Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunita Williams: ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಮುಟ್ಟಾದರೆ ಏನು ಮಾಡುತ್ತಾರೆ ಗೊತ್ತಾ?

ಗಗನಯಾತ್ರಿಗಳ ಜೀವನ ಸುಲಭವಲ್ಲ, ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಸುನೀತಾ ವಿಲಿಯಮ್ಸ್ ಕೂಡ ಅನಿರೀಕ್ಷಿತವಾಗಿ ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯಬೇಕಾಯಿತು. ಇಂತಹ ಸಂದರ್ಭಗಳಲ್ಲಿ ಅವರು ಸವಾಲುಗಳನ್ನು ಹೇಗೆ ಎದುರಿಸಬೇಕಾಗುತ್ತೆ? ಸುನೀತಾ ವಿಲಿಯಮ್ಸ್ ಮಾತ್ರವಲ್ಲ ಈ ರೀತಿ ಬಾಹ್ಯಾಕಾಶಕ್ಕೆ ಹೋಗಿರುವಂತಹ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಯಾವ ರೀತಿ ನಿರ್ವಹಿಸುತ್ತಾರೆ? ಅಲ್ಲಿ ಮುಟ್ಟಾದಾಗ ಅಥವಾ ಋತುಚಕ್ರ (periods) ದ ದಿನಗಳನ್ನು ಯಾವ ರೀತಿ ಎದುರಿಸುತ್ತಾರೆ? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Sunita Williams: ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಮುಟ್ಟಾದರೆ ಏನು ಮಾಡುತ್ತಾರೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 20, 2025 | 5:02 PM

ಬಾಹ್ಯಾಕಾಶ (Space) ದಲ್ಲಿ ಒಂಬತ್ತು ತಿಂಗಳು ಕಳೆದ ನಂತರ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬ್ಯಾರಿ ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ. ಅವರು 9 ತಿಂಗಳು, 13 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಅಷ್ಟಕ್ಕೂ ಗಗನಯಾತ್ರಿಗಳ ಜೀವನ ಸುಲಭವಲ್ಲ, ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಸುನೀತಾ ವಿಲಿಯಮ್ಸ್ ಕೂಡ ಅನಿರೀಕ್ಷಿತವಾಗಿ ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯಬೇಕಾಯಿತು. ಇಂತಹ ಸಂದರ್ಭಗಳಲ್ಲಿ ಅವರು ಸವಾಲುಗಳನ್ನು ಹೇಗೆ ಎದುರಿಸಬೇಕಾಗುತ್ತೆ? ಸುನೀತಾ ವಿಲಿಯಮ್ಸ್ ಮಾತ್ರವಲ್ಲ ಈ ರೀತಿ ಬಾಹ್ಯಾಕಾಶಕ್ಕೆ ಹೋಗಿರುವಂತಹ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಯಾವ ರೀತಿ ನಿರ್ವಹಿಸುತ್ತಾರೆ? ಅಲ್ಲಿ ಮುಟ್ಟಾದಾಗ ಅಥವಾ ಋತುಚಕ್ರ (periods) ದ ದಿನಗಳನ್ನು ಯಾವ ರೀತಿ ಎದುರಿಸುತ್ತಾರೆ? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಮಹಿಳೆಯರು ಪ್ರತಿ ತಿಂಗಳು ಋತುಚಕ್ರದ ಸಮಸ್ಯೆಯನ್ನು ಎದುರಿಸುತ್ತಾರೆ ಇದರಿಂದ ಮಹಿಳಾ ಗಗನಯಾತ್ರಿಗಳು ಹೊರತಾಗಿಲ್ಲ. ಆದರೆ ಬಾಹ್ಯಾಕಾಶದಲ್ಲಿ ಒಂದು ಹನಿ ನೀರು ಸಹ ಗಾಳಿಯಲ್ಲಿ ತೇಲುತ್ತಿರುವಂತೆ ತೋರುವಾಗ, ಮುಟ್ಟಿನ ಸಮಯದಲ್ಲಿ ದೇಹದಿಂದ ಹರಿಯುವ ರಕ್ತಕ್ಕೆ ಏನಾಗುತ್ತದೆ? ಶೂನ್ಯ ಗುರುತ್ವಾಕರ್ಷಣೆಯಲ್ಲಿ ಋತುಚಕ್ರವನ್ನು ಹೇಗೆ ನಿರ್ವಹಿಸಲಾಗುತ್ತದೆ? ಎಂಬ ಪ್ರಶ್ನೆ ಮೂಡುವುದು ಸಹಜ. ಇಂತಹ ಅನುಮಾನಗಳಿಗೆ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ ಮಹಿಳಾ ಗಗನಯಾತ್ರಿ ರಿಯಾ ಮಾಧ್ಯಮ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ಆ ಮಾಹಿತಿಯನ್ನಾಧರಿಸಿ ಟೈಮ್ಸ್ ಆಫ್ ಇಂಡಿಯಾ ಇಂತಹ ಕುತೂಹಲಕಾರಿ ವಿಷಯಗಳಿಗೆ ಉತ್ತರ ನೀಡಿದೆ.

