ಮಾಧ್ಯಮಗಳಿಂದ ನನ್ನ ಸ್ವಾತಂತ್ರ್ಯಹರಣ: ಜಾಮೀನು ಮಂಜೂರಾದ ನಂತರ ಮೌನ ಮುರಿದ ದಿಶಾ ರವಿ
Disha Ravi breaks silence: ಎಲ್ಲರಲ್ಲೂ ಪರಿಸರ ಕಾಳಜಿ ಇದ್ದೇ ಇರುತ್ತದೆ. ನನ್ನ ಅಜ್ಜ ಅಜ್ಜಿ ರೈತರಾಗಿದ್ದರು. ಅವರ ಪ್ರಭಾವದಿಂದಲೇ ನಾನು ಪರಿಸರ ಪರ ಹೋರಾಟದಲ್ಲಿ ಪಾಲ್ಗೊಳ್ಳತೊಡಗಿದೆ. ಪ್ರತಿದಿನ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಸಾಗುತ್ತಿದೆ. ಆದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಅವರು ವಿವರಿಸಿದ್ದಾರೆ.

ದೆಹಲಿ: ಪಟಿಯಾಲ ನ್ಯಾಯಾಲಯದಿಂದ ಜಾಮೀನು ಮಂಜೂರಾದ ಸುಮಾರು ಹದಿನೈದು ದಿನಗಳ ನಂತರ ಬೆಂಗಳೂರು ಮೂಲದ ಪರಸರ ಹೋರಾಟಗಾರ್ತಿ ದಿಶಾ ರವಿ (Disha Ravi) ಮೌನ ಮುರಿದಿದ್ದಾರೆ. ಶನಿವಾರ (ಮಾರ್ಚ್ 13) ಸಂಜೆ 4 ಪುಟಗಳ ಹೇಳಿಕೆಯನ್ನು ಟ್ವೀಟ್ ಮಾಡಿರುವ ಅವರು, ‘ಸತ್ಯ ಎಷ್ಟೇ ದಿನಗಳ ನಂತರ ಹೊರಬಂದರೂ, ನೈಜ ವಿಷಯವನ್ನೇ ಬಹಿರಂಗಪಡಿಸುತ್ತದೆ’ ಎಂದಿದ್ದಾರೆ. ಅವರ ಬಂಧನದ ನಂತರ ಮಾಧ್ಯಮಗಳು ಅವರ ಕುರಿತು ಸುದ್ದಿ ಪ್ರಸಾರ ಮಾಡಿದ ನಡೆಯನ್ನು ವ್ಯಾಖ್ಯಾನಿಸಿರುವ ದಿಶಾ ರವಿ, ‘ ನನ್ನ ಸ್ವಾಯತ್ತತೆಯನ್ನು ಟಿಆರ್ಪಿಗೋಸ್ಕರ ಉಲ್ಲಂಘನೆ ಮಾಡಲಾಗಿದೆ’ ಎಂದಿದ್ದಾರೆ.
ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾದ ದಿಶಾ ರವಿ, ನನ್ನ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ಯಾರೂ ಸುದ್ದಿ ಪ್ರಸಾರ ಮಾಡಿಲ್ಲ. ನ್ಯಾಯಾಲಯಕ್ಕೆ ನನ್ನನ್ನು ಹಾಜರುಪಡಿಸಿದಾಗ ನನ್ನ ಸಹಾಯಕ್ಕೆ ವಕೀಲರನ್ನು ಒದಗಿಸುತ್ತಾರೋ ಇಲ್ಲವೋ ಎಂಬುದು ಸಹ ನನಗೆ ತಿಳಿದಿರಲಿಲ್ಲ. ನ್ಯಾಯಾಧೀಶರು ನನ್ನ ಬಳಿ ಎನಾದರೂ ಹೇಳುವುದಿದೆಯೇ ಎಂದು ಕೇಳಿದರು. ಆಗ ನನ್ನ ತಲೆಯಲ್ಲಿ ಏನು ಓಡುತ್ತಿತ್ತೋ ಅದನ್ನೇ ಹೇಳಬೇಕು ಎಂದು ತೀರ್ಮಾನಿಸಿದೆ ಎಂದು ದಿಶಾ ರವಿ ಹೇಳಿದ್ದಾರೆ. ಆದರೆ ಅಷ್ಟರಲ್ಲಿ 5 ದಿನಗಳ ಕಾಲ ಪೊಲಿಸ್ ಕಸ್ಟಡಿಯಲ್ಲಿ ಕಳೆದುಬಿಟ್ಟಿದ್ದೆ ಎಂದು ಅವರು ವಿವರಿಸಿದ್ದಾರೆ.
ಫೆಬ್ರವರಿ 13ರ ಬೆಳಗ್ಗೆ ದೆಹಲಿ ಪೊಲೀಸರು ನನ್ನ ಮನೆಯ ಬಾಗಿಲು ತಟ್ಟಿದರು. ತಕ್ಷಣವೆ ನನ್ನನ್ನು ಬಂಧಿಸಿದರು. ನನ್ನ ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ನ್ನು ಸಹ ತೆಗೆದುಕೊಳ್ಳಲು ಬಿಡದೇ ನನ್ನನ್ನು ವಶಪಡಿಸಿಕೊಂಡರು. ನಂತರ ಅವರು ನನ್ನನ್ನು ಪಟಿಯಾಲಾ ಕೋರ್ಟ್ ಎದುರು ಹಾಜರುಪಡಿಸಲಿಲ್ಲ. ನನ್ನನ್ನು ಇರಿಸಿದ ಸ್ಥಳ ಯಾವುದು ಎಂದು ಹುಡುಕಲು ಮಾಧ್ಯಮಗಳು ಸಹ ಪ್ರಯತ್ನ ನಡೆಸಲಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ದೆಹಲಿ ಪೊಲಿಸರು ನನ್ನನ್ನು ಬಂಧಿಸಿದ ಕೆಲ ಗಂಟೆಗಳಿಂದಲೇ ನನ್ನ ಸ್ವಾಯತ್ತತೆಯು ನಾಶವಾಯಿತು. ನನ್ನ ಬಗ್ಗೆ ತಪ್ಪಿತಸ್ಥೆ ಎಂಬರ್ಥದಲ್ಲಿ ಪ್ರಸಾರ ಮಾಡಲಾಯಿತು. ನನ್ನ ಫೋಟೊಗಳನ್ನು ಎಗ್ಗಿಲ್ಲದೇ ಬಳಸಿಕೊಳ್ಳಲಾಯಿತು. ಟಿಆರ್ಪಿಗಾಗಿ ನನ್ನ ಬಂಧನದ ಸುದ್ದಿಯನ್ನು ಬಳಸಿಕೊಳ್ಳಲಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ಎಲ್ಲರಲ್ಲೂ ಪರಿಸರ ಕಾಳಜಿ ಇದ್ದೇ ಇರುತ್ತದೆ. ನನ್ನ ಅಜ್ಜ ಅಜ್ಜಿಯರು ರೈತರಾಗಿದ್ದರು. ಅವರ ಪ್ರಭಾವದಿಂದಲೇ ನಾನು ಪರಿಸರಪರ ಹೋರಾಟದಲ್ಲಿ ಪಾಲ್ಗೊಳ್ಳತೊಡಗಿದೆ. ಪ್ರತಿದಿನ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಸಾಗುತ್ತಿದೆ. ಆದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಅವರು ವಿವರಿಸಿದ್ದಾರೆ.
I’m letting this out into the internet void in order to present a narrative that is my own.
P.S. This is based on my personal experience and does not represent the opinion of any climate movement, group, or organisation. pic.twitter.com/djrieCZcn8
— Disha ? (@disharavii) March 13, 2021
ಜಾಮೀನು ದೊರೆತಿತ್ತು.. ಭಾರತಕ್ಕೆ ಅಪಖ್ಯಾತಿ ತರಲು, ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ಭಾಗಿಯಾಗಿದ್ದಾರೆ’ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾದ ಬೆಂಗಳೂರು ಮೂಲದ ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ ಜಾಮೀನು ನೀಡಿತ್ತು.
ಜಾಮೀನು ಪಡೆಯಲು ದಿಶಾ ರವಿ ನ್ಯಾಯಾಲಯಕ್ಕೆ ₹ 1 ಲಕ್ಷ ಮೊತ್ತದ ಬಾಂಡ್ ಮತ್ತು ಅದೇ ಮೌಲ್ಯದ ಎರಡು ಶ್ಯೂರಿಟಿ ಸಲ್ಲಿಸಬೇಕು ಎಂದು ಕೋರ್ಟ್ ತಿಳಿಸಿದೆ. ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಐಪಿಸಿಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಧೀಶರು ಉಲ್ಲೇಖಿಸಿದ ಅಂಶಗಳೇನು? ಸಾಕ್ಷಿಗಳ ಕೊರತೆ ಮತ್ತು ಜಾಮೀನು ಮಂಜೂರು ಮಾಡದೇ ಇರಲು ಯಾವುದೇ ಕಟು ಸಾಕ್ಷ್ಯಗಳು ಕಾಣಿಸುತ್ತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ‘ಪ್ರಕರಣದ ತನಿಖೆಗೆ ಪೊಲೀಸರಿಗೆ ಸಹಕಾರ ನೀಡಬೇಕು. ಪೊಲೀಸರು ತಿಳಿಸಿದಾಗ ತನಿಖೆಗೆ ಹಾಜರಾಗಬೇಕು. ಕೋರ್ಟ್ನ ಅನುಮತಿ ಇಲ್ಲದೇ ಭಾರತವನ್ನು ತೊರೆದು ವಿದೇಶಕ್ಕೆ ತೆರಳಬಾರದು’ ಎಂದು ನ್ಯಾಯಾಧೀಶ ಧರ್ಮೇಂದರ್ ರಾಣಾ ತಮ್ಮ ತೀರ್ಪಿನಲ್ಲಿ ಹೇಳಿದರು.
ಬಂಧನದ ಹಿನ್ನೆಲೆ ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಸ್ಥೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವಿರುದ್ಧ ಅಲೆ ರೂಪಿಸಲು ಟೂಲ್ಕಿಟ್ ರಚಿಸಿದ ಆರೋಪದಡಿ ಅವರನ್ನು ದೆಹಲಿ ಪೊಲೀಸರು ಏಕಾಏಕಿ ಬೆಂಗಳೂರಿನಲ್ಲಿ ಫೆ.13ರಂದು ಬಂಧಿಸಿದ್ದರು.
ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ದಿಶಾ ರವಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ವಾಟ್ಸ್ಆ್ಯಪ್ ಚಾಟ್ ಡಿಲೀಟ್ ಮಾಡಿದ್ದಾರೆ. ಆಕೆಗೆ ಕಾನೂನು ಕ್ರಮಗಳ ಬಗ್ಗೆ ಅರಿವು ಇತ್ತು. ಈ ಟೂಲ್ ಕಿಟ್ ವಿನ್ಯಾಸಗೊಳಿಸಿರುವುದರ ಹಿಂದೆ ದುರುದ್ದೇಶವಿದೆ. ಭಾರತಕ್ಕೆ ಅಪಖ್ಯಾತಿ ತರುವುದಕ್ಕೆ ಮತ್ತು ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ದಿಶಾ ಭಾಗಿಯಾಗಿದ್ದಾರೆ. ಖಾಲಿಸ್ತಾನದ ಪರ ವಾದಿಸುವರೊಂದಿಗೆ ದಿಶಾ ರವಿ ಸಂಪರ್ಕ ಹೊಂದಿದ್ದು ಆಕೆ ಟೂಲ್ಕಿಟ್ ಸಿದ್ಧಪಡಿಸಿ ಶೇರ್ ಮಾಡಿದ್ದರು. ಆಕೆ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಸಾಕ್ಷ್ಯ ನಾಶ ಮಾಡಿದ್ದು ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದರು.
