AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6,6,6: ಒಂದೇ ಓವರ್​ನಲ್ಲಿ 6 ಸಿಕ್ಸ್​ ಸಿಡಿಸಿದ ರಿಷಿ ಪಟೇಲ್

6,6,6,6,6,6: ಒಂದೇ ಓವರ್​ನಲ್ಲಿ 6 ಸಿಕ್ಸ್​ ಸಿಡಿಸಿದ ರಿಷಿ ಪಟೇಲ್

ಝಾಹಿರ್ ಯೂಸುಫ್
|

Updated on: May 11, 2025 | 11:54 AM

Rishi Patel: ರಿಷಿ ಪಟೇಲ್ ಅವರ ಭರ್ಜರಿ ಬ್ಯಾಟಿಂಗ್​ ನೆರವಿನಿಂದ ಲೀಸೆಸ್ಟರ್‌ಶೈರ್ ಫಾಕ್ಸಸ್ ತಂಡವು 20 ಓವರ್​ಗಳಲ್ಲಿ 300 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮೈನರ್ ಕೌಂಟಿ ಸ್ಟಾಫರ್ಡ್‌ಶೈರ್ ತಂಡ ಕೇವಲ 50 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಲೀಸೆಸ್ಟರ್‌ಶೈರ್ ಫಾಕ್ಸಸ್ ತಂಡವು 250 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. 

ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿರುವುದು ಕೇವಲ 10 ಬ್ಯಾಟರ್​ಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ವೆಸ್ಟ್ ಇಂಡೀಸ್​ನ ಗ್ಯಾರಿ ಸೋಬರ್ಸ್ ಆಗಿದ್ದರೆ, ಕೊನೆಯ ಸ್ಥಾನದಲ್ಲಿ ಇದೀಗ ರಿಷಿ ಪಟೇಲ್ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್​ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿನ ಸೌಹಾರ್ದ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಫಾಕ್ಸಸ್ ಹಾಗೂ ಮೈನರ್ ಕೌಂಟಿ ಸ್ಟಾಫರ್ಡ್‌ಶೈರ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಫಾಕ್ಸಸ್ ಆರಂಭಿಕನಾಗಿ ಕಣಕ್ಕಿಳಿದ ರಿಷಿ ಪಟೇಲ್,  ಸ್ಪಿನ್ನರ್ ಜ್ಯಾಕ್ ರೆಡ್‌ಮನ್ ಎಸೆದ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ರಿಷಿ ಪಟೇಲ್ 40 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 96 ರನ್ ಚಚ್ಚಿದರು. ಈ ಮೂಲಕ ಲೀಸೆಸ್ಟರ್‌ಶೈರ್ ಫಾಕ್ಸಸ್ ತಂಡವು 20 ಓವರ್​ಗಳಲ್ಲಿ 300 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮೈನರ್ ಕೌಂಟಿ ಸ್ಟಾಫರ್ಡ್‌ಶೈರ್ ತಂಡ ಕೇವಲ 50 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಲೀಸೆಸ್ಟರ್‌ಶೈರ್ ಫಾಕ್ಸಸ್ ತಂಡವು 250 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.