ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಡಿಕೆಶಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು

ಇನ್ನು ಮಾತು ಮುಂದುವರೆಸುತ್ತ.. CDಯಲ್ಲಿರುವ ಯುವತಿ ಹೇಳಿಕೆಯನ್ನಷ್ಟೇ ನೀಡಿದ್ದಾರೆ. ಅವರು ಕಾನೂನಾತ್ಮಕವಾಗಿ ಮುಂದೆ ಬರಬೇಕಲ್ವಾ? ಯುವತಿಗೆ ಅನ್ಯಾಯವಾಗಿದ್ದರೆ ಮುಂದೆ ಬಂದು ಹೇಳಲಿ. CDಯಲ್ಲಿದ್ದ ಯುವತಿಗೆ ಇದು ಉತ್ತಮ ವೇದಿಕೆ. ಯುವತಿ ಹೇಳಿಕೆ ಬಳಿಕ ಪೊಲೀಸರ ಪಾತ್ರ ದೊಡ್ಡದು.

ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಡಿಕೆಶಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
Follow us
ಆಯೇಷಾ ಬಾನು
|

Updated on: Mar 14, 2021 | 1:19 PM

ಬೆಳಗಾವಿ: ರಮೇಶ್ ಜಾರಕಿಹೊಳಿ CD ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಈ ಪ್ರಕರಣದಲ್ಲಿ ಯಾರನ್ನೂ ಸಿಲುಕಿಸುವುದಕ್ಕೆ ಆಗಲ್ಲ. ಪೊಲೀಸ್ ತನಿಖೆಯ ಬಳಿಕ ಸತ್ಯಾಂಶ ಹೊರಬರುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ಮಾತನಾಡಿದ ಅವರು “ರಮೇಶ್ ಜಾರಕಿಹೊಳಿ ಠಾಣೆಗೆ ದೂರು ನೀಡಿದ್ದಾರೆ. ತನಿಖೆಯಾಗಿ ಸತ್ಯಾಂಶ ಹೊರಬರುವವರೆಗೆ ಕಾಯೋಣ. ಪೊಲೀಸರೇ ಇದಕ್ಕೆ ಪರಿಹಾರ ಹೇಳಬೇಕು. ನನಗೆ ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ತಕ್ಷಣವೇ ಏನೂ ಹೇಳಲಾಗಲ್ಲ, ಕಾದು ನೋಡಬೇಕಷ್ಟೆ” ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನು ಮಾತು ಮುಂದುವರೆಸುತ್ತ.. CDಯಲ್ಲಿರುವ ಯುವತಿ ಹೇಳಿಕೆಯನ್ನಷ್ಟೇ ನೀಡಿದ್ದಾರೆ. ಅವರು ಕಾನೂನಾತ್ಮಕವಾಗಿ ಮುಂದೆ ಬರಬೇಕಲ್ವಾ? ಯುವತಿಗೆ ಅನ್ಯಾಯವಾಗಿದ್ದರೆ ಮುಂದೆ ಬಂದು ಹೇಳಲಿ. CDಯಲ್ಲಿದ್ದ ಯುವತಿಗೆ ಇದು ಉತ್ತಮ ವೇದಿಕೆ. ಯುವತಿ ಹೇಳಿಕೆ ಬಳಿಕ ಪೊಲೀಸರ ಪಾತ್ರ ದೊಡ್ಡದು. ಪೊಲೀಸರ ತನಿಖೆ ಬಳಿಕವಷ್ಟೇ ಸತ್ಯಾಂಶ ಗೊತ್ತಾಗುತ್ತೆ. ರಾಜಕೀಯ ಷಡ್ಯಂತ್ರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಡಿಕೆಶಿ ನೀಡಿದ್ದ ಹೇಳಿಕೆ ಏನು? ಆರಂಭದಿಂದಲೂ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಸಿಡಿಯಲ್ಲಿರುವ ಯುವತಿಯ ವಿಡಿಯೋ ಬಗ್ಗೆ ಗೊತ್ತಿಲ್ಲ. ಘಟನೆ ಬಗ್ಗೆ ಪತ್ರಿಕೆಗಳಲ್ಲಿ ಬರುವ ಸುದ್ದಿಯನ್ನು ಓದಿರುವೆ. ಎಂ.ವಿ.ನಾಗರಾಜ್​ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಸಿಡಿ ಪ್ರಕರಣದಲ್ಲಿ ಸರ್ಕಾರಕ್ಕೆ ಸ್ಪಷ್ಟ ನಿಲುವು ಇಲ್ಲ. ಸಿಡಿ ಪ್ರಕರಣದ ಬಗ್ಗೆ ಎಸ್​ಐಟಿ ತನಿಖೆ ನಡೆಸುತ್ತಿದೆ. ತನಿಖೆ ನಡೆಸಿ ವರದಿ ನೀಡಲಿ, ನಂತರ ನೋಡೋಣ. ಸಿಡಿ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಶಿವಮೊಗ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದರು.

ಇನ್ನು ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಮಾರ್ಮಿಕವಾಗಿ ನುಡಿದಿದ್ದಾರೆ. ಸಿಡಿ ವಿಚಾರದಲ್ಲಿ ಸಿಲುಕಿಸುವ ಷಡ್ಯಂತ್ರ ಅನ್ನೋ ಡಿಕೆಶಿ ಹೇಳಿಕೆ ವಿಚಾರಕ್ಕೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ನಾನು ಆ ಊರಿಗೆ ಹೋಗುವವನಲ್ಲ. ಇನ್ನು ಊರಿಗೆ ದಾರಿಯಾದ್ರೂ ನನಗೆ ಹೇಗೆ ಗೊತ್ತಿರುತ್ತೆ? ಊರಿಗೆ ಹೋಗುವವರಿಗಷ್ಟೇ ದಾರಿ ಗೊತ್ತಿರುತ್ತೆ. ಇಂತಹ ವಿಷಯದ ಬಗ್ಗೆ ನಾನೆಂದೂ ಮಾತನಾಡಿಲ್ಲ, ಮಾತನಾಡೋದೂ ಇಲ್ಲ ಎಂದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ CD ಕೇಸ್; ಮೂವರನ್ನು ವಶಕ್ಕೆ ಪಡೆದ SIT