AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meet Yuvraj Gupta: ಭಾರತದ ಪುಟ್ಟ ಹಳ್ಳಿಯ ಬಾಲಕನ ಸಾಧನೆಗೆ ನಾಸಾ ಮೆಚ್ಚುಗೆ: ಈತ ಮಾಡಿದ ಸಾಧನೆ ಅಂತಿಂತದ್ದಲ್ಲ

ಕಾನ್ಪುರದ 16 ವರ್ಷದ ಯುವರಾಜ್ ಗುಪ್ತಾ ನಾಸಾದ ವೆಬ್‌ಸೈಟ್‌ನಲ್ಲಿ ಗಂಭೀರ ಭದ್ರತಾ ದೋಷವನ್ನು ಪತ್ತೆಹಚ್ಚಿದ್ದಾನೆ. ಈ ಸಾಧನೆಗಾಗಿ ನಾಸಾ ಆತನನ್ನು 'ಹಾಲ್ ಆಫ್ ಫೇಮ್'ನಲ್ಲಿ ಗೌರವಿಸಿದೆ. ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ಯುವರಾಜ್ 6ನೇ ತರಗತಿಯಲ್ಲಿದ್ದಾಗಿನಿಂದಲೂ ಸೈಬರ್ ಭದ್ರತೆಯಲ್ಲಿ ಆಸಕ್ತಿ ಹೊಂದಿದ್ದ. ಕಾಲಕ್ರಮೇಣ ಆತ ಈ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ.

Meet Yuvraj Gupta: ಭಾರತದ ಪುಟ್ಟ ಹಳ್ಳಿಯ ಬಾಲಕನ ಸಾಧನೆಗೆ ನಾಸಾ ಮೆಚ್ಚುಗೆ: ಈತ ಮಾಡಿದ ಸಾಧನೆ ಅಂತಿಂತದ್ದಲ್ಲ
Meet Yuvraj Gupta
Follow us
ಅಕ್ಷತಾ ವರ್ಕಾಡಿ
|

Updated on:May 25, 2025 | 4:17 PM

ಕಾನ್ಪುರದ 11 ನೇ ತರಗತಿ ವಿದ್ಯಾರ್ಥಿ ಯುವರಾಜ್ ಗುಪ್ತಾಗೆ (16) ರಾಷ್ಟ್ರೀಯ ವಾಯುಯಾನ ಮತ್ತು ಬಾಹ್ಯಾಕಾಶ ಆಡಳಿತ (NASA) ಸಂಸ್ಥೆ ಹಾಲ್ ಆಫ್ ಫೇಮ್’ನಲ್ಲಿ ಸ್ಥಾನ ನೀಡಿ ಗೌರವಿಸಿದೆ. ಅನೇಕ ಪರಿಣಿತ ಸೈಬರ್ ತಜ್ಞರಿಗೆ ಸಾಧ್ಯವಾಗದೇ ಇರುವುದನ್ನು ಯುವರಾಜ್ ಪತ್ತೆ ಹಚ್ಚಿದ್ದು ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಈ ಪುಟ್ಟ ಬಾಲಕ ನಾಸಾ ವೆಬ್‌ಸೈಟ್‌ನಲ್ಲಿ ಗಂಭೀರ ಭದ್ರತಾ ದೋಷವನ್ನು ಕಂಡುಹಿಡಿದಿದ್ದಾನೆ. ಇದರ ಮೂಲಕ, ನಾಸಾದ ಅಧಿಕೃತ ಇ-ಮೇಲ್‌ ಐಡಿ ಹ್ಯಾಕ್ ಮಾಡದಂತೆ ಅಂದರೆ ​ಯಾರೂ ಬೇಕಾದರೂ ನಾಸಾದ ಇ-ಮೇಲ್‌ ಬಳಸಿ ನಕಲಿ ಸಂದೇಶಗಳನ್ನು ಕಳುಹಿಸಿದಂತೆ ಹೊಸ ಟ್ರಿಕ್ಸ್​​ ಕಂಡು ಹಿಡಿದಿದ್ದಾನೆ.

ಯುವರಾಜ್ ಗುಪ್ತಾ ಯಾರು?

