AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆಯಷ್ಟೇ ದೂರು ದಾಖಲಾಗಿದೆ.. ತಾಳ್ಮೆಯಿಂದ ಕಾಯೋಣ: ಸತೀಶ್​ ಜಾರಕಿಹೊಳಿ

ತಮ್ಮ ವಿರುದ್ಧ ಷಡ್ಯಂತ್ರವಾಗಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಂಬಂಧಿಸಿ ಮಾತನಾಡಿದ ಸತೀಶ್​ ಜಾರಕಿಹೊಳಿ, ಕಾನೂನು ಯಾರ ವಿರುದ್ಧವೂ ಅಲ್ಲ. ಯಾವ ಪಕ್ಷದ ಪರವೂ ಕಾನೂನು ಇಲ್ಲ. ಎಲ್ಲರಿಗೂ ಇರೋದು ಒಂದೇ ಕಾನೂನು.

ನಿನ್ನೆಯಷ್ಟೇ ದೂರು ದಾಖಲಾಗಿದೆ.. ತಾಳ್ಮೆಯಿಂದ ಕಾಯೋಣ: ಸತೀಶ್​ ಜಾರಕಿಹೊಳಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
shruti hegde
| Edited By: |

Updated on: Mar 14, 2021 | 3:46 PM

Share

ಧಾರವಾಡ: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣವು ಏನೆಲ್ಲಾ ತಿರುವು ಪಡೆದರೂ ಅಂತಿಮವಾಗಿ ಪೊಲೀಸರೇ ತನಿಖೆ ನಡೆಸಿ ಇದೆಲ್ಲದಕ್ಕೆ ಮಂಗಳ ಹಾಡಬೇಕು. ನಿನ್ನೆಯಷ್ಟೇ ದೂರು ದಾಖಲಾಗಿದೆ. ತನಿಖೆಗೆ ಇನ್ನೂ 90 ದಿನ ಸಮಯವಿದೆ. ರಮೇಶ್​ ಜಾರಕಿಹೊಳಿ ಜೊತೆ ನಾನು ಈ ಬಗ್ಗೆ ಮಾತನಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ರಮೇಶ್​ ಮೇಲೆ ಯುವತಿಯ ಆರೋಪಗಳ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಇದೆಲ್ಲವನ್ನು ಪರಿಹಾರ ಮಾಡೋದು ಪೊಲೀಸರಿಗೆ ಮಾತ್ರವೇ ಸಾಧ್ಯ. ನಾವು ಏನೇ ಹೇಳಿದರೂ ನಮ್ಮ ಪರವಾಗಿ ಹೇಳುತ್ತೇವೆ. ಈ ಪ್ರಕರಣದಲ್ಲಿ ಭಾಗಿಯಾದವರೆನ್ನೆಲ್ಲ ತನಿಖೆಯ ಮೂಲಕ ಪೊಲೀಸರೇ ಪತ್ತೆಹಚ್ಚುತ್ತಾರೆ. ಯುವತಿಯನ್ನೂ ಪೋಲೀಸರೇ ಹುಡುಕುತ್ತಾರೆ. ವಿಡಿಯೋ‌ ನಕಲಿಯೋ ಅಥವಾ ಅಸಲಿಯೋ ಎಂಬ ವಿಚಾರಕ್ಕೆ ಸಂಬಂಧಿಸಿ, ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಏನೂ ಹೇಳೋಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ ವಿರುದ್ಧ ಷಡ್ಯಂತ್ರವಾಗಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಂಬಂಧಿಸಿ ಮಾತನಾಡಿದ ಸತೀಶ್​ ಜಾರಕಿಹೊಳಿ, ಕಾನೂನು ಯಾರ ವಿರುದ್ಧವೂ ಅಲ್ಲ. ಯಾವ ಪಕ್ಷದ ಪರವೂ ಕಾನೂನು ಇಲ್ಲ. ಎಲ್ಲರಿಗೂ ಇರೋದು ಒಂದೇ ಕಾನೂನು. ಸತ್ಯಾಂಶ ಹೊರಗೆ ಬಂದೇ ಬರುತ್ತದೆ. ಯಾರೇ ಷಡ್ಯಂತ್ರ ಮಾಡಿದರೂ ಅದಕ್ಕೆಲ್ಲ ಕಾನೂನು ಇದ್ದೇ ಇದೆ. ಈ ಪ್ರಕರಣದಲ್ಲಿ ಅವಸರ ಮಾಡುವುದು ಬೇಡ. ಈಗಷ್ಟೇ ದೂರು ದಾಖಲಾಗಿದೆ. ತಾಳ್ಮೆಯಿಂದ ಕಾಯೋಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಅಳಿಯ ಅಂಬಿರಾವ್ ಪಾಟೀಲ್ ಮಾತನ್ನು ಬಿಟ್ಟು ಬೇರೆ ಯಾರ ಮಾತನ್ನೂ ರಮೇಶ್​ ಕೇಳಲ್ಲ: ಸತೀಶ್​ ಜಾರಕಿಹೊಳಿ

ಇದನ್ನೂ ಓದಿ: ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಡಿಕೆಶಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು