಸುತ್ತವೆ. ಇದು ಅದಕ್ಕೆ ಪರ್ಯಾಯವಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ನಿಮಗೆ ಶಿವನ ಯಾವ ರೂಪ ಇಷ್ಟ ಅನ್ನೋದ್ರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಹಪ್ಪಳ ಸೇವನೆಯಿಂದ ಉಂಟಾಗುವ 3 ಗುಪ್ತ ಆರೋಗ್ಯ ಅಪಾಯ

ಹೆಚ್ಚಿನ ಸೋಡಿಯಂ ಅಂಶ : ಹಪ್ಪಳದಲ್ಲಿ ಹೆಚ್ಚಿನ ಸೋಡಿಯಂ ಅಂಶ ಇದೆ. ಹಪ್ಪಳಗಳು ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸೋಡಿಯಂ ಆಧಾರಿತ ಸಂರಕ್ಷಕಗಳನ್ನು ಹೊಂದಿರುತ್ತವೆ. ಹೆಚ್ಚುವರಿ ಸೋಡಿಯಂ ಸೇವನೆಯು ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಅಸ್ವಸ್ಥತೆಗಳು ಮತ್ತು ಹೃದಯ ಕಾಯಿಲೆಗಳಿಗೆ ಸಂಬಂಧಿಸಿದೆ. ಹೆಚ್ಚಿನ ಸೋಡಿಯಂ ಮಟ್ಟವನ್ನು ಹೊಂದಿರುವ ಸಂಸ್ಕರಿಸಿದ ಆಹಾರಗಳು ದೀರ್ಘಕಾಲೀನ ಆರೋಗ್ಯದ ಅಪಾಯಗಳನ್ನು ಉಂಟುಮಾಡಬಹುದು

ಹುರಿದ ಹಪ್ಪಳಗಳಲ್ಲಿ ಅಪಾಯ (ಅಕ್ರಿಲಾಮೈಡ್): ಹಪ್ಪಳಗಳಲ್ಲಿ ಅಕ್ರಿಲಾಮೈಡ್ ರಚನೆಯಾಗುವುದು ಅಪಾಯ. ಪಾಪಡ್‌ಗಳಂತಹ ಕಾರ್ಬೋಹೈಡ್ರೇಟ್-ಭರಿತ ಆಹಾರಗಳನ್ನು ಹುರಿಯುವುದರಿಂದ ಅಕ್ರಿಲಾಮೈಡ್ ಉತ್ಪಾದನೆಗೆ ಕಾರಣವಾಗಬಹುದು. ಇದು ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು.

ಕೃತಕ ಸುವಾಸನೆ: ಹಪ್ಪಳಗಳನ್ನು ಪ್ಯಾಕ್​​​ ಮಾಡಿ ಮಾರುಕಟ್ಟೆಗಳಿಗೆ ನೀಡುತ್ತಾರೆ. ಅದರ ಸುವಾಸನೆ ಹೋಗಬಾರದು ಎಂದು ಕೃತಕ ಸುವಾಸನೆ ಮತ್ತು ಸಂರಕ್ಷಕಗಳನ್ನು ಹಾಕುತ್ತಾರೆ. ಇದು ಜೀರ್ಣಕ್ರಿಯೆ ಸಮಸ್ಯೆ ಹಾಗೂ ಆಮ್ಲೀಯತೆಗೆ ಕಾರಣವಾಗಬಹುದು. ಇದರ ಜತೆಗೆ ಸೋಡಿಯಂ ಲವಣಗಳನ್ನು ಹೆಚ್ಚಾಗಿ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.

ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ಹಾಗಾಗಿ ಊಟಕ್ಕೆ ರುಚಿ ಇದೆ ಎಂದು ಹೆಚ್ಚು ಸೇವಿಸಬಾರದು. ಅದನ್ನು ಮಿತವಾಗಿ ಸೇವಿಸಬೇಕು. ಇನ್ನು ಮಾರುಕಟ್ಟೆಗಳಲ್ಲಿ ಅಥವಾ ಅಂಗಡಿಗಳಲ್ಲಿ ಬಳಸುವ ಹಪ್ಪಳಗಳನ್ನು ಬಳಸುವುದಕ್ಕಿಂತ ಮನೆಯಲ್ಲೇ ತಯಾರಿಸಿ. ಅದು ಆರೋಗ್ಯಕರವಾಗಿಯು ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