ಯುವರಾಜ್ ಸರಸ್ವತಿ ವಿದ್ಯಾ ಮಂದಿರ ಇಂಟರ್ ಕಾಲೇಜಿನಲ್ಲಿ (ದಾಮೋದರ್ ನಗರ) 11ನೇ ತರಗಿತಿಯಲ್ಲಿ ಓದುತ್ತಿದ್ದಾನೆ. ಬಡ ಕುಟುಂಬದಲ್ಲಿ ಜನಿಸಿದರೂ ಈತ 10 ನೇ ತರಗತಿಯಲ್ಲಿ ಶೇ. 79.4 ಅಂಕಗಳನ್ನು ಗಳಿಸಿದ್ದಾನೆ. ಸೀಮಿತ ಸಂಪನ್ಮೂಲಗಳ ಹೊರತಾಗಿಯೂ, ಅವನು ಯೂಟ್ಯೂಬ್, ಆನ್‌ಲೈನ್ ಕೋರ್ಸ್‌ಗಳು ಮತ್ತು ಪುಸ್ತಕಗಳ ಮೂಲಕ ಹ್ಯಾಕಿಂಗ್ ಕಲಿತಿದ್ದ ಯುವರಾಜ್​​​. ಇತ್ತೀಚಿಗೆ ನಾಸಾದ ಬಗ್ ಬೌಂಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈತ, ನಾಸಾ ಹೆಸರಿನಲ್ಲಿ ನಕಲಿ ಇಮೇಲ್‌ಗಳನ್ನು ಕಳುಹಿಸಲು ಅವಕಾಶ ನೀಡುವ ದೋಷವನ್ನು ಪತ್ತೆ ಹಚ್ಚಿದ್ದಾನೆ.

ಸುಮಾರು ಎರಡು ವಾರಗಳ ಕಾಲ ನಿರಂತರವಾಗಿ ಪ್ರಯತ್ನದ ಬಳಿಕ ಯುವರಾಜ್​​​ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ, ವಿಡಿಯೋ ಜೊತೆಗೆ ನಾಸಾಗೆ ಕಳುಹಿಸಿದ್ದ. ಇಷ್ಟು ಮಾತ್ರವಲ್ಲದೆ, ಗೌಪ್ಯ ಮಾಹಿತಿಯನ್ನು ಪಡೆಯುವ ನಕಲಿ ಇಮೇಲ್‌ಗಳು ಮತ್ತು ದೋಷಗಳ ಬಗ್ಗೆಯೂ ಅವನಿಗೆ ಮಾಹಿತಿ ಸಿಕ್ಕಿತು. ಇದೀಗ ಭಾರತದ ಪುಟ್ಟ ಬಾಲಕನ ಸಾಧನೆಗೆ ನಾಸಾ ಭಾರೀ ಶ್ಲಾಘನೆ ವ್ಯಕ್ತಪಡಿಸಿದೆ.

ವೈ-ಫೈ ಹ್ಯಾಕ್ ಮಾಡುವುದರಿಂದ ಹಿಡಿದು ಪೊಲೀಸರಿಗೆ ತರಬೇತಿ ನೀಡುವವರೆಗೆ:

ಯುವರಾಜ್ 6ನೇ ತರಗತಿಯಲ್ಲಿದ್ದಾಗಿನಿಂದಲೂ ವೈ-ಫೈ ಪಾಸ್‌ವರ್ಡ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದಾಗಿನಿಂದ ಸೈಬರ್ ಭದ್ರತೆಯಲ್ಲಿ ಆಸಕ್ತಿ ಹೊಂದಿದ್ದ. ಕಾಲಕ್ರಮೇಣ ಆತ ಈ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ. 2024 ರಲ್ಲಿ, ಈತ ಸಾಮಾಜಿಕ ಮಾಧ್ಯಮದ ಮೂಲಕ ಸೈಬರ್ ಭದ್ರತಾ ಕಂಪನಿಯ ಸಂಸ್ಥಾಪಕರೊಂದಿಗೆ ಸಂಪರ್ಕ ಸಾಧಿಸಿದ್ದಾನೆ. ಜೊತೆಗೆ ಸೈಬರ್ ಅಪರಾಧಗಳನ್ನು ಎದುರಿಸಲು ದೇಶಾದ್ಯಂತ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಅವಕಾಶವನ್ನು ಪಡೆದಿದ್ದಾನೆ.

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ 300 ಪುರುಷ ಸೈನಿಕರೊಂದಿಗೆ 17 ಮಹಿಳಾ ಕೆಡೆಟ್‌ಗಳಿಗೆ ಪದವಿ

ಕುಟುಂಬದ ಬೆಂಬಲ:

ಆರ್ಥಿಕ ತೊಂದರೆಗಳಿದ್ದರೂ, ಯುವರಾಜ್ ಕುಟುಂಬ ಮಗನ ಸಾಧನೆಗೆ ಸದಾ ಬೆಂಬಲ ನೀಡುತ್ತಾ ಬಂದಿದೆ. ತನ್ನ ಸಹೋದರಿಯ ವಿದ್ಯಾರ್ಥಿವೇತನ ಮತ್ತು ತಂದೆಯ ಸಹಾಯದಿಂದ, ಆತ ಲ್ಯಾಪ್‌ಟಾಪ್ ಖರೀದಿಸಿದ್ದ, ಅದರೊಂದಿಗೆ ತನ್ನ ಕೌಶಲ್ಯಗಳನ್ನು ಹೆಚ್ಚಿಸಿಕೊಂಡಿದ್ದನು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Sun, 25 May 25