ಋತುಚಕ್ರ ಸಮಸ್ಯೆಗೆ ಎರಡು ಆಯ್ಕೆ!

ವ್ಯಾಲೆಂಟಿನಾ ಟೆರೆಶ್ಕೋವಾ ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳೆ. ಅವರು 1963 ರಲ್ಲಿ ತಮ್ಮ ಮೊದಲ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶಕ್ಕೆ ಹೋದರು. ಅಂದಿನಿಂದ, 99 ಮಹಿಳೆಯರು ವಿವಿಧ ಕಾರ್ಯಾಚರಣೆಗಳಿಗೆ ಬಾಹ್ಯಾಕಾಶಕ್ಕೆ ಹೋಗಿದ್ದಾರೆ. ಈ ರೀತಿ ಹೋಗುವ ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಎರಡು ಆಯ್ಕೆಗಳು ಇರುತ್ತವೆ. ಮೊದಲನೆಯದು ಬಾಹ್ಯಾಕಾಶದಲ್ಲಿ ಋತುಚಕ್ರ ಆಗಲು ಬಿಡುವಂತದ್ದು. ಅಂದರೆ ಭೂಮಿಯ ಮೇಲೆ ಹೇಗೆ ಋತುಚಕ್ರ ಆದಾಗ ಯಾವ ರೀತಿ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಗಳನ್ನು ಬಳಕೆ ಮಾಡುವಂತೆ ಅಲ್ಲಿಯೂ ಮಾಡಬಹುದು. ಆದರೆ ಸೀಮಿತ ನೀರಿನ ಲಭ್ಯತೆ, ಸೀಮಿತ ಶೇಖರಣೆಯಿಂದಾಗಿ ತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ.

ಇದನ್ನೂ ಓದಿ
Image
ಕರಬೂಜ ಹಣ್ಣನ್ನು ಈ ಆರೋಗ್ಯ ಸಮಸ್ಯೆಗಳಿರುವವರು ಸೇವನೆ ಮಾಡಬೇಡಿ
Image
ಬೇಸಿಗೆಯಲ್ಲಿ ಸಿಗುವ ಈ ಹಣ್ಣನ್ನು ತಪ್ಪದೆ ಸೇವನೆ ಮಾಡಿ
Image
ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಸೇವನೆ ಅಪಾಯಕಾರಿ! ಅಧ್ಯಯನದಿಂದ ಬಹಿರಂಗ
Image
ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಅವರ ಆಹಾರ ಹೇಗಿತ್ತು ಗೊತ್ತಾ?

ಇದನ್ನೂ ಓದಿ: ಚಿನ್ನದ ಆಭರಣಗಳನ್ನು ಧರಿಸಿ, ಈ ರೋಗಗಳಿಂದ ದೂರವಿರಿ

ಎರಡನೇ ವಿಧಾನ, ಹಾರ್ಮೋನುಗಳ ಗರ್ಭನಿರೋಧಕಗಳನ್ನು ಅಂದರೆ ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುವ ಮೂಲಕ ಅವರು ಋತುಚಕ್ರವನ್ನು ತಪ್ಪಿಸಬಹುದು. ಈ ಮಾತ್ರೆಗಳು ಈಸ್ಟ್ರೊಜೆನ್ ಅನ್ನು ಹೊಂದಿರುತ್ತವೆ, ಇದು ಋತುಚಕ್ರವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ, ಆದರೆ ಬಾಹ್ಯಾಕಾಶದಲ್ಲಿದ್ದಾಗ, ಪ್ರತಿದಿನ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಆಯ್ಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ. ಈ ವಿಧಾನ ಮಹಿಳೆಯರಿಗೆ ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ. ಆದರೆ ಮಿಷನ್ ಅವಧಿ ಮತ್ತು ಆರೋಗ್ಯದಂತಹ ಕೆಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡ ಬಳಿಕ, ಈ ಆಯ್ಕೆ ಮಾಡುವ ನಿರ್ಧಾರ ಸಂಪೂರ್ಣ ವೈಯಕ್ತಿಕವಾಗಿರುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Thu, 20 March 25

ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