ದಿಶಾ ರವಿ ವಿಚಾರಣೆ ದಿಶಾ ರವಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಜನವರಿ 26ಕ್ಕೆ ಸಂಭವಿಸಿದ ಹಿಂಸಾಚಾರಕ್ಕೂ ಟೂಲ್ಕಿಟ್ಗೂ ಏನು ಸಂಬಂಧ ಇದೆ ಎಂಬುದನ್ನು ನೀವು ಪತ್ತೆ ಹಚ್ಚಿದ್ದೀರಿ ಎಂದು ನ್ಯಾಯಾಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರಲ್ಲಿ ಪ್ರಶ್ನಿಸಿತ್ತು.
ವಾಟ್ಸ್ಆ್ಯಪ್ ಚಾಟ್ ಡಿಲೀಟ್ ಮಾಡಿದ್ದಾರೆ. ಆಕೆಗೆ ಕಾನೂನು ಕ್ರಮಗಳ ಬಗ್ಗೆ ಅರಿವು ಇತ್ತು. ಈ ಟೂಲ್ ಕಿಟ್ ವಿನ್ಯಾಸಗೊಳಿಸಿರುವುದರ ಹಿಂದೆ ದುರುದ್ದೇಶವಿದೆ. ಭಾರತಕ್ಕೆ ಅಪಖ್ಯಾತಿ ತರುವುದಕ್ಕೆ ಮತ್ತು ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ದಿಶಾ ಭಾಗಿಯಾಗಿದ್ದಾರೆ. ಖಾಲಿಸ್ತಾನದ ಪರ ವಾದಿಸುವರೊಂದಿಗೆ ದಿಶಾ ರವಿ ಸಂಪರ್ಕ ಹೊಂದಿದ್ದು ಆಕೆ ಟೂಲ್ಕಿಟ್ ಸಿದ್ಧಪಡಿಸಿ ಶೇರ್ ಮಾಡಿದ್ದರು. ಆಕೆ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಸಾಕ್ಷ್ಯ ನಾಶ ಮಾಡಿದ್ದು ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದರು.
ದೇಶದ್ರೋಹದ ಆರೋಪ ಸಾವಿರಾರು ಮಂದಿಗೆ ದೆಹಲಿ ಪ್ರವೇಶಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ನಾನು 10 ಮಂದಿಯನ್ನು ಆಹ್ವಾನಿಸಿದರೆ ತಪ್ಪೇನು? ಸಂಯುಕ್ತ ಕಿಸಾನ್ ಮೋರ್ಚಾ ಪರೇಡ್ ಆಯೋಜಿಸಿತ್ತು, ಅವರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಾಗಿದೆಯೇ? ದೇಶದ್ರೋಹಿಗಳೊಂದಿಗ ಮಾತನಾಡಿದರೆ ನಾವು ದೇಶದ್ರೋಹಿಗಳಾಗುತ್ತೇವೆಯೇ? ಯಾವುದೇ ಒಂದು ವೇದಿಕೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹೇಳುವುದು ಅಪರಾಧವಲ್ಲ. ದೆಹಲಿ ಪೊಲೀಸರು ದಿಶಾ ಮೇಲೆ ಮಾಡಿರುವ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ದಿಶಾ ಅವರ ವಕೀಲರು ಹೇಳಿದ್ದಾರೆ.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | Sedition Case- ದಿಶಾ ರವಿ ಕೇಸ್ನ್ನು ಬೇರೆ ತರಹ ನೋಡಲು ಸಾಧ್ಯವೇ?
Fact Check: ಆಕೆಯ ಹೆಸರು ದಿಶಾ ರವಿ, ದಿಶಾ ರವಿ ಜೋಸೆಫ್ ಅಲ್ಲ
Published On - 3:17 pm, Sun, 14 March 21