ಶ್ವೇತಭವನದ ಕ್ರಿಸ್ಮಸ್ ಅಲಂಕಾರ ಅನಾವರಣಗೊಳಿಸಿದ ಮೆಲೆನಿಯಾ ಟ್ರಂಪ್
ಶ್ವೇತಭವನದ ಕ್ರಿಸ್ಮಸ್ ಅಲಂಕಾರವನ್ನು ಅಮೆರಿಕಾದ ಮೊದಲ ಮಹಿಳೆ ಮೆಲೆನಿಯಾ ಟ್ರಂಪ್ ಅನಾವರಣಗೊಳಿಸಿದ್ದಾರೆ. ‘ಅಮೆರಿಕಾ ದಿ ಗ್ರೇಟ್’ ಎಂಬ ಥೀಮ್ನಲ್ಲಿ ಶ್ವೇತಭವನ ಕಂಗೊಳಿಸುತ್ತಿದೆ.
ವಾಷಿಂಗ್ಟನ್: ಅಮೆರಿಕಾದ ಮೊದಲ ಮಹಿಳೆ ಮೆಲೆನಿಯಾ ಟ್ರಂಪ್, ಶ್ವೇತಭವನದ ಕ್ರಿಸ್ಮಸ್ ಅಲಂಕಾರವನ್ನು ಸೋಮವಾರ ಅನಾವರಣಗೊಳಿಸಿದ್ದಾರೆ. ‘ಅಮೆರಿಕಾ ದಿ ಗ್ರೇಟ್’ ಎಂಬ ಥೀಮ್ನಲ್ಲಿ ಶ್ವೇತಭವನವನ್ನು ಅಲಂಕರಿಸಲಾಗಿದ್ದು, ಈ ಮೂಲಕ ದೇಶದ ಸಾರ್ವಭೌತೆಗೆ ಗೌರವ ಸಮರ್ಪಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಹಲವಾರು ನೈಸರ್ಗಿಕ ಸಂಪನ್ಮೂಲಗಳಿಂದ ನಮ್ಮ ದೇಶ ಸೌಂದರ್ಯಭರಿತವಾಗಿದೆ. ಅಂಥಾ ಪ್ರಾಕೃತಿಕ ಸಂಪತ್ತಿನಿಂದ ದೇಶಪ್ರೇಮ ಹೆಚ್ಚಿದೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿವರ್ಷದ ಸಂಪ್ರದಾಯದಂತೆ, ಶ್ವೇತಭವನದ ಪೂರ್ವಭಾಗದಲ್ಲಿ ಗೋಲ್ಡ್ ಸ್ಟಾರ್ ಫ್ಯಾಮಿಲಿ ಟ್ರೀಯನ್ನು ಇಡಲಾಗಿದ್ದು, ಪ್ರೇಕ್ಷಕರನ್ನು ಸ್ವಾಗತಿಸಲಿದೆ. ನ್ಯಾಯ ಮತ್ತು ಪರಿಶ್ರಮದ ಸಂಕೇತವಾಗಿರುವ ನೀಲಿ ಬಣ್ಣದಿಂದ ಕಂಗೊಳಿಸುವ ಮರವು, ಅಮೆರಿಕಾದ ನಾಯಕರು ಮತ್ತು ಅವರ ಕುಟುಂಬಗಳಿಗೆ ಗೌರವ ಸೂಚಿಸಲಿದೆ.
ಈ ಬಾರಿ ಮರವನ್ನು ಸಿಂಗರಿಸಿರುವ ಸದಸ್ಯರು, ತಮ್ಮ ಕುಟುಂಬದ ಹಿರಿಯ ಸದಸ್ಯರನ್ನು ನೆನಪಿಸಿಕೊಳ್ಳಲು ಅವರ ಹೆಸರಿರುವ ರಿಬ್ಬನ್ಗಳನ್ನು ಮರದಲ್ಲಿ ತೂಗಿದ್ದಾರೆ. ಆ ಮೂಲಕ ಮರದ ಅಂದವನ್ನೂ ಹೆಚ್ಚಿಸಿದ್ದಾರೆ.
‘Be Best’ ಎಂಬ ಫಲಕವನ್ನು ಮರಕ್ಕೆ ಅಳವಡಿಸಲಾಗಿದ್ದು, ಆಸ್ಪತ್ರೆಯೊಂದರ ಪ್ರತಿಕೃತಿಯನ್ನೂ ತೂಗುಹಾಕಲಾಗಿದೆ. ಆ ಮೂಲಕ ಕೊರೊನಾ ವಿರುದ್ಧ ಶ್ರಮಿಸಿದ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಲಾಗಿದೆ.
ಈ ಬಗ್ಗೆ ಮೆಲೆನಿಯಾ ಟ್ರಂಪ್ ಸರಣಿ ಟ್ವೀಟ್ ಮಾಡಿದ್ದಾರೆ.
This weekend, volunteers from all across America have come to decorate the @WhiteHouse for the holiday season. Thank you for your time, enthusiasm & devotion to make sure the spirit of peace & joy fill the historic rooms & halls of the People’s House! #WHChristmas pic.twitter.com/k1VAqCpCgk
— Melania Trump 45 Archived (@FLOTUS45) November 28, 2020
During this special time of the year, I am delighted to share “America the Beautiful” and pay tribute to the majesty of our great Nation. Together, we celebrate this land we are all proud to call home. #WHChristmas pic.twitter.com/fdZmB3rdXL
— Melania Trump 45 Archived (@FLOTUS45) November 30, 2020
“America the Beautiful” #Christmas at the @WhiteHouse pic.twitter.com/2kCBET7EcL
— Melania Trump 45 Archived (@FLOTUS45) November 30, 2020
.@FLOTUS has unveiled the 2020 White House Christmas decorations!?
This year's theme, “America the Beautiful,” is a tribute to the majesty of our great Nation! https://t.co/TaYJJhwBEx
— The White House 45 Archived (@WhiteHouse45) November 30, 2020
ಇದನ್ನೂ ಓದಿ: ಕಾಲು ಮುರಿದುಕೊಂಡ ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್: Speedy recovery ಎಂದ ಟ್ರಂಪ್
Published On - 2:52 pm, Tue, 1 December 20