ಬಿಡೆನ್ ಪರ ಎಫ್ಬಿಐ ಶಾಮೀಲು: ಡೊನಾಲ್ಡ್ ಟ್ರಂಪ್ ಹೊಸ ಆರೋಪ
ವಿಸ್ಕಾನ್ಸಿನ್ ರಾಜ್ಯದಲ್ಲಿ ಮತಗಳ ಮರುಎಣಿಕೆ ನಡೆಯಬೇಕೆಂದು ಆಗ್ರಹಿಸಿ ಅಭಿಯಾನ ನಡೆಸಲು ಡೊನಾಲ್ಡ್ ಟ್ರಂಪ್ ಸುಮಾರು 30 ಲಕ್ಷ ಡಾಲರ್ ಖರ್ಚು ಮಾಡಿದ್ದರು.
ವಾಷಿಂಗ್ಟನ್: ಅಮೆರಿಕದ ಸರ್ವೋಚ್ಛ ತನಿಖಾ ಸಂಸ್ಥೆ ಎಫ್ಬಿಐ ಮತ್ತು ಅಮೆರಿಕದಲ್ಲಿ ವ್ಯಾಪಕ ಜನಮನ್ನಣೆ ಪಡೆದಿರುವ ನ್ಯಾಯಾಂಗ ಇಲಾಖೆಗಳು ‘ಜೊ ಬಿಡೆನ್ ಪರ ಶಾಮೀಲಾಗಿ ಫಲಿತಾಂಶ ತಿರುಚಿವೆ’ ಎಂದು ನಿರ್ಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದರು.
ಬಹು ಚರ್ಚಿತ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಫಾಕ್ಸ್ ನ್ಯೂಸ್ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಡೊನಾಲ್ಡ್ ಟ್ರಂಪ್, ಈ ಫಲಿತಾಂಶವನ್ನು ಜನರು ಹೇಗೆ ಒಪ್ಪಿಕೊಂಡರು ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಬರಾಕ್ ಒಬಾಮಾಗಿಂತಲೂ ಬಿಡೆನ್ ಅದು ಹೇಗೆ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವೇ ಇಲ್ಲ ಎಂದು ಆಕ್ಷೇಪಿಸಿದರು.
ಮರುಎಣಿಕೆಯಲ್ಲೂ ಬಿಡೆನ್ ಮುಂದು
ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ಚಲಾವಣೆಯದ ಮತಗಳ ಮರುಎಣಿಕೆಯಲ್ಲಿ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಹೆಚ್ಚುವರಿಯಾಗಿ 87 ಮತಗಳನ್ನು ಗಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಈ ಪ್ರಮುಖ ರಾಜ್ಯದಲ್ಲಿ ಅವರು 20,000 ಮತಗಳ ಅಂತರದಿಂದ ಎದುರಾಳಿಯನ್ನು ಮಣಿಸಿದ್ದಾರೆ.
ವಿಸ್ಕಾನ್ಸಿನ್ ರಾಜ್ಯದಲ್ಲಿ ಮತಗಳ ಮರುಎಣಿಕೆ ನಡೆಯಬೇಕೆಂದು ಆಗ್ರಹಿಸಿ ಅಭಿಯಾನ ನಡೆಸಲು ಡೊನಾಲ್ಡ್ ಟ್ರಂಪ್ ಸುಮಾರು 30 ಲಕ್ಷ ಡಾಲರ್ ಖರ್ಚು ಮಾಡಿದ್ದರು. ಮತಗಳ ಮರುಎಣಿಕೆಯು ಜೋ ಬಿಡೆನ್ ಅವರ ಮುನ್ನಡೆಯನ್ನೇ ಸಾರಿ ಹೇಳಿದ್ದು, ಟ್ರಂಪ್ ಮುಖಭಂಗ ಅನುಭವಿಸುವಂತಾಗಿದೆ.
ವಿಸ್ಕಾನ್ಸಿನ್ನ ದೊಡ್ಡ ಮತ್ತು ಬಹುತೇಕ ಡೆಮಾಕ್ರಟಿಕ್ ಅಭ್ಯರ್ಥಿಗಳ ಪರವಾಗಿಯೇ ಇರುತ್ತಿದ್ದ ಮಿಲ್ವಾಕೀ ಮತ್ತು ಡೇನ್ ಕೌಂಟಿಗಳಲ್ಲಿ ಬಿಡೆನ್ಗೆ ಹೆಚ್ಚುವರಿಯಾಗಿ ಒಟ್ಟು 87 ಮತಗಳು ಸಿಕ್ಕಿವೆ.
ಇದನ್ನೂ ಓದಿ: ಟ್ರಂಪ್ಗೆ 2024ರಲ್ಲೂ ಸ್ಪರ್ಧಿಸುವ ಆಸೆಯಿದೆ.. ಆದ್ರೆ ಸಾಧ್ಯವಾಗೋಲ್ಲ! ಯಾಕೆ ಗೊತ್ತಾ?: ಮೇರಿ ಟ್ರಂಪ್
Published On - 7:33 pm, Mon, 30 November 